ನಾವು ಆಫರೇಶನ್ ಮಾಡ್ಲಿಲ್ಲ- ಬಿಎಸ್‍ವೈ

 We did not make Operation Bsy

17-01-2019

ಕಳೆದ ಮೂರ್ನಾಲ್ಕು ದಿನಗಳಿಂದ ರಾಜ್ಯದಲ್ಲಿ ಎಲ್ಲಿ ನೋಡಿದ್ರೂ ಆಫರೇಶನ್ ಕಮಲದ್ದೇ ಮಾತು. ತಮ್ಮ ಶಾಸಕರನ್ನು ಹರಿಯಾಣದ ಗುರಗಾಂವ್‍ನಲ್ಲಿಟ್ಟ ಬಿಜೆಪಿ ಕಾಂಗ್ರೆಸ್ ಶಾಸಕರನ್ನು ಸೆಳೆದು ಸರ್ಕಾರ ಉರುಳಿಸುವ ಪ್ರಯತ್ನ ಆರಂಭಿಸಿತ್ತು. ಆದರೆ ಕೊನೆಕ್ಷಣದಲ್ಲಿ ಆಫರೇಶನ್ ಫೇಲ್ ಆದ ಪರಿಣಾಮ, ಬಿಜೆಪಿಗೆ ಮತ್ತೊಮ್ಮೆ ಮುಖಭಂಗವಾಗಿದೆ. ಆದರೆ ಇದೆಲ್ಲವನ್ನು ಅಲ್ಲಗಳೆಯುತ್ತಿರುವ ಬಿಎಸ್‍ವೈ ಮಾತ್ರ ನಾವು ಆಫರೇಶನ್ ಮಾಡೇ ಇಲ್ಲ ಎನ್ನುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. 

ಸಮ್ಮಿಶ್ರ ಸರ್ಕಾರವನ್ನು ಉರುಳಿಸೋಕೆ ಬಿಜೆಪಿ ಆಫರೇಶನ್ ಕಮಲದ ಸರ್ಕಸ್ ನಡೆಸಿದ್ದು, ಈ ರಾಜ್ಯದ ಕಲ್ಲು-ಕಲ್ಲಿಗೂ ಗೊತ್ತು. ಆದರೆ ಸದಾ ಮಾತು ಬದಲಿಸೋದರಲ್ಲಿ ಪ್ರವೀಣರಾಗಿರುವ ಬಿಎಸ್‍ವೈ ಮಾತ್ರ ಬೇರೆಯದೇ ಕತೆ ಹೇಳ್ತಿದ್ದಾರೆ. ಸಿದ್ಧಗಂಗಾಶ್ರೀಗಳ ಅನಾರೋಗ್ಯ ಹಿನ್ನೆಲೆಯಲ್ಲಿ ಗುರಗಾಂವ್‍ನಿಂದ ನೇರವಾಗಿ ಬೆಂಗಳೂರಿಗೆ ಬಂದು ಶ್ರೀಗಳ ದರ್ಶನಕ್ಕೆ ತೆರಳಿದ ಬಿಎಸ್‍ವೈ ಈ ವೇಳೆ ತಮಗೆ ಎದುರಾದ ಮಾಧ್ಯಮಮಿತ್ರರಿಗೆ ಶಾಕ್ ನೀಡಿದ್ದಾರೆ. 

ನಾವೇನೂ ಆಫರೇಶನ್ ಮಾಡಿಲ್ಲ. ಬದಲಾಗಿ ಸ್ವತಃ ಸಿಎಂ ಕುಮಾರಸ್ವಾಮಿಯವರೇ ನಮ್ಮ ಶಾಸಕರೊಬ್ಬರಿಗೆ ಸಚಿವ ಸ್ಥಾನ ನೀಡುವ ಆಮಿಷ ಒಡ್ಡಿದ್ದರು. ಹೀಗಾಗಿ ನಮ್ಮ ಶಾಸಕರನ್ನು ಉಳಿಸಿಕೊಳ್ಳುವ ಸಲುವಾಗಿ ಗುರಗಾಂವ್‍ನಲ್ಲಿ ಬೀಡು ಬಿಟ್ಟಿದ್ದೇವೆ. ನಾವು ಯಾವ ಕಾಂಗ್ರೆಸ್ ಶಾಸಕರನ್ನು ಕರೆದಿಲ್ಲ ಎಂದು ಪ್ಲೇಟ್ ಬದಲಾಯಿಸಿದ್ದಾರೆ. ಅಷ್ಟೇ ಅಲ್ಲ, ಅಲ್ಲಿ ನಾವು ಲೋಕಸಭಾ ಚುನಾವಣೆ ಎದುರಿಸುವ ಕುರಿತು ಸಭೆ ನಡೆಸಿದ್ದೇವೆ. ನಾಳೆ ನಮ್ಮ ಎಲ್ಲ ಶಾಸಕರು ರಾಜ್ಯಕ್ಕೆ ವಾಪಸ್ಸಾಗಲಿದ್ದು, ಸೋಮವಾರದಿಂದ ನಾವು ಲೋಕಸಭಾ ಚುನಾವಣೆ ಎದುರಿಸಲು ಸಿದ್ಧತೆ ನಡೆಸಲಿದ್ದೇವೆ ಎಂದಿದ್ದಾರೆ. 

ಬಿಜೆಪಿ ಶಾಸಕರನ್ನು ಗುರುಗಾಂವ್‍ನಲ್ಲಿ ಕೂಡಿಹಾಕಿದೆ ಎಂಬ ಕಾಂಗ್ರೆಸ್ ಟೀಕೆಗೆ ಉತ್ತರಿಸಿದ ಬಿಎಸ್‍ವೈ ಕೂಡಿಹಾಕಿಲ್ಲ. ಕಾಂಗ್ರೆಸ್‍ನಿಂದ ರಕ್ಷಿಸಲು ಅಲ್ಲಿಗೆ ಕರೆದೊಯ್ದಿದ್ದೇವೆ ಎಂದಿದ್ದಾರೆ. ಒಟ್ಟಿನಲ್ಲಿ ಆಫರೇಶನ್ ಕಮಲದ ಮಾತನ್ನೇ ಬಿಎಸ್‍ವೈ ಅಲ್ಲಗಳೆದಿದ್ದು, ರಾಜಕಾರಣಿಗಳು ಅದೇಷ್ಟು ಸಾರಿ ಬಣ್ಣ ಬದಲಾಯಿಸುತ್ತಾರೋ ಎಂದು ಜನರು ಅಚ್ಚರಿ ಪಡುತ್ತಿದ್ದಾರೆ. 


ಸಂಬಂಧಿತ ಟ್ಯಾಗ್ಗಳು

#Bsy #Congress # Operation #Mla


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ