ಬೆಲ್ ಬಾಟ್‍ಂನಲ್ಲಿ ಹರಿಕಥೆ

 Harikate in Belbottom

18-01-2019

ತಮ್ಮ ವಿಭಿನ್ನ ಶೈಲಿಯಿಂದಲೇ ಸ್ಯಾಂಡಲವುಡ್‍ನಲ್ಲಿ ಮನೆಮಾತಾಗಿರುವ ನಿರ್ದೇಶಕ ರಿಷಬ್ ಶೆಟ್ಟಿ ಹೊಸ ರೀತಿಯಲ್ಲಿ ಸಿನಿಮಾ ಟೀಸರ್ ರಿಲೀಸ್ ಮಾಡುವ ಮೂಲಕ ಜನಮೆಚ್ಚುಗೆ ಗಳಿಸಿದ್ದಾರೆ. ರಿಷಬ್ ಶೆಟ್ಟಿ ಮುಖ್ಯಭೂಮಿಕೆಯಲ್ಲಿರುವ ಬೆಲ್ ಬಾಟ್‍ಂ ಸಿನಿಮಾದ ಟ್ರೇಲರ್ ನ್ನು ಮಾಮೂಲಿ ಟ್ರೇಲರ್‍ಗಳಿಗಿಂತ ಭಿನ್ನವಾಗಿ ಹರಿಕಥಾ ವಿದ್ವಾನ್ ಗುರುರಾಜುಲು ನಾಯ್ಡು ಧ್ವನಿಯಲ್ಲಿ ಚಿತ್ರಿಸಿ ಬಿಡುಗಡೆ ಮಾಡಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಸಿನಿಮಾದ ಕತೆಯನ್ನು ಹರಿಕಥೆ ಶೈಲಿಯಲ್ಲಿ ಹೇಳಲಾಗಿರೋದರಿಂದ ಜನರು ಕುತೂಹಲದಿಂದ  ಬೆಲ್ ಬಾಟ್‍ಂ ಚಿತ್ರದ ಟ್ರೇಲರ್ ನೋಡುತ್ತಿದ್ದಾರೆ. ಸ್ಕ್ರಿಪ್ಟ್ ಕೂಡಜನಪ್ರಿಯ ಶೈಲಿಯಲ್ಲೇ ಇರೋದರಿಂದ ಜನರಿಗೆ ಬೇಗ ತಲುಪಲು ಸಹಾಯಕವಾಗಿದೆ ಅಂತಿದೆ ಚಿತ್ರತಂಡ.

ಜಯತೀರ್ಥ ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ  ಒಂದು ಮೊಟ್ಟೆಯ ಕತೆ ಸಿನಿಮಾ ಖ್ಯಾತಿಯ ರಾಜ್ ಬಿ.ಶೆಟ್ಟಿ ಸಹ ದೃಶ್ಯಕ್ಕೆ ಡಬ್ಬಿಂಗ್ ಮಾಡಿದ್ದಾರೆ.  ಟಿ.ಕೆ.ದಯಾನಂದ ಕತೆ ಆಧರಿಸಿ ಚಿತ್ರ ಸಿದ್ಧವಾಗಿದ್ದು, 80 ರ ಕಾಲಘಟ್ಟದಲ್ಲಿ  ನಡೆಯುವ ಕಥೆಯನ್ನೇ ಚಿತ್ರವಾಗಿ ಮಾಡಲಾಗಿದೆ.  

ಇನ್ನು ಕಾಲಕ್ಕೆ ತಕ್ಕಂತೆ  ಬಣ್ಣ ಕಾಸ್ಟ್ಯೂಮ್ ಶೈಲಿ, ಹೇರ್‍ಸ್ಟೈಲ್, ಮೇಕಪ್ ಎಲ್ಲವನ್ನು ಚಿತ್ರದಲ್ಲಿ ಅಳವಡಿಸಿಕೊಳ್ಳಲಾಗಿದೆ. ಹಳೆ ಸ್ಟೈಲ್ ನ ಕಾಸ್ಟ್ಯೂಮ್‍ನಲ್ಲಿ ನಾಯಕಿ ಹರಿಪ್ರಿಯಾ ಮುದ್ದಾಗಿ ಕಾಣಿಸುತ್ತಿದ್ದಾರೆ. ಇದೇ ಮೊದಲ ಬಾರಿಗೆ ಕನ್ನಡ ಚಿತ್ರವೊಂದರ ಟ್ರೇಲರ್ ಹರಿಕಥೆ ಶೈಲಿಯಲ್ಲಿ ಮೂಡಿಬಂದಿದ್ದು, ಜನ ಹೊಸ ಪ್ರಯತ್ನಕ್ಕೆ ಮನಸೋತಿದ್ದಾರೆ. 


ಸಂಬಂಧಿತ ಟ್ಯಾಗ್ಗಳು

#Bell bottom #Trailer #Kannada Movie #Harikate


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ