ಶ್ರೀದೇವಿ ಬಂಗ್ಲೋ ಚಿತ್ರದ ವಿರುದ್ಧ ಬೋನಿ ಕಪೂರ್ ಗೆ ಸಿಟ್ಟ್ಯಾಕೆ?

Boney Kapoor Fighting With  Sridevi Bangla Movie Team

17-01-2019

ಬಾಲಿವುಡ್ ನಟಿ ಶ್ರೀದೇವಿ ಸಾವಿನ ಕುರಿತು ನೂರಾರು ಊಹಾಪೋಹಗಳು ಇನ್ನು ಹರಿದಾಡುತ್ತಲೇ ಇದೆ. ಹೀಗಿರುವಾಗಲೇ ಚಿತ್ರತಂಡವೊಂದು ಶ್ರೀದೇವಿ ಸಾವನ್ನು  ಹೋಲುವ ಚಿತ್ರಕತೆಯೊಂದನ್ನು ಇಟ್ಟುಕೊಂಡು ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದು, ಈಗಾಗಲೇ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಆದರೆ ಈ ಚಿತ್ರಕ್ಕೆ ಶ್ರೀದೇವಿ ಪತಿ ಬೋನಿಕಪೂರ್ ವಿರೋದ ವ್ಯಕ್ತವಾಗಿದ್ದು, ಬೋನಿಕಪೂರ್ ಚಿತ್ರತಂಡಕ್ಕೆ ಲೀಗಲ್ ನೊಟೀಸ್ ರವಾನಿಸಿದ್ದಾರೆ. 

ಶ್ರೀದೇವಿ ಬಂಗ್ಲೋ ಸಧ್ಯ ಬಾಲಿವುಡ್‍ನಲ್ಲಿ ಸದ್ದುಮಾಡುತ್ತಿರುವ ಚಿತ್ರ. ಸಾಕಷ್ಟು ನೀರಿಕ್ಷೆ ಹುಟ್ಟಿಸಿರುವ ಈ ಚಿತ್ರದ ಟ್ರೇಲರ್ ಹಾಗೂ ಫಸ್ರ್ಟ ಲುಕ್‍ಗಳು ಚಿತ್ರವೂ ಬಾಲಿವುಡ್ ನಟಿ ಶ್ರೀದೇವಿಯರ ಜೀವನಕತೆಯನ್ನು ಬಿಂಬಿಸುತ್ತಿರುವುದಕ್ಕೆ ಸಾಕ್ಷಿ ಒದಗಿಸುತ್ತಿವೆ. ಕಣ್ಣು ಹೊಡೆಯುವ ಮೂಲಕ ವಿಶ್ವಖ್ಯಾತಿ ಗಳಿಸಿದ ನಟಿ ಪ್ರಿಯಾ ವಾರಿಯರ್ ಶ್ರೀದೇವಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಪೋಸ್ಟ್‍ರನಲ್ಲಿ ಬಾತ್ ಟಬ್‍ನಿಂದ ಎರಡು ಪಾದಗಳು ಹೊರಚಾಚಿದಂತಿದ್ದು, ಇದು ನೋಡುಗರಿಗೆ ಶ್ರೀದೇವಿ ಸಾವಿನ ಕತೆ ಎಂಬ ಅನುಮಾನ ಮೂಡಿಸುತ್ತಿದೆ. 

ಆದರೆ ಶ್ರೀದೇವಿ ಚಿತ್ರಕತೆಯನ್ನು ತೆರೆಗೆ ತರುತ್ತಿರುವ ಚಿತ್ರತಂಡದ ವಿರುದ್ಧ ಬೋನಿಕಪೂರ್ ಸಿಟ್ಟಾಗಿದ್ದು, ಸಿನಿಮಾ ಟೀಂಗೆ ಲೀಗಲ್ ನೊಟೀಸ್ ರವಾನಿಸಿದ್ದಾರೆ. ಚಿತ್ರವೂ ಶ್ರೀದೇವಿ ಜೀವನ ಹಾಗೂ ಸಾವಿಗೆ ಹತ್ತಿರವಾದ ಸಂಗತಿಗಳನ್ನು ಒಳಗೊಂಡಿರುವದನ್ನು ಟ್ರೇಲರ್ ಸಾಬೀತುಪಡಿಸಿದೆ. ಹೀಗಾಗಿ ಅನುಮತಿ ಹಾಗೂ ಸರಿಯಾದ ಮಾಹಿತಿ ಇಲ್ಲದೆ ಶ್ರೀದೇವಿ ಕುರಿತು ಚಿತ್ರ ಮಾಡುತ್ತಿರುವ ಚಿತ್ರತಂಡದ ವಿರುದ್ಧ ಬೋನಿಕಪೂರ್ ಸಮರ ಸಾರಿದ್ದಾರೆ. ಇನ್ನು ಶ್ರೀದೇವಿ ಪುತ್ರಿಯರು ಕೂಡ ಈ ಚಿತ್ರಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. 


 ಅರಾತ್ ಎಂಟರಟೈನ್‍ಮೆಂಟ್ ಈ ಚಿತ್ರ ನಿರ್ಮಿಸುತ್ತಿದ್ದು, ಪ್ರಶಾಂತ್ ಮಂಪುಲ್ಯ ನಿರ್ದೇಶಿಸುತ್ತಿದ್ದಾರೆ. ಬೋನಿ ಕಪೂರ್ ಲೀಗಲ್ ನೊಟೀಸ್ ಬಗ್ಗೆ ಪ್ರತಿಕ್ರಿಯಿಸಿರುವ ಪ್ರಶಾಂತ್, ಬೋನಿ ಕಪೂರ್ ಲೀಗಲ್ ನೊಟೀಸ್ ತಲುಪಿದೆ. ಅದನ್ನು ನಾವು ಕೋರ್ಟ್‍ನಲ್ಲಿ ಎದುರಿಸುತ್ತೇವೆ. ಇದು ಸಸ್ಪೆನ್ಸ್ ಹಾಗೂ ಥ್ರಿಲ್ಲರ್ ಚಿತ್ರವಾಗಿದೆ. ಶ್ರೀದೇವಿ ಅನ್ನೋದು ತುಂಬ ಸಾಮಾನ್ಯವಾದ ಹೆಸರು. ಹಾಗೆಯೇ ನನ್ನ ಚಿತ್ರದ ನಾಯಕಿಯ ಹೆಸರೂ ಕೂಡ ಶ್ರೀದೇವಿ. ಆಕೆಯೂ ನಟಿಯಾಗಿರುತ್ತಾಳೆ ಎಂದು ವಿವರಿಸಿದ್ದಾರೆ. 

ಕಣ್ಣು ಮಿಟುಕಿಸುವ ಮೂಲಕವೇ ರಾತ್ರಿ ಬೆಳಗಾಗೋದ್ರಲ್ಲಿ ಸ್ಟಾರ್ ಆದ ಪ್ರಿಯಾ ವಾರಿಯರ್ ಈ ಚಿತ್ರದ ಮೂಲಕ ಬಾಲಿವುಡ್‍ಗೆ ಎಂಟ್ರಿಯಾಗಿದ್ದು, ಆಕೆ ನಟಿಸಿರುವ ಒರು ಅಡರ್ ಲವ್ ಸಿನಿಮಾ ಬಿಡುಗಡೆಗೆ ಬಾಕಿ ಇರುವಂತೆಯೇ ಪ್ರಿಯಾ ಎರಡನೇ ಚಿತ್ರದಲ್ಲಿ ಬ್ಯುಸಿಯಾಗಿದ್ದು, ಶ್ರೀದೇವಿಯಾಗಿ  ನಟಿಸುತ್ತಿದ್ದಾರೆ. ಲಂಡನ್‍ನಲ್ಲಿ ಸಿನಿಮಾ ಚಿತ್ರೀಕರಣ ನಡೆದಿದ್ದು, ಶ್ರೀದೇವಿ ಬಂಗ್ಲೋ ತೆರೆಗೆ ಬಂದ್ರೆ ಮತ್ತಷ್ಟು ವಿವಾದಗಳು ಹುಟ್ಟಿಕೊಳ್ಲೋದಂತೂ ಗ್ಯಾರಂಟಿ. 


ಸಂಬಂಧಿತ ಟ್ಯಾಗ್ಗಳು

#Shridevi #Boney Kapoor #Shridevi bungalow #Fight


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ