ದರ್ಶನ ಬರ್ತಡೆ ಆಚರಿಸಲ್ಲ ಅಂದಿದ್ಯಾಕೆ ಗೊತ್ತಾ? 

 Darshan

17-01-2019

ಸ್ಯಾಂಡಲ್‍ವುಡ್‍ಗೆ ಹಿರಿಯಣ್ಣನಂತಿದ್ದ ನಟ ಹಾಗೂ ಮಾಜಿ ಸಚಿವ ಅಂಬರೀಶ್ ನಿಧನ ಚಿತ್ರರಂಗಕ್ಕೆ ತುಂಬಲಾರದ ನಷ್ಟ ಉಂಟುಮಾಡಿದೆ. ಅಂಬರೀಶ್ ನಿಧನದಿಂದ ಚಿತ್ರರಂಗದ ಹಲವು ನಟ-ನಟಿಯರು ಅದ್ದೂರಿ ಕಾರ್ಯಕ್ರಮಗಳನ್ನು ಕೈಬಿಟ್ಟಿದ್ದಾರೆ. ಇತ್ತೀಚಿಗಷ್ಟೆ ನಟ ಯಶ್ ತಾವು ಬರ್ತಡೆ ಮಾಡಿಕೊಳ್ಳೋದಿಲ್ಲ ಎಂದಿದ್ದರು. ಇದೀಗ ಈ ಸಾಲಿಗೆ ಚಾಲೆಂಜಿಂಗ್ ಸ್ಟಾರ್ ಖ್ಯಾತಿಯ ದರ್ಶನ ಕೂಡ ಸೇರ್ಪಡೆಕೊಂಡಿದ್ದಾರೆ. ಈ ಬಾರಿ ಹುಟ್ಟುಹಬ್ಬವನ್ನು ಆಚರಿಸಲ್ಲ ಎಂದಿರುವ ದರ್ಶನ, ಅಭಿಮಾನಿಗಳಿಗೂ ಸರಳವಾಗಿ ಆಚರಿಸುವಂತೆ ಮನವಿ ಮಾಡಿದ್ದಾರೆ. 

ಚಾಲೆಂಜಿಂಗ್ ಸ್ಟಾರ್ ದರ್ಶನ ಈ ಬಾರಿ ತಮ್ಮ ಬರ್ತಡೆಯನ್ನು ಅದ್ದೂರಿಯಾಗಿ ಆಚರಿಸದಿರಲು ನಿರ್ಧರಿಸಿದ್ದಾರೆ. ಫೆಬ್ರವರಿ 16 ರಂದು ದರ್ಶನ ಹುಟ್ಟುಹಬ್ಬ, ಅಂದು ಸಾವಿರಾರು ಅಭಿಮಾನಿಗಳು ದರ್ಶನ ನಿವಾಸಕ್ಕೆ ಬಂದು ಕೇಕ್ ಕತ್ತರಿಸಿ ದರ್ಶನಗೆ ಹೂವಿನ ಹಾರ ಹಾಕಿ ತಮ್ಮ ನೆಚ್ಚಿನ ನಟನ ಜೊತೆ ಪೋಟೋ ಕ್ಲಿಕ್ಕಿಸಿಕೊಂಡು ಹೋಗುತ್ತಾರೆ. ಆದರೆ ಈ ಬಾರಿ ಅಪ್ಪಾಜಿ( ಅಂಬರೀಶ್) ನಿಧನದ ಹಿನ್ನೆಲೆಯಲ್ಲಿ ತನ್ನ ಬರ್ತಡೆಯನ್ನು ಸರಳವಾಗಿ ಆಚರಿಸಿ ಎಂದು ದರ್ಶನ ಮನವಿ ಮಾಡಿದ್ದಾರೆ. 

ಹಾರ-ತುರಾಯಿ, ಕಟೌಟ್, ಹಾಲಿನ ಅಭಿಷೇಕ, ಕೇಕ್‍ಗಳಿಗೆ ಹಣ ಸುರಿಯುವ ಬದಲು ಸರಳವಾಗಿ ಹುಟ್ಟುಹಬ್ಬ ಆಚರಿಸಿ ನೀವು ಖರ್ಚು ಮಾಡುವ ಹಣವನ್ನ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ನೀಡುವಂತೆ ದರ್ಶನ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.ಅಲ್ಲದೆ ಹುಟ್ಟುಹಬ್ಬದ ದಿನದಂದು ನಿವಾಸದ ಬಳಿ ಬಂದು ವಿಪರೀತ ಪಟಾಕಿ ಸಿಡಿಸಿ, ಅಕ್ಕ-ಪಕ್ಕದ ಮನೆಗಳ ಹೂಕುಂಡಗಳನ್ನು ಒಡೆದುಹಾಕಿ, ತೊಂದರೆಕೊಡದೇ ಶಾಂತಿಯಿಂದ ಸಹಕರಿಸಿ ಎಂದು  ದರ್ಶನ ಕೋರಿದ್ದಾರೆ. ಆಂಬರೀಶ್‍ಗೆ ಆಪ್ತರಾಗಿದ್ದ ದರ್ಶನ ಅಂಬಿ ನಿಧನದ ವಿಚಾರ ತಿಳಿಯುತ್ತಿದ್ದಂತೆ ವಿದೇಶದ ಶೂಟಿಂಗ್ ಕ್ಯಾನ್ಸಲ್ ಮಾಡಿ ನಗರಕ್ಕೆ ವಾಪಸ್ಸಾಗಿದ್ದರು. 


ಸಂಬಂಧಿತ ಟ್ಯಾಗ್ಗಳು

#Darshan # Not To Celebrate #Birthday #Ambarish


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ