ಶಾಸಕರನ್ನು ಉಳಿಸಿಕೊಳ್ಳಲು ಕಾಂಗ್ರೆಸ್ ಕಸರತ್ತು 

Congress calls for meeting again with legislators

19-01-2019

ಕಾಂಗ್ರೆಸ್‍ಗೆ ನಾಯಕರ ಪಾಲಿಗೆ ಕನಸಿನಲ್ಲೂ ಬಿಜೆಪಿ ಆಫರೇಶನ್ ಕಮಲವೇ ಕಾಡುತ್ತಿರುವಂತಿದ್ದು, ಹೀಗಾಗಿ ರೆಸಾರ್ಟ್‍ನಲ್ಲೂ ಇಂದು ಮತ್ತೊಮ್ಮೆ ಕಾಂಗ್ರೆಸ್ ಶಾಸಕಾಂಗ ಸಭೆ ನಡೆಸಲಿದ್ದು, ಬಿಜೆಪಿಯ ಆಮಿಷಗಳಿಗೆ ಬಲಿಯಾಗದಂತೆ ಮತ್ತೊಮ್ಮೆ ಕಿವಿಮಾತು ಹೇಳುವ ಪ್ರಯತ್ನ ನಡೆಯಲಿಕ್ಕಿದೆ. 


ಬಿಜೆಪಿ ಆಫರೇಶನ್ ಕಮಲದ ಭೀತಿಯಿಂದ ತಮ್ಮ ಶಾಸಕರನ್ನು ಕಾಯ್ದುಕೊಳ್ಳಲು ಸರ್ಕಸ್ ಆರಂಭಿಸಿದ ಕಾಂಗ್ರೆಸ್ ನಿನ್ನೆಯಷ್ಟೇ ಕಾಂಗ್ರೆಸ್ ಶಾಸಕಾಂಗ ಸಭೆಯ ನಾಯಕ ಸಿದ್ಧರಾಮಯ್ಯನವರ ನೇತೃತ್ವದಲ್ಲಿ ಸಭೆ ನಡೆಸಿತ್ತು. ಈ ವೇಳೆ ಕೇವಲ 76 ಶಾಸಕರು ಹಾಜರಾಗಿದ್ದು, ಇಬ್ಬರು ಕಾರಣ ನೀಡಿ ತಪ್ಪಿಸಿಕೊಂಡಿದ್ದರೇ, ಇನ್ನಿಬ್ಬರು ಸಂಪರ್ಕಕ್ಕೆ ಸಿಗದೆ ನಾಪತ್ತೆಯಾಗಿದ್ದರು. ಇದರಿಂದ ಬೆದರಿದ ಕಾಂಗ್ರೆಸ್ ಎಲ್ಲ ಶಾಸಕರನ್ನು ಬಿಡದಿ ಬಳಿಯ ಈಗಲ್ ಟನ್ ರೆಸಾರ್ಟ್‍ಗೆ ಕರೆದೊಯ್ದಿದ್ದು, ಅಲ್ಲಿಯೆ ಉಳಿಸಿಕೊಂಡಿದೆ. ಅಲ್ಲದೆ ಸಚಿವ ಡಿ.ಕೆ.ಶಿವಕುಮಾರ್ ಶಾಸಕರ ಜವಾಬ್ದಾರಿ ಹೊತ್ತಿದ್ದಾರೆ. 

ಈ ಮಧ್ಯೆ ಇಂದೂ ಕೂಡ ರೆಸಾರ್ಟ್‍ನಲ್ಲೆ ಶಾಸಕಾಂಗ ಪಕ್ಷದ ಸಭೆ ನಡೆಸಲು ಸಿದ್ಧರಾಮಯ್ಯ ತೀರ್ಮಾನಿಸಿದ್ದಾರೆ ಎನ್ನಲಾಗಿದೆ. ಬಿಜೆಪಿ ಇನ್ನೂ ಕೂಡ ಆಫರೇಶನ್ ಕಮಲದ ಪ್ರಯತ್ನವನ್ನು ಮುಂದುವರಿಸಿರೋದರಿಂದ ಅತೃಪ್ತ ಶಾಸಕರ ಜೊತೆ ಮಾತನಾಡಿ ಅವರಿಗೆ ಸೂಕ್ತ ಸ್ಥಾನಮಾನದ ಭರವಸೆ ನೀಡಿ ಕಾಂಗ್ರೆಸ್ ಪಕ್ಷದಲ್ಲೇ ಉಳಿಸಿಕೊಳ್ಳುವುದು ಸಭೆಯ ಉದ್ದೇಶ ಎನ್ನಲಾಗುತ್ತಿದೆ. 

ಇನ್ನು ಕೈಪಾಳಯದಿಂದ ಹೊರನಡೆಯುವ ಗಟ್ಟಿ ನಿರ್ಧಾರ ಕೈಗೊಂಡಿರುವ  ಚಿಂಚೋಳಿ ಶಾಸಕ ಡಾ.ಉಮೇಶ್ ಜಾಧವ್ ಇಂದು ಕಾಂಗ್ರೆಸ್‍ಗೆ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಯಾಗುವುದು ಖಚಿತ ಎನ್ನಲಾಗುತ್ತಿದ್ದು, ಮಧ್ಯಾಹ್ನದ ವೇಳೆ ಸ್ಪಷ್ಟ ರೂಪ ಸಿಗಲಿದೆ. ಇನ್ನೊಂದೆಡೆ ರಮೇಶ್ ಜಾರಕಿಹೊಳಿ ಕೂಡ ಕಾಂಗ್ರೆಸ್ ಶಾಸಕಾಂಗ ಸಭೆಗೆ  ಗೈರಾಗಿದ್ದು, ಇಂದು ಮಧ್ಯಾಹ್ನ ನಡೆಯುವ ಮೀಟಿಂಗ್‍ಗೂ ಹಾಜರಾಗುವುದು  ಡೌಟ್. ಹೀಗಾಗಿ ಕಾಂಗ್ರೆಸ್ ನಾಯಕರು ಆತಂಕಿತರಾಗಿದ್ದು,  ಇರುವ ಶಾಸಕರನ್ನು ಪಕ್ಷದಲ್ಲಿಯೇ ಉಳಿಸಿಕೊಳ್ಳಲು ಸರ್ಕಸ್ ಆರಂಭಿಸಿದ್ದಾರೆ. 


ಸಂಬಂಧಿತ ಟ್ಯಾಗ್ಗಳು

#Again #Congress # Meeting #Mla


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ