ಅನಾಥ ಮಗುವಿಗೆ ಹಾಲುಣಿಸಿದ ಪೇದೆ

 The orphan baby breastfeeding By Police Constable

17-01-2019

ರಸ್ತೆ ಬದಿ ನವಜಾತ ಮಗುವಿಗೆ ಎದೆ ಹಾಲುಣಿಸಿ ಯಲಹಂಕ ಠಾಣೆಯ ಮಹಿಳಾ ಪೆÇಲೀಸ್ ಪೇದೆಯೊಬ್ಬರು ಮಾನವೀಯತೆ ಮೆರೆದಿದ್ದಾರೆ.ಈ ಮೂಲಕ ಕಾನೂನು ಸುವ್ಯವಸ್ಥೆ ಕಾಪಾಡಲು ಅಪರಾಧಿಗಳನ್ನು ಮಟ್ಟ ಹಾಕಲು ನಿರ್ದಾಕ್ಷಿಣ್ಯವಾಗಿ ನಡೆದುಕೊಳ್ಳುವ ಪೊಲೀಸರಲ್ಲಿ ಮಾತೃ ಹೃದಯವಿರುವುದನ್ನು ಸಾಬೀತುಪಡಿಸಿದ್ದಾರೆ.

ಕೊರೆಯುವ ಚಳಿಯಲ್ಲಿಯೇ ಸ್ವಲ್ಪವೂ ಕರಣೆಯಿಲ್ಲದೇ ಯಾರೋ ಅಪರಿಚಿತರು ಯಲಹಂಕದ ಜಿಕೆವಿಕೆ ಕ್ಯಾಂಪಸ್‍ನ ರಸ್ತೆ ಬದಿ ನವಜಾತ ಹೆಣ್ಣು ಶಿಶುವನ್ನು ಬುಧವಾರ ಬೆಳಿಗ್ಗೆ ಎಸೆದು ಹೋಗಿದ್ದರು. ಇರುವೆಗಳಿಂದ ಮುತ್ತಿದ್ದ ನವಜಾತ ಶಿಶುವನ್ನು ಕಂಡ ಸ್ಥಳೀಯರು  ವಿದ್ಯಾರಣ್ಯಪುರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ಮಗು ದೊರೆತ ಸ್ಥಳವು ವಿದ್ಯಾರಣ್ಯಪುರ ಠಾಣೆ ವ್ಯಾಪ್ತಿಗೆ ಬಾರದಿದ್ದರಿಂದ ಯಲಹಂಕ ಪೊಲೀಸರು ಧಾವಿಸಿದ್ದಾರೆ.

ಪೊಲೀಸ್ ಸಿಬ್ಬಂಧಿಯ ಜೊತೆಗಿದ್ದ ಮಹಿಳಾ ಪೆÇಲೀಸ್ ಪೇದೆ ಸಂಗೀತಾ ಎಸ್ ಹಲಿಮನಿ ಆ ಮಗುವನ್ನು ನೋಡಿದ ಕೂಡಲೇ ಎದೆ ಹಾಲುಣಿಸಿ, ಆರೈಕೆ ಮಾಡಿ ಯಲಹಂಕ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಅಲ್ಲಿಂದ ವಾಣಿ ವಿಲಾಸ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಆರೋಗ್ಯವಾಗಿರುವ ಮಗುವನ್ನು ಮಕ್ಕಳ ಕಲ್ಯಾಣ ಇಲಾಖೆಗೆ ಹಸ್ತಾಂತರಿಸಲು ವೈದ್ಯರು ನಿರ್ಧಾರ ಮಾಡಿದ್ದಾರೆ.
 


ಸಂಬಂಧಿತ ಟ್ಯಾಗ್ಗಳು

#Orphan baby # Police Constable #Breastfeeding #Bangalore


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ