ಕನ್ಯತ್ವದ ಬಗ್ಗೆ ಮಾತನಾಡಿ ಕೆಲಸ ಕಳೆದುಕೊಂಡ ಪ್ರೊಫೆಸರ್

 Professor Who Talked About Virginity And Lost His Job

17-01-2019

ವಿದ್ಯಾರ್ಥಿಗಳಿಗೆ ಪಾಠ ಹೇಳಬೇಕಾದ ಪ್ರೊಫೆಸರ್ ಒಬ್ಬ ಯುವತಿಯರ ಬಗ್ಗೆ ಅಸಹ್ಯವಾಗಿ ಮಾತನಾಡಿ ತನ್ನ ಕೆಲಸ ಕಳೆದುಕೊಂಡಿದ್ದಾನೆ. ಜಾಧವಪುರ್ ವಿವಿ ಪ್ರೊಫೆಸರ್ ಕನಕ್ ಸರ್ಕಾರ್ ಹೀಗೆ ಕೆಲಸ ಕಳೆದುಕೊಂಡ  ವ್ಯಕ್ತಿ. ಸಾಮಾಜಿಕ ಜಾಲತಾಣದಲ್ಲಿ ತಮ್ಮ ಕೀಳು ಮನಸ್ಥಿತಿಯ ಹೇಳಿಕೆಯನ್ನು ಹರಿಬಿಟ್ಟಿದ್ದ ಈ ಪ್ರೊಫೆಸರ್ ಇದೇ ಕಾರಣಕ್ಕೆ ಕೆಲಸ ಕಳೆದುಕೊಂಡಿದ್ದಾರೆ. 

ಯುವತಿಯರ ಕನ್ಯತ್ವವನ್ನು ತಂಪು ಪಾನೀಯದ ಸೀಲ್‍ಗೆ ಹೋಲಿಸಿದ್ದ  ಪ್ರೊಫೆಸರ್, ನೀವು ಸೀಲ್ ಒಡೆದಿರುವ ತಂಪು ಪಾನೀಯ ಖರೀದಿಸುತ್ತೀರಾ ಎಂದು ಪ್ರಶ್ನಿಸಿ ಫೇಸ್‍ಬುಕ್‍ನಲ್ಲಿ ಪೋಸ್ಟ್ ಹಾಕಿದ್ದರು. ಇದಕ್ಕೆ ತೀಕ್ಷ್ಣ ಪ್ರತಿಕ್ರಿಯೆ ಎದುರಾಗಿತ್ತು.  ತಕ್ಷಣ ಎಚ್ಚೆತ್ತ ಪ್ರೊಫೆಸರ್ ಪೋಸ್ಟ್ ಡಿಲೀಟ್ ಮಾಡಿದ್ದರು. ಆದರೆ ಅಷ್ಟರಲ್ಲಾಗಲೇ ಪೋಸ್ಟ್‍ನ  ಸ್ಕ್ರಿನ್ ಶಾಟ್ ವೈರಲ್ ಆಗಿದ್ದು, ವಿವಾದಕ್ಕೆ ಕಾರಣವಾಗಿತ್ತು.
 
ಈ ಉಪನ್ಯಾಸಕನ ವಿವಾದಾತ್ಮಕ ಫೇಸ್‍ಬುಕ್ ಪೋಸ್ಟ್ ಬಗ್ಗೆ  ಪ್ರತಿಕ್ರಿಯೆ ನೀಡಿದ್ದ ಜಾಧವ್ ಪುರ ವಿವಿ ಉಪಕುಲಪತಿ ಸುರಂಜನ್ ದಾಸ್ , ಅವರ ಫೇಸ್‍ಬುಕ್ ಪೋಸ್ಟ್ ವಿವಿಯ ಘನತೆಯನ್ನು  ಕುಗ್ಗಿಸಿದೆ. ಹೀಗಾಗಿ ಅವರು ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದಿದ್ದರು. ತಕ್ಷಣ ಕ್ರಮಕ್ಕೆ ಮುಂದಾದ ವಿವಿಯ ಸ್ಟೂಡೆಂಟ್ ಟೀಚರ್  ಸಮಿತಿ ಪ್ರೊಫೆಸರ್ ಕೆಲಸಕ್ಕೆ ಹಾಜರಾಗದಂತೆ ಸೂಚಿಸಿದ್ದು, ಕ್ಯಾಂಪಸ್ ಒಳಪ್ರವೇಶಕ್ಕೂ ನಿಷೇಧ ಹೇರಲಾಗಿದೆ. ಒಟ್ಟಿನಲ್ಲಿ ಹೆಣ್ಣುಮಕ್ಕಳ ಬಗ್ಗೆ ಕೀಳುಅಭಿರುಚಿಯ ಹೇಳಿಕೆ ನೀಡಿರುವ ಪ್ರೊಫೆಸರ್ ಕೊನೆಗೂ ಕೆಲಸ ಕಳೆದುಕೊಂಡಿದ್ದು, ಇನ್ನಾದರೂ ಯೋಗ್ಯತೆ ತಕ್ಕಂತೆ ಆತ ವರ್ತಿಸಲಿ ಎಂಬ ಟೀಕೆಯೂ ವ್ಯಕ್ತವಾಗಿದೆ. 


ಸಂಬಂಧಿತ ಟ್ಯಾಗ್ಗಳು

# Professor #Lost Job #Kanak Sarkar #Talked About Virginity


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ