ಮಾರ್ಚನಲ್ಲಿ ಲೋಕಸಭಾ ಚುನಾವಣೆ ಘೋಷಣೆ ಸಾಧ್ಯತೆ

 The Lok Sabha elections will be announced in March

19-01-2019

ದೇಶದಲ್ಲಿ ಅಘೋಷಿತವಾಗಿ ಚುನಾವಣೆಯ ಕಾವು ಏರಿರುವ ಬೆನ್ನಲ್ಲೆ 2019 ರ ಲೋಕಸಭಾ ಚುನಾವಣೆಯ ದಿನಾಂಕವನ್ನು ಮಾರ್ಚ ನಲ್ಲಿ ಕೇಂದ್ರ ಚುನಾವಣಾ ಆಯೋಗ ಘೋಷಿಸುವ ಸಾಧ್ಯತೆ ಇದೆ. ಪ್ರಸಕ್ತ ಲೋಕಸಭೆಯ ಅವಧಿ ಜೂನ್‍ನಲ್ಲಿ ಕೊನೆಗೊಳ್ಳಲಿರುವ ಹಿನ್ನೆಲೆಯಲ್ಲಿ ಏಪ್ರಿಲ್ ಅಂತ್ಯ ಅಥವಾ ಮೇ ಮೊದಲೆರಡು ವಾರದಲ್ಲಿ ದೇಶದಲ್ಲಿ ಚುನಾವಣೆ ನಡೆಯಲಿದೆ. 

ಈಗಾಗಲೆ ದೇಶದ ಎಲ್ಲ ರಾಜಕೀಯ ಪಕ್ಷಗಳು ಚುನಾವಣೆ ಸಿದ್ಧತೆ ಆರಂಭಿಸಿದ್ದು, ಕ್ಷೇತ್ರಗಳ ಹಂಚಿಕೆ, ಮೈತ್ರಿ, ರ್ಯಾಲಿ ಸೇರಿದಂತೆ ಎಲ್ಲ ಅಗತ್ಯ ರಣತಂತ್ರಗಳು ಗರಿಗೆದರಿವೆ. ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿಯಾಗಿಸುವ ಹುಮ್ಮಸ್ಸಿನಲ್ಲಿ ಬಿಜೆಪಿ ಇದ್ದರೇ, ಶತಾಯ-ಗತಾಯ ಮೋದಿ ತೊಲಗಿಸುವ ಕನಸು ಕಾಂಗ್ರೆಸ್ ಹಾಗೂ ಮಿತ್ರಪಕ್ಷಗಳದ್ದು. ಈ ನಿಟ್ಟಿನಲ್ಲಿ ಚುನಾವಣೆ ಬಾರಿ ಕುತೂಹಲ ಮೂಡಿಸಿದೆ. 

ಈ ಬಾರಿ ಲೋಕಸಭಾ ಚುನಾವಣೆಯ ಜೊತೆಗೆ ಜಮ್ಮು ಮತ್ತು ಕಾಶ್ಮೀರ್ , ಆಂಧ್ರಪ್ರದೇಶ, ಸಿಕ್ಕಿಂ ಒಡಿಸ್ಸಾ ಹಾಗೂ ಅರುಣಾಚಲ ಪ್ರದೇಶ ವಿಧಾನಸಭಾ ಚುನಾವಣೆ ಕೂಡ ನಡೆಯುವ ಸಾಧ್ಯತೆ ಇದೆ. 2018 ರ ನವೆಂಬರ್‍ನಲ್ಲಿ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ವಿಸರ್ಜನೆಗೊಂಡಿರೋದರಿಂದ ಆ ಚುನಾವಣೆಯನ್ನು ನಡೆಸುವ ಹೊಣೆಗಾರಿಕೆ ಕೇಂದ್ರ ಚುನಾವಣಾ ಆಯೋಗದ ಮೇಲಿದೆ. ಹೀಗಾಗಿ ಮಾರ್ಚ ನಲ್ಲಿ ಲೋಕಸಭಾ ಮಹಾಸಮರದ ಮುಹೂರ್ತ ಫಿಕ್ಸ್ ಆಗೋದು ಖಚಿತ. 


ಸಂಬಂಧಿತ ಟ್ಯಾಗ್ಗಳು

#Election #Announced #Lok Sabha #March


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ