ಅತೃಪ್ತರ ನಡೆ ನಿಗೂಢ- ಮುಂಬಯಿಯಲ್ಲಿ ಬೆಂಬಲಿಗರನ್ನುಸೇರಿಕೊಂಡ ನಾಗೇಂದ್ರ?

 Mla Nagendra joined supporters in Mumbai

19-01-2019

ರಾಜ್ಯ ಕಾಂಗ್ರೆಸ್ ನಾಯಕರಿಗೆ ಎರಡು ದಿನ ಕಾಲಾವಕಾಶಕೋರಿರುವ ಶಾಸಕ ಬಿ. ನಾಗೇಂದ್ರ ಮತ್ತೆ ಮುಂಬಯಿ ಸೇರಿದ್ದಾರೆ ಎಂಬ ಮಾಹಿತಿ ಇದೆ.ಜ.17ರಂದು ನಗರ ಸಿವಿಲ್ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗಿದ್ದ ಅವರು ನಿನ್ನೆ ನಡೆದ ಶಾಸಕಾಂಗ ಪಕ್ಷದ ಸಭೆಗೆ ಹಾಜರಾಗಿರಲಿಲ್ಲ. ನ್ಯಾಯಾಲಯ ವಿಚಾರಣೆಯಲ್ಲಿ ಹಾಜರಾಗಬೇಕಿರುವ ಕಾರಣ ಎರಡು ದಿನ ಕಾಲಾವಕಾಶ ಕೇಳಿದ್ದರು. ನ್ಯಾಯಾಲಯಕ್ಕೆ ಕೂಡ ಶಾಸಕಾಂಗ ಪಕ್ಷದ ಸಭೆಯಲ್ಲಿ ಪಾಲ್ಗೊಳ್ಳುವ ಕಾರಣ ವಿಚಾರಣೆಗೆ ವಿನಾಯಿತಿ ಕೋರಿ ಸಮ್ಮತಿ ಪಡೆದಿದ್ದರು. ಆದರೆ ಜ.18ರಂದು ಬೆಳಗ್ಗೆಯೇ ಅವರು ಬೆಂಗಳೂರಿನಿಂದ ತೆರಳಿದ್ದಾರೆ.

ದಿಲ್ಲಿ, ಮುಂಬಯಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದಿಲ್ಲಿಗೆ ತೆರಳಿದ ಅವರು ಅಂದು ಮಧ್ಯಾಹ್ನವೇ ಅಲ್ಲಿಂದ ಮುಂಬಯಿಗೆ ಹೊರಟು ಅಲ್ಲಿರುವ ಕಾಂಗ್ರೆಸ್ನ ಇತರೆ ಮೂವರು ಅತೃಪ್ತ ಶಾಸಕರನ್ನು ಕೂಡಿಕೊಂಡಿದ್ದಾರೆ ಎನ್ನಲಾಗಿದೆ.
ಸದ್ಯ ನಾಗೇಂದ್ರ ಮುಂಬಯಿಯಲ್ಲಿ ತಂಗಿರುವ ಶಾಸಕರಾದ ರಮೇಶ್ ಜಾರಕಿಹೊಳಿ, ಮಹೇಶ್ ಕಮಟಳ್ಳಿ ಹಾಗೂ ಡಾ. ಉಮೇಶ್ ಜಾದವ್ ಅವರನ್ನು ಸೇರಿಕೊಂಡಿದ್ದಾರೆ ಎನ್ನಲಾಗಿದೆ. ಅಲ್ಲದೇ ನಿನ್ನೆ ರಾತ್ರಿ ಈಗಲ್ಟನ್ ರೆಸಾರ್ಟ್ನಲ್ಲಿ ಶಾಸಕರ ಜತೆ ಸಭೆ ನಡೆಸಿದ ಸಿದ್ದರಾಮಯ್ಯ ಕೂಡ ಆ ನಾಲ್ವರು ಪಕ್ಷಕ್ಕೆ ರಾಜೀನಾಮೆ ನೀಡುವುದು ಬಹುತೇಕ ಖಚಿತ. ಬಿಜೆಪಿ ಆಪರೇಷನ್ ಕಮಲದ ಸಿದ್ಧತೆ ಜೋರಾಗಿಸಿದೆ. ಇದರಿಂದ ನೀವೆಲ್ಲಾ ನಮ್ಮ ಬಲವಾಗಿ ನಿಲ್ಲಬೇಕು. ಬಿಜೆಪಿಯ ಹಣದ ಆಮಿಷಕ್ಕೆ ಒಳಗಾಗಬೇಡಿ ಎಂದು ಮನವಿ ಮಾಡಿದ್ದಾರೆ.


ಈ ಎಲ್ಲಾ ಬೆಳವಣಿಗೆ ನಡುವೆ ಬಿಜೆಪಿ ಶಾಸಕರು ಇಂದು ಮಧ್ಯಾಹ್ನದ ವೇಳೆಗೆ ಬೆಂಗಳೂರು ತಲುಪಲಿದ್ದಾರೆ. ಬೆಳವಣಿಗೆಗಳು ತೀವ್ರಗೊಳ್ಳುತ್ತಿದ್ದು, ಯಾವುದೇ ಸಂದರ್ಭದಲ್ಲಿ ಬೇಕಾದರೂ ರಾಜ್ಯ ಸಮ್ಮಿಶ್ರ ಸರ್ಕಾರ ಪಥನಗೊಳ್ಳಬಹುದು ಎನ್ನಲಾಗುತ್ತಿದೆ.ಸದ್ಯ ಮುಂಬಯಿಯಲ್ಲಿರುವ ನಾಲ್ವರು ಶಾಸಕರ ಜತೆ ಇಬ್ಬರು ಪಕ್ಷೇತರರ ಬೆಂಬಲ ಪಡೆದರೆ ಬಿಜೆಪಿ ಬಲ 104+4+2= 110 ಆಗಲಿದೆ. ಇನ್ನೂ ಮೂರರಿಂದ ನಾಲ್ವರು ಕಾಂಗ್ರೆಸ್ ಇಲ್ಲವೇ ಜೆಡಿಎಸ್ ಶಾಸಕರನ್ನು ಸೆಳೆದು ಸರ್ಕಾರ ಬೀಳಿಸುವ ಲೆಕ್ಕಾಚಾರವನ್ನು ಬಿಜೆಪಿ ಹಾಕಿಕೊಂಡಿದೆ ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿಯೇ ಕಾಂಗ್ರೆಸ್ ನಾಯಕರು ನಿನ್ನೆ ಶಾಸಕಾಂಗ ಪಕ್ಷದ ಸಭೆಗೆ ಆಗಮಿಸಿದ್ದ ಎಲ್ಲಾ ಶಾಸಕರನ್ನೂ ರೆಸಾರ್ಟ್ಗೆ ಕರೆದೊಯ್ದಿದ್ದಾರೆ. ಇನ್ನೂ 2-3 ದಿನ ಅಲ್ಲಿಯೇ ಎಲ್ಲರನ್ನೂ ಉಳಿಸಿ, ಮುಂದಿನ ಪರಿಸ್ಥಿತಿ ಅವಲೋಕಿಸಿ ನಿರ್ಧರಿಸಲಿದ್ದಾರೆ ಎನ್ನಲಾಗುತ್ತಿದೆ.


ಸಂಬಂಧಿತ ಟ್ಯಾಗ್ಗಳು

# Mla Nagendra #Joined # Mumbai #Congres


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ