ನಿರ್ಮಾಪಕನೆಂದು ಹೇಳಿಕೊಂಡು ಯುವತಿಯರಿಗೆ ವಂಚನೆ !  

Kannada News

05-06-2017

ಬೆಂಗಳೂರು:- ಸಿನಿಮಾದಲ್ಲಿ ಅಭಿನಯಿಸಲು ಅವಕಾಶ ಮಾಡಿಕೊಡುವುದಾಗಿ ಹೇಳಿ ನಕಲಿ ನಿರ್ಮಾಪಕನೊಬ್ಬ ಯುವತಿಯರನ್ನು ಪುಣೆಗೆ ಕರೆದೊಯ್ದು ವಂಚನೆ ನಡೆಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ರಾಮಾ ಶಾಮಾ ಭಾಮಾ, ಹೃದಯವಂತ, ರಾಜಾಹುಲಿ ಅಂತ ಸದಭಿರುಚಿ ಸಿನಿಮಾಗಳನ್ನ ಕನ್ನಡ ಸಿನಿರಸಿಕರಿಗೆ ಕೊಟ್ಟ ನಿರ್ಮಾಪಕ ಕೆ. ಮಂಜು ಅವರ ಹೆಸರನ್ನ ನಕಲಿ ನಿರ್ಮಾಪಕ ಬಳಸಿದ್ದಾನೆ. ನಾನು ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕನಾಗಿದ್ದು 40 ಸಿನಿಮಾಗಳ ನಿರ್ಮಾಣ ಮಾಡಿದ್ದೇನೆ. ಹೊಸ ಸಿನಿಮಾದಲ್ಲಿ ಅಭಿನಯಿಸಲು ನಾಯಕಿಯರು ಬೇಕಾಗಿದ್ದಾರೆ ಎಂದು ಹೇಳಿ ಪುಣೆಯಲ್ಲಿ ಆಡಿಷನ್ ಮಾಡಿದ್ದ. ಇಲ್ಲಿ ಕೆಲ ಹುಡುಗಿಯರನ್ನು ಆಯ್ಕೆ ಮಾಡಿ ಹೈದರಾಬಾದ್‍ಗೆ ಜೊತೆಯಲ್ಲಿ ಕರೆದುಕೊಂಡು ಬಂದು ಅಲ್ಲಿಂದ ಬೆಂಗಳೂರಿಗೆ ಕರೆ ತಂದಿದ್ದಾನೆ. ನಗರದ ಖಾಸಗಿ ಹೋಟೆಲ್‍ನಲ್ಲಿ ವಸತಿ ವ್ಯವಸ್ಥೆ ಮಾಡಿಕೊಟ್ಟ ಬಳಿಕ ಈತ ಸಿನಿಮಾದಲ್ಲಿ ಎಲ್ಲದಕ್ಕೂ ಸಿದ್ಧವಾಗಿರಬೇಕು, ಮದ್ಯಪಾನ ಮಾಡ್ಬೇಕು. ತುಂಡು ಬಟ್ಟೆ ಹಾಕಬೇಕು ಅಂತ ಪುಸಲಾಯಿಸಿದ್ದಾನೆ.2-3 ದಿನ ನಗರದಲ್ಲಿ ಇರಿಸಿಕೊಂಡು ವಾಪಸ್ ಕಳುಹಿಸಿದ್ದಾನೆ. ಆಡಿಷನ್ ನಡೆದ ಮೇಲೆ ಆತನಿಂದ ಯಾವುದೇ ಕರೆ ಬರದ ಹಿನ್ನೆಲೆಯಲ್ಲಿ ಆತನಿಂದ ಮೋಸ ಹೋದ ಯುವತಿ, ಸ್ಯಾಂಡಲ್‍ವುಡ್ ನಿರ್ದೇಶಕನಾಗಿರುವ  ಕೆ ಮಂಜು ಅವರ ನಂಬರ್ ಪತ್ತೆ ಮಾಡಿ ವಿಚಾರ ತಿಳಿಸಿದ್ದಾರೆ. ಈ ವೇಳೆ ಅವರು ನಾನು ಯಾವುದೇ ರೀತಿಯ ಆಡಿಷನ್ ಮಾಡಿಲ್ಲ. ನನಗೆ ಗೊತ್ತೆ ಇಲ್ಲ ಎಂದು ಹೇಳಿದ್ದಾರೆ. ಇದಾದ ಬಳಿಕ ನಕಲಿ ನಿರ್ಮಾಪಕ ಮಂಜುನಾಥ್‍ಗೆ ಕೆ ಮಂಜು ಅವರು ಕರೆ ಮಾಡಿದಾಗ, ಸರ್ ನಮ್ಮ ಸಂಬಂಧಿಕರ ಸಾವಾಗಿದೆ ಆಮೇಲೆ ಮಾತಾಡ್ತಿನಿ ಅಂತ ಹೇಳಿದ್ದಾನೆ. ಇದಾದ ಬಳಿಕ ಯಾವುದೇ ಕರೆ ಬಂದಿಲ್ಲ ಎಂದು ಅವರು ತಿಳಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ