ಒಟ್ಟಾಗಿ ತೆರೆ ಮೇಲೆ ಬರಲಿದ್ದಾರೆ ಸಲ್ಮಾನ್ ಖಾನ್ - ಸುದೀಪ

 Sudeep and Salman Khan  Acting Together.

21-01-2019

ಅಭಿನಯ ಚಕ್ರವರ್ತಿ ಖ್ಯಾತಿಯ ಸುದೀಪ್‍ತ ಬಹುನೀರಿಕ್ಷಿತ ಚಿತ್ರ ಪೈಲ್ವಾನ್ ಟೀಸರ್ ಬಿಡುಗಡೆಯಾಗಿದ್ದು, ಸ್ಯಾಂಡಲವುಡ್ ಸೇರಿದಂತೆ ಎಲ್ಲಡೆ ಮೆಚ್ಚುಗೆಗೆ ಪಾತ್ರವಾಗಿದೆ. ಖುದ್ದು ಬಾಲಿವುಡ್ ಸುಲ್ತಾನ್ ಸಲ್ಮಾನ್ ಖಾನ್ ಕೂಡ ಚಿತ್ರದ ಟೀಸರ್ ವೀಕ್ಷಿಸಿ ಟ್ವಿಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೇ ಖುಷಿಯಲ್ಲಿರುವ ಸುದೀಪ ಅಭಿಮಾನಿಗಳಿಗೆ ಇದೀಗ ಇನ್ನೊಂದು ಸಂತೋಷದ ಸುದ್ದಿ ಕಾದಿದೆ. ಅದೇನು ಅಂದ್ರಾ ಸುದೀಪ್ ಮತ್ತು ಸಲ್ಮಾನ್ ಖಾನ್ ಒಂದೇ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 

ಸಲ್ಮಾನ್ ಖಾನ್ ನಟನೆಯ ಬಾಲಿವುಡ್‍ನಲ್ಲಿ ಮತ್ತೆ ಸಂಚಲನ ಮೂಡಿಸುವ ಭರವಸೆ ಹುಟ್ಟಿಸಿರುವ ದಬಾಂಗ್-3  ಚಿತ್ರದಲ್ಲಿ ಸುದೀಪ್ ಸಲ್ಮಾನ್ ಖಾನ್ ಜೊತೆ ನಟಿಸಲಿದ್ದಾರೆ.  ಆ ಮೂಲಕ ಸಲ್ಮಾನ್ ಖಾನ್ ಮತ್ತು ಸುದೀಪರನ್ನು ಒಟ್ಟಿಗೆ ನೋಡಬೇಕೆನ್ನುವ ಅಭಿಮಾನಿಗಳ ಕನಸು ನನಸಾಗಲಿದೆ. ಈ ಚಿತ್ರದಲ್ಲಿ ಸುದೀಪ್ ಗ್ರೇ ಶೇಡ್ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗಿದ್ದು, ಟಾಮ್ ಮತ್ತು ಜೆರ್ರಿಯನ್ನು ಹೋಲುವ ರೀತಿಯ ಪಾತ್ರದಲ್ಲಿ ಸುದೀಪ್-ಸಲ್ಮಾನ್ ಖಾನ್  ಪ್ರೇಕ್ಷಕರನ್ನು ರಂಜಿಸಲಿದ್ದಾರೆ. 

ಈ ಹಿಂದೆ ಕೂಡ ಹಲವು ಬಾಲಿವುಡ್ ಚಿತ್ರದಲ್ಲಿ ಸುದೀಪ್ ನಟಿಸಿದ್ದು, ಸಲ್ಮಾನ್ ಖಾನ್ ಜೊತೆ ಇದು  ಮೊದಲ ಪ್ರಯತ್ನವಾಗಿದೆ. ಪ್ರಭುದೇವ ಈ ಚಿತ್ರವನ್ನು ನಿರ್ದೇಶನ ಮಾಡಲಿದ್ದು, ಕತೆ ಕೇಳಿರುವ ಕಿಚ್ಚ ಚಿತ್ರಕ್ಕೆ ಒಪ್ಪಿಗೆ  ನೀಡಬೇಕಿದ್ದು, ಸಧ್ಯ ಚಿತ್ರದಲ್ಲಿ ನಟಿಸಲು ಮೌಖಿಕವಾಗಿ ಸುದೀಪ್ ಒಪ್ಪಿಕೊಂಡಿದ್ದಾರೆ. ಈ ಚಿತ್ರದಲ್ಲಿ ಸಲ್ಮಾನ್ ಖಾನ್ ಮತ್ತೆ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಸುದೀಪ ಯಾವ ಪಾತ್ರ ನಿರ್ವಹಿಸುತ್ತಾರೆ ಕಾದು ನೋಡಬೇಕಿದೆ. ಚಿತ್ರಕ್ಕೆ 90 ರಿಂದ 100 ಗಳ ಕಾಲ ಚಿತ್ರೀಕರಣ ನಡೆಯಲಿದ್ದು, ಸುದೀಪ್- ಸಲ್ಮಾನ್ ಒಟ್ಟಿಗೆ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. 


ಸಂಬಂಧಿತ ಟ್ಯಾಗ್ಗಳು

#Dabang-3 #Salman Khan #Movie #Sudeep


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ