ವಿಶ್ವಸಂಸ್ಥೆಯಲ್ಲೂ ಲೈಂಗಿಕ ದೌರ್ಜನ್ಯ 

Sexual Abuse In The United Nations

17-01-2019

ವಿಶ್ವಕ್ಕೆ ಹಿರಿಯಣ್ಣನಂತಿರುವ ವಿಶ್ವಸಂಸ್ಥೆಯಲ್ಲೇ ಕಳೆದ ಎರಡು ವರ್ಷದ ಅವಧಿಯಲ್ಲಿ ಪ್ರತಿಮೂರು ಸಿಬ್ಬಂದಿಯಲ್ಲಿ ಒಬ್ಬರ ಮೇಲೆ ಲೈಂಗಿಕ ಕಿರುಕುಳ ನಡೆದಿದೆ ಎಂಬ ಆಘಾತಕಾರಿ ಸಂಗತಿಯೊಂದು ಸಮೀಕ್ಷೆ ವೇಳೆ ಹೊರಬಿದ್ದಿದೆ. ಅಂದಾಜು ಶೇ 33 ರಷ್ಟು ಲೈಂಗಿಕ ದೌರ್ಜನ್ಯ ಪ್ರಕರಣಗಳು ನಡೆದಿದೆ ಎಂಬ ಅಂಶವನ್ನು ಸಮೀಕ್ಷೆ ದಾಖಲಿಸಿದೆ. 


ಡೆಲೊಯಿಟ್ ಎಂಬ ಸಂಸ್ಥೆ ನಡೆಸಿರುವ ಈ ಸಮೀಕ್ಷೆಯು  ಮಂಗಳವಾರ ಬಿಡುಗಡೆಗೊಂಡಿದ್ದು, ಮಾಧ್ಯಮಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.ಇನ್ನು ಈ ಸಮೀಕ್ಷೆಯ ವರದಿಯನ್ನು ಉಲ್ಲೇಖಿಸಿ  ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ಅಂಟೊನಿಯೊ ಗುಟೆರಸ್ ಅವರು ಸಂಸ್ಥೆಯ ಉದ್ಯೋಗಿಗಳಿಗೆ ಪತ್ರ ಬರೆದಿದ್ದಾರೆ. ಈ ಪತ್ರದೊಂದಿಗೆ ಅಂಟೊನಿಯೊ ಗುಟೆರಸ್ ಸಮೀಕ್ಷೆಯ ಅಂಕಿ ಅಂಶಗಳನ್ನು ಉಲ್ಲೇಖಿಸಿದ್ದಾರೆ. 

ಉದ್ಯೋಗದ ಸ್ಥಳವನ್ನು ಉತ್ತಮ ಸಲಹೆಗಳನ್ನು ಕೂಡ ಈ ಪತ್ರದಲ್ಲಿ ಅವರು ದಾಖಲಿಸಿದ್ದಾರೆ. ಸಂಸ್ಥೆಯಲ್ಲಿ ಲೈಂಗಿಕ ವಿಷಯದ ಕುರಿತು ಅನಗತ್ಯವಾದ ಮಾತು, ಆಕ್ಷೆಪಾರ್ಹ ನಡವಳಿಕೆ, ಭಂಗಿ, ಅನಗತ್ಯವಾಗಿ ಸ್ಪರ್ಶಿಸಲು ಬಯಸುವುದು ಸಹಕರಿಸದವರ ವಿರುದ್ಧ ವೃತ್ತಿ ವೈಷಮ್ಯಗಳನ್ನು ತೋರಿಸುವುದು ಅನಗತ್ಯ ತೊಂದರೆ ನೀಡುವುದು ಈ ರೀತಿಯ ವರ್ತನೆಗಳನ್ನು ತೋರುತ್ತಿರುವುದು ಕೂಡ ಸಮೀಕ್ಷೆಯಲ್ಲಿ ದಾಖಲಾಗಿತ್ತು.
 
ಕಳೆದ ನವೆಂಬರ್‍ನಲ್ಲಿ ಡೆಲೊಯಿಟ್ ಸಂಸ್ಥೆ ಈ ಸಮೀಕ್ಷೆ ನಡೆಸಿದ್ದು, ಇದಕ್ಕಾಗಿ ಸಂಸ್ಥೆ ಅಂದಾಜು 30 ಸಾವಿರದ 364 ಉದ್ಯೋಗಿಗಳನ್ನು ಸಂಪರ್ಕಿಸಿ ಅವರಿಂದ ಪ್ರಶ್ನಾವಳಿಗಳಿಗೆ ಉತ್ತರ ಪಡೆದುಕೊಂಡಿತ್ತು ಎನ್ನಲಾಗಿದೆ. ಏನೆ ಆದರೂ ಸಾಮಾನ್ಯ ಸಾರ್ವಜನಿಕಸ್ಥಳಗಳಂತೆ ವಿಶ್ವಸಂಸ್ಥೆಯಲ್ಲೂ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯಗಳು ನಡೆದಿವೆ ಎಂಬ ಮಾಹಿತಿ ನಿಜಕ್ಕೂ ಖೇದಕರ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. 


ಸಂಬಂಧಿತ ಟ್ಯಾಗ್ಗಳು

#Sexual Abuse #Dloitte #United Nations #Shocking


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ