ಸಿದ್ಧು ವಿರುದ್ಧ ಬಿಜೆಪಿ ಟ್ವಿಟ್ ವಾರ್

 Siddhu against BJP Twit War

21-01-2019

ಆಡಳಿತಾರೂಢ ಸಮ್ಮಿಶ್ರ ಸರ್ಕಾರದ ನಾಯಕರು ಹಾಗೂ ಬಿಜೆಪಿ ನಡುವೆ ಟ್ವೀಟ್ ಸಮರ ತೀವ್ರಗೊಂಡಿದ್ದು, ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ನಾಯಕರು ಹತಾಶ ಪ್ರಯತ್ನ ನಡೆಸುತ್ತಿದ್ದಾರೆಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ  ಬಿಜೆಪಿ ನಾಯಕರ ವಿರುದ್ಧ ಮಾಡಿರುವ ಟೀಕೆಗೆ  ಬಿಜೆಪಿ ಖಾರವಾಗಿ ಪ್ರತಿಕ್ರಿಯಿಸಿದೆ.

ಸರ್ಕಾರಿ ಸೌಲಭ್ಯಗಳನ್ನು ಅನುಭವಿಸುತ್ತಾ ಇತರರು ನೀಡುವ ಕೊಡಗೆ-ಉಡುಗೊರೆಗಳನ್ನು ಆನಂದಿಸುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತನ್ನ ಪಕ್ಷದ ನಾಯಕರನ್ನು ಟೀಕಿಸುವ ನೈತಿಕ ಹಕ್ಕಿಲ್ಲ ಎಂದು ಬಿಜೆಪಿ ತಿರುಗೇಟು ನೀಡಿದೆ.

ಸಿದ್ದರಾಮಯ್ಯ ಅವರು ಧರಿಸುವ ಬೆಲೆಬಾಳುವ ಕೈಗಡಿಯಾರವನ್ನು ಯಾರೋ ನೀಡಿದ್ದಾರೆ. ಅವರು ಓಡಾಡುವ ಕಾರು ಸಹ ಬೇರೊಬ್ಬರು ಕೊಟ್ಟಿದ್ದಾರೆ. ಸಿದ್ದರಾಮಯ್ಯ ವಾಸ್ತವ್ಯವಿರುವ ಮನೆ ಸಹ ಸಚಿವರೊಬ್ಬರಿಗೆ ಸೇರಿದೆ. ಇನ್ನು ವಿಧಾನಸೌಧದಲ್ಲಿ ಅವರಿಗೆ ನೀಡಿರುವ ಕಚೇರಿ ಸಹ ಕಾನೂನು ಬಾಹಿರವಾಗಿದೆ. ಹೀಗಿದ್ದೂ ಸಮಾಜವಾದಿಯಂತೆ, ಸತ್ಯ-ನಿಷ್ಠೆಗೆ ಬದ್ಧವಾಗಿರುವಂತೆ ಸಿದ್ದರಾಮಯ್ಯ ಅವರು ಬಿಜೆಪಿ ನಾಯಕರನ್ನು ನಿಂದಿಸುತ್ತಿರುವುದು ನಾಚಿಕೆಗೇಡು ಎಂದು ಬಿಜೆಪಿ ಟ್ವೀಟ್ ಮಾಡಿದೆ.


ಸಂಬಂಧಿತ ಟ್ಯಾಗ್ಗಳು

#Siddaramayya #Twitter #Bjp #War


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ