ಆರ್ ಎಸ್ ಎಸ್ ಮತ್ತು ಬಿಜೆಪಿ ನಡುವೆ ಅಂತರ ಸೃಷ್ಟಿಸುತ್ತಾ ರಾಮಮಂದಿರ 

The Ram Mandir  is Creating Space Between the RSS and the BJP

18-01-2019

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮೋದಿ ಗೆದ್ದರೂ ರಾಮಮಂದಿರ ನಿರ್ಮಾಣವಾಗುವುದಿಲ್ಲ. ಬಹುಷಃ ರಾಮಮಂದಿರ 2025 ರಲ್ಲಿ ನಿರ್ಮಾಣವಾಗಬಹುದು ಎಂದು ಆರ್.ಎಸ್.ಎಸ್, ಬಿಜೆಪಿ ಮತ್ತು ಕೇಂದ್ರ ಸರ್ಕಾರವನ್ನು ಲೇವಡಿ ಮಾಡಿದೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ವಿಳಂಬ ಮಾಡುತ್ತಿದೆ ಎಂದು ಆರೋಪಿಸಿರುವ ಆರ್ ಎಸ್ ಎಸ್ ರಾಮಮಂದಿರ ನಿರ್ಮಾಣದ ಬಳಿಕ ದೇಶ ಪ್ರಗತಿಯಾಗುತ್ತದೆ ಎಂದಿದೆ. 

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಬಿಜೆಪಿಯ ಮುಖ್ಯ ಅಜೆಂಡಾ ಎಂದೆ ಬಿಂಬಿಸಲಾಗುತ್ತಿದೆ. ಹೀಗಿರುವಾಗಲೇ ಇತ್ತೀಚಿಗೆ ರಾಷ್ಟ್ರೀಯ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಪ್ರಧಾನಿ ನರೇಂದ್ರ ಮೋದಿ, ರಾಮಮಂದಿರದ ವಿಚಾರದಲ್ಲಿ ನ್ಯಾಯಾಲಯದ ತೀರ್ಪು ಅಂತಿಮ. ತೀರ್ಪಿಗಾಗಿ ಕಾಯುತ್ತಿದ್ದೇವೆ ಎಂದಿದ್ದರು.  ಇದಕ್ಕೆ ಆರ್.ಎಸ್.ಎಸ್. ವಿಶ್ವಹಿಂದು ಪರಿಷತ್ ಸೇರಿದಂತೆ ಹಲವು ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ. 

ವೈಯಕ್ತಿಕವಾಗಿ ಆರ್ ಎಸ್ ಎಸ್ ಮೋದಿ ಈ ಹೇಳಿಕೆಯಿಂದ ಅಸಮಾಧಾನಗೊಂಡಂತಿದ್ದು, ಮೋದಿ ರಾಮಮಂದಿರ ನಿರ್ಮಾಣವನ್ನು ಆದ್ಯತೆಯಾಗಿ ಪರಿಗಣಿಸುತ್ತಿಲ್ಲ ಎಂಬಂತೆ  ಆರ್ ಎಸ್ ಎಸ್ ಭಾವಿಸಿದಂತಿದೆ. ಇದು ಲೋಕಸಭಾ ಚುನಾವಣೆ ದೃಷ್ಟಿಯಿಂದ ಬಿಜೆಪಿಗೆ ಉತ್ತಮ ಬೆಳವಣಿಗೆಯಲ್ಲ ಎಂದು ವಿಶ್ಲೇಷಿಸಲಾಗುತ್ತಿದೆ.  

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿ ರಾಮಮಂದಿರ ನಿರ್ಮಿಸಬೇಕೆಂದು ಆರ್.ಎಸ್.ಎಸ್. ಒತ್ತಾಯ. ಈ ಬಗ್ಗೆ ಮಾತನಾಡಿರುವ ಆರ್‍ಎಸ್‍ಎಸ್‍ನ ಪ್ರಧಾನ ಕಾರ್ಯದರ್ಶಿ  ಬೈಯಾಜಿ ಜೋಷಿ ರಾಮಮಂದಿರ ನಮ್ಮ ಕನಸು. ಬೇರೆ ಸಮುದಾಯದವರೊಂದಿಗೆ ಸಂಘರ್ಷ ನಡೆಸಬೇಕೆಂಬುದು ನಮ್ಮ ಉದ್ದೇಶವಲ್ಲ.  ನಾವು ಏನನ್ನು ಬೇಡುತ್ತಿಲ್ಲ.  ನಮ್ಮ ಭಾವನೆಯನ್ನು ವ್ಯಕ್ತಪಡಿಸುತ್ತಿದ್ದೇವೆ.  ಸುಗ್ರೀವಾಜ್ಞೆಯ ಮೂಲಕ ಮಾತ್ರ ರಾಮಮಂದಿರ ನಿರ್ಮಾಣ ಸಾಧ್ಯವಿದೆ ಎಂದಿದ್ದಾರೆ. 

ಒಟ್ಟಿನಲ್ಲಿ ರಾಮಮಂದಿರ ನಿರ್ಮಾಣದ ವಿಚಾರ ಬಿಜೆಪಿ ಹಾಗೂ  ಆರ್.ಎಸ್.ಎಸ್. ನಡುವೆ ಭಿನ್ನಾಭಿಪ್ರಾಯಕ್ಕೆ ಕಾರಣವಾಗುವ ಎಲ್ಲ ಲಕ್ಷಣ ವ್ಯಕ್ತವಾಗುತ್ತಿದ್ದು, ಸುಗ್ರೀವಾಜ್ಞೆ ಮೂಲಕ ಮಾತ್ರ ನಮ್ಮ ಬೇಡಿಕೆ ಈಡೇರೋದರಿಂದ ಅಲ್ಲಿಯವರೆಗೂ ನಾವು ಹೋರಾಟ ಮಾಡಲು ಸಿದ್ಧರಿದ್ದೇವೆ ಎನ್ನುವ ಮೂಲಕ ಆರ್ ಎಸ್ ಎಸ್ ಬಿಜೆಪಿಗೆ ಮುಜುಗರ ತಂದಿಡುವ ಹೇಳಿಕೆ ನೀಡಲಾರಂಭಿಸಿದೆ. ಒಟ್ಟಿನಲ್ಲಿ ಚುನಾವಣೆಗೆ ಮುನ್ನವೆ ಈ ಭಿನ್ನಾಭಿಪ್ರಾಯ ತೀವ್ರಗೊಳ್ಳುವ ಎಲ್ಲ ಲಕ್ಷಣ ವ್ಯಕ್ತವಾಗಿದೆ. 


ಸಂಬಂಧಿತ ಟ್ಯಾಗ್ಗಳು

#Ram Mandir #Rss #Bjp #Creating Space


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ