ಬಿಜೆಪಿ ಶಾಸಕರಿಗೆ ಬಿಎಸ್‍ವೈ ಬುಲಾವ್

 BJP MLAs coming to Bangalore from Gurgaon resort

19-01-2019

ಅತ್ತ ಕಾಂಗ್ರೆಸ್ ಶಾಸಕರು ಬಿಡದಿ ರೆಸಾರ್ಟ್ ಸೇರುತ್ತಿದ್ದಂತೆ ಇತ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮತ್ತೆ ತಮ್ಮ  ಪೊಲಿಟಿಕಲ್ ಗೇಮ್ ಆರಂಭಿಸಿದ್ದು ಗುರಗಾವಂನ ರೆಸಾರ್ಟ್‍ನಲ್ಲಿರುವ ಬಿಜೆಪಿ ಶಾಸಕರಿಗೆ ಬೆಂಗಳೂರಿಗೆ ಮರಳಲು ಸೂಚಿಸಿದ್ದಾರೆ. ಬಿಎಸ್‍ವೈ ಸೂಚನೆಯಂತೆ ಎಲ್ಲ ಶಾಸಕರು ಬೆಂಗಳೂರಿನತ್ತ ಪ್ರಯಾಣ ಆರಂಭಿಸಿದ್ದು, ಸಂಜೆ ವೇಳೆಗೆ ನಗರಕ್ಕೆ ಆಗಮಿಸುವ ಸಾಧ್ಯತೆ ಇದೆ. ಕಾಂಗ್ರೆಸ್ ಶಾಸಕರ ರೆಸಾರ್ಟ್‍ಗೆ ತೆರಳುತ್ತಿದ್ದಂತೆ ಬಿಜೆಪಿ ಶಾಸಕರನ್ನು ಕರೆಸಿಕೊಂಡಿರೋದು ಹಲವು ಅನುಮಾನಗಳನ್ನು ಹುಟ್ಟುಹಾಕಿದ್ದು, ರಾಜ್ಯದಲ್ಲಿ ರಾಜಕೀಯ ಹೈಡ್ರಾಮಾ ಇನ್ನಷ್ಟು ದಿನ ಮುಂದುವರಿಯುವ ಮುನ್ಸೂಚನೆ ದೊರೆತಿದೆ. 

ನಿನ್ನೆ ನಡೆದ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ರಮೇಶ್ ಜಾರಕಿಹೊಳಿ ಸೇರಿದಂತೆ ನಾಲ್ವರು ಕಾಂಗ್ರೆಸ್ ಶಾಸಕರು ಗೈರಾಗಿದ್ದಾರೆ. ಇವರ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಅತ್ತ ದಿನೇಶ್ ಗುಂಡೂರಾವ್ ಬಡಬಡಿಸುತ್ತಿದ್ದಾರೆ. ಆದರೆ ವಾಸ್ತವದಲ್ಲಿ ಈ ಶಾಸಕರು ಇನ್ನಷ್ಟು ಕಾಂಗ್ರೆಸ್ ಶಾಸಕರ ಜೊತೆ ಬಿಜೆಪಿ ಬರುತ್ತಾರೆ ಎಂಬುದು ಬಿಎಸ್‍ವೈ ಲೆಕ್ಕಾಚಾರವಾಗಿದ್ದು, ಶತಾಯ-ಗತಾಯ ಸರ್ಕಾರ ಉರುಳಿಸಿಯೇ  ನಾನು ಸುಮ್ಮನಾಗೋದು ಎಂದು ಬಿಎಸ್‍ವೈ ಜಿದ್ದಿಗೆ ಬಿದ್ದಿದ್ದಾರೆ ಎನ್ನಲಾಗುತ್ತಿದೆ. 

ಇನ್ನು ನಗರಕ್ಕೆ ಬಿಜೆಪಿ ಶಾಸಕರು ಆಗಮಿಸಿದ ಬಳಿಕ ಬಿಎಸ್‍ವೈ ಸಭೆ ನಡೆಸಲಿದ್ದು, ಸಭೆಯಲ್ಲಿ ಲೋಕಸಭೆ ಚುನಾವಣೆಯೊಳಗೆ ಮೈತ್ರಿ ಸರ್ಕಾರವನ್ನು ಉರುಳಿಸಿ ಬಿಜೆಪಿ ಅಧಿಕಾರಕ್ಕೆ ಬರಲು ಅಗತ್ಯವಿರುವ ಪ್ರಯತ್ನಗಳ  ಕುರಿತು ಚರ್ಚೆ ನಡೆಸಲಿದ್ದಾರೆ ಎಂಬ ಮಾತು ಕೂಡ ಕೇಳಿಬಂದಿದೆ. ರಮೇಶ್ ಜಾರಕಿಹೊಳಿ ಸೇರಿದಂತೆ ಎಲ್ಲ ಅತೃಪ್ತರು ಬಿಜೆಪಿ ಸಂಪರ್ಕದಲ್ಲಿದ್ದಾರೆ ಎಂಬ ಮಾತುಗಳು ಕೇಳಿಬಂದಿದೆ. ಒಟ್ಟಿನಲ್ಲಿ ರಾಜ್ಯ ರಾಜಕಾರಣದಲ್ಲಿ ಕ್ಷಣಕ್ಕೊಂದು ಬದಲಾವಣೆ ಎದುರಾಗುತ್ತಿದ್ದು, ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ಈ ಕಿತ್ತಾಟದಲ್ಲಿ ಜನ ಹೈರಾಣಾಗಿರೋದು ಮಾತ್ರ ಸುಳ್ಳಲ್ಲ. 


ಸಂಬಂಧಿತ ಟ್ಯಾಗ್ಗಳು

#Bsy #Bangalore #Bjp Mla #Meeting


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ