ಮನೋರಂಜನಾ ವಿಶೇಷ ತಜ್ಞರ ಸಮಿತಿ ಸದಸ್ಯರಾಗಿ ದೀಪಕ ತಿಮ್ಮಯ ನೇಮಕ 

Deepak Thimaya Appointed As An Expert Specialist Panel Member

18-01-2019

ಮನೋರಂಜನಾ ಸೇವಾ ವಲಯದ ವಿಶೇಷ ತಜ್ಞರ ಸಮಿತಿಯ ಸದಸ್ಯರನ್ನಾಗಿ ಹಿರಿಯ ಪತ್ರಕರ್ತ, ನಿರೂಪಕ ಹಾಗೂ ಕಿರುತೆರೆ ಕಾರ್ಯಕ್ರಮ ನಿರ್ದೇಶಕರಾದ ದೀಪಕ್  ತಿಮ್ಮಯ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ರಾಜ್ಯದಲ್ಲಿನ ಸೇವಾ ವಲಯದ  ಕಾರ್ಯಚಟುವಟಿಕೆಗಳನ್ನು ಬಲಗೊಳಿಸುವ ಉದ್ದೇಶದಿಂದ ಈ ತಜ್ಞರ ಸಮಿತಿ  ಕಾರ್ಯನಿರ್ವಹಿಸಲಿದೆ. 
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ಕಾರ್ಯನಿರ್ವಹಿಸಲಿರುವ ಈ ಸಮಿತಿಯಲ್ಲಿ ಚಲನಚಿತ್ರ, ಜಾಹೀರಾತು,ಮುದ್ರಣ ಮಾಧ್ಯಮ,ಟಿವಿ.ರೇಡಿಯೋ,ಸಂಗೀತ, ಡಿಜಿಟಲ್ ಜಾಹೀರಾತು ಕ್ಷೇತ್ರದಲ್ಲಿ ವಿಶೇಷ ಸೇವೆ  ಸಲ್ಲಿಸಿದವರನ್ನು ಸದಸ್ಯರನ್ನಾಗಿ ಆಯ್ಕೆ ಮಾಡಲಾಗಿದೆ. 

ದೀಪಕ್  ತಿಮ್ಮಯನವರು ಉದಯ ಟಿವಿ ಹಿರಿಯ ನಿರೂಪಕರಾಗಿ, ಪತ್ರಕರ್ತರಾಗಿ,  ಕಿರುತೆರೆ ಕಾರ್ಯಕ್ರಮಗಳ ನಿರ್ದೇಶಕರಾಗಿ ಅಪಾರ ಅನುಭವ ಹೊಂದಿದ್ದು, ಅವರು ಸಲ್ಲಿಸಿದ ಸೇವೆ ಹಾಗೂ ಅನುಭವ ಪರಿಗಣಿಸಿ ನೇಮಕ ನಡೆದಿದೆ. ಇವರೊಂದಿಗೆ ಹಿರಿಯ ಚಲನಚಿತ್ರ ನಿರ್ಮಾಪಕ ರಾಜೇಂದ್ರ ಸಿಂಗ್ ಬಾಬು, ಹಿರಿಯ ಪತ್ರಕರ್ತ ಗಂಗಾಧರ ಮೊದಲಿಯಾರ್,  ಸಂಗೀತ ನಿರ್ದೇಶಕ ವಿ.ಮನೋಹರ್ ಸೇರಿದಂತೆ ಒಟ್ಟು 10 ಜನ ಸದಸ್ಯರನ್ನು ಸಮಿತಿ ಒಳಗೊಂಡಿದೆ.  


ಸಂಬಂಧಿತ ಟ್ಯಾಗ್ಗಳು

#Deepak Thimaya # Expert Specialist # Appointed # Panel Member


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ