ಶತಮಾನದ ಸಂತ ಸ್ವರ್ಗಸ್ಥ. ನಡೆದಾಡುವ ದೇವರು ಇನ್ನಿಲ್ಲ!

Siddaganga Shree Passed away

21-01-2019

ಅನ್ನದಾಸೋಹ,ಜ್ಞಾನದಾಸೋಹದ ಮೂಲಕ ನಡೆದಾಡುವ ದೇವರೆಂದೆ ಖ್ಯಾತಿ ಪಡೆದಿದ್ದ ತುಮಕೂರು ಸಿದ್ಧಗಂಗೆಯ ಶ್ರೀಸಿದ್ಧಗಂಗಾಶ್ರೀಗಳು ಇಹಲೋಕ ತ್ಯಜಿಸಿದ್ದಾರೆ. ಸಿದ್ಧಗಂಗಾಶ್ರೀಗಳಿಗೆ 111 ವರ್ಷ ವಯಸ್ಸಾಗಿತ್ತು. ಇಂದು ಮಧ್ಯಾಹ್ನ 11.44 ರ ವೇಳೆಗೆ ಸಿದ್ಧಗಂಗಾಶ್ರೀಗಳು ಉಸಿರಾಟದ ತೊಂದರೆಯಿಂದ ಶಿವೈಕ್ಯರಾಗಿದ್ದು, ಕಳೆದ ಒಂದೂವರೆ ತಿಂಗಳಿನಿಂದ ಅನಾರೋಗ್ಯದ ಹಿನ್ನೆಲೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. 

ಸಿದ್ಧಗಂಗಾ ಮಠ ಈ ಕುರಿತು ಅಧಿಕೃತ ಪ್ರಕಟಣೆ ಹೊರಡಿಸಿದ್ದು, ನಾಳೆ ಸಂಜೆ 4.30 ರ ವೇಳೆಗೆ ಅಂತ್ಯಸಂಸ್ಕಾರ ನಡೆಸಲು ನಿರ್ಧರಿಸಿದೆ. ಸಿಎಂ ಕುಮಾರಸ್ವಾಮಿ ಮಾಧ್ಯಮದವರಿಗೆ ವಿಷಯವನ್ನು ಖಚಿತಪಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ದೇಶದ ವಿವಿಧೆಡೆಯಿಂದ ಗಣ್ಯರ ಸ್ವಾಮೀಜಿಯವರ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳಲಿದ್ದಾರೆ. 

ಶ್ವಾಸಕೋಶದ ಸೋಂಕು ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಶ್ರೀಗಳಿಗೆ ಚೈನೈನಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಚೇತರಿಸಿಕೊಂಡ ಬಳಿಕ ಶ್ರೀಗಳು ಮಠಕ್ಕೆ ಮರಳಿದ್ದರು. ಆದರೆ ಕೆಲ ದಿನಗಳ ಹಿಂದೆ ಮತ್ತೆ ಅನಾರೋಗ್ಯ ಮರುಕಳಿಸಿದ್ದರಿಂದ ಶ್ರೀಗಳನ್ನು ತುಮಕೂರಿನ ಸಿದ್ಧಗಂಗಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ನಾಲ್ಕೈದು ದಿನಗಳ ಹಿಂದೆ ಶ್ರೀಗಳ ಒತ್ತಾಯದ ಮೇರೆ ಅವರನ್ನು ಹಳೆಮಠಕ್ಕೆ ಕರೆತಂದು ಚಿಕಿತ್ಸೆ ಮುಂದುವರಿಸಲಾಗಿತ್ತು. ಇಂದು ಮಧ್ಯಾಹ್ನ 11.44 ರ ವೇಳೆಗೆ ಶ್ರೀಗಳು ಲಿಂಗೈಕ್ಯರಾಗಿದ್ದು, ಕರ್ನಾಟಕವೇ ಶೋಕದಲ್ಲಿ ಮುಳುಗಿದೆ. 


ಸಂಬಂಧಿತ ಟ್ಯಾಗ್ಗಳು

#Siddaganga Shree #Walking God #Passed away #Tumkur


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ