ಕುತೂಹಲ ಮೂಡಿಸಿದ ಕೈ ಶಾಸಕಾಂಗ ಸಭೆ

Congress Legislative Assembly Meeting

17-01-2019

ಸಮ್ಮಿಶ್ರ ಸರ್ಕಾರ ರಚನೆಯಾದಾಗಿನಿಂದಲೂ ಶಾಸಕರ ಬ್ಲ್ಯಾಕ್‍ಮೇಲ್ ತಂತ್ರದಿಂದ ಬೇಸತ್ತು ಹೋಗಿರುವ ಕಾಂಗ್ರೆಸ್ ನಾಳೆ ಶಾಸಕಾಂಗ ಸಭೆ ಕರೆದಿದ್ದು, ಈ ಸಭೆಗೆ ಹಾಜರಾಗದ ಶಾಸಕರ ಸದಸ್ಯತ್ವ ರದ್ದು ಮಾಡುವ ಬೆದರಿಕೆ ಒಡ್ಡಿದೆ. ಆಫರೇಶನ್ ಕಮಲದ ಭೀತಿಯಲ್ಲಿರುವ ಕೈ ಪಾಳಯ ಕಾಂಗ್ರೆಸ್ ಶಾಸಕರನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ನಾಳೆ ಶಾಸಕಾಂಗ ಸಭೆಗೆ ಹಾಜರಾತಿ ಕಡ್ಡಾಯ ಎಂದು ಕೆಪಿಸಿಸಿ ಎಚ್ಚರಿಕೆ ನೀಡಿದೆ. 

ಬಿಜೆಪಿ ಸತತವಾಗಿ ಕಾಂಗ್ರೆಸ್‍ನ ಅತೃಪ್ತ ಶಾಸಕರನ್ನು ಸೆಳೆಯಲು ಯತ್ನಿಸುತ್ತಿದೆ. ಹೀಗಾಗಿ ಕಾಂಗ್ರೆಸ್ ಶಾಸಕರನ್ನು ಉಳಿಸಿಕೊಳ್ಳಲು ಕಳೆದ ಮೂರ್ನಾಲ್ಕು ದಿನಗಳಿಂದ ಪ್ರಯತ್ನಿಸುತ್ತಿದ್ದು, ಬಹುತೇಕ ಯಶಸ್ವಿಯಾಗಿದೆ. ಆದರೂ ಕೂಡ ಎಲ್ಲ ಶಾಸಕರನ್ನು ಒಂದೆಡೆ ಸೇರಿಸಿ ಸಭೆ ಮೂಲಕ ಅವರಲ್ಲಿ ಪಕ್ಷ ತೊರೆದು ಹೋಗದಂತೆ ಮನವೊಲಿಸುವುದು ಹಾಗೂ ಸೂಕ್ತ ಸ್ಥಾನಮಾನದ ಕುರಿತು ಚರ್ಚೆ ನಡೆಸಿ ಭರವಸೆ ನೀಡುವುದು ಸಭೆ ಉದ್ದೇಶವಾಗಿದ್ದು, ಎಲ್ಲ 80 ಶಾಸಕರಿಗೂ ಕಡ್ಡಾಯವಾಗಿ ಹಾಜರಾಗುವಂತೆ ಕೆಪಿಸಿಸಿ ಸೂಚನೆ ರವಾನಿಸಿದೆ. 

ಶಾಸಕಾಂಗಸಭೆಗೆ ಹಾಜರಾಗುವಂತೆ ಕೆಪಿಸಿಸಿ ಎಮ್‍ಎಲ್‍ಎಗಳಿಗೆ ವಿವರವಾಗಿ ಪತ್ರ ಬರೆದಿದ್ದು,  ಒಂದೊಮ್ಮೆ ಸಭೆಗೆ ಗೈರಾಗಿ ಬೇರೆ ರೀತಿಯ ಚಟುವಟಿಕೆಗಳನ್ನು ನಡೆಸುತ್ತಿರುವ ಮಾಹಿತಿ ಲಭ್ಯವಾದಲ್ಲಿ ಸದಸ್ಯತ್ವವನ್ನೇ ರದ್ದು ಮಾಡುವ ಎಚ್ಚರಿಕೆ ನೀಡಿದೆ.  ಕಾಂಗ್ರೆಸ್ ಮೇಲಿನ ಅತೃಪ್ತಿಯಿಂದ ಮುಂಬೈ ಸೇರಿದ್ದ ಕಾಂಗ್ರೆಸ್‍ನ ನಾಲ್ಕಕ್ಕೂ ಹೆಚ್ಚು ಶಾಸಕರು ವಾಪಸ್ಸಾಗಿದ್ದಾರೆ. ಆದರೆ ಸಚಿವ ಸ್ಥಾನ ಕಳೆದುಕೊಂಡು ಅಸಮಧಾನಗೊಂಡಿರುವ ರಮೇಶ್ ಜಾರಕಿಹೊಳಿಯೊಂದಿಗೆ ಒಂದಿಬ್ಬರು ಶಾಸಕರು ಸಂಪರ್ಕದಲ್ಲಿದ್ದಾರೆ ಎನ್ನಲಾಗುತ್ತಿದೆ.

ರಮೇಶ್ ಜಾರಕಿಹೊಳಿ ಕಳೆದ ಹಲವು ಶಾಸಕಾಂಗಸಭೆಗೆ ಸತತ ಗೈರಾಗಿದ್ದು, ನಾಳೆ ಕೂಡ ಗೈರಾಗುವ ಸಾಧ್ಯತೆ ಇದೆ. ಒಂದೊಮ್ಮೆ ರಮೇಶ್ ಜಾರಕಿಹೊಳಿ ಗೈರಾದಲ್ಲಿ ಕೆಪಿಸಿಸಿ ಯಾವ ಕ್ರಮಕೈಗೊಳ್ಳುತ್ತೆ. ಅಥವಾ ಕಾಂಗ್ರೆಸ್‍ನ ಹಿರಿಯ ನಾಯಕರು ಮತ್ತೊಮ್ಮೆ ರಮೇಶ್ ಜಾರಕಿಹೊಳಿ ಮನವೊಲಿಸುವ ಪ್ರಯತ್ನ ಮಾಡ್ತಾರಾ ಅನ್ನೋದು ಸಧ್ಯದ ಕುತೂಹಲ. ಇದಲ್ಲದೇ ನಾಳಿನ ಶಾಸಕಾಂಗಸಭೆಯಲ್ಲಿ ಅತೃಪ್ತ ಶಾಸಕರೂ ಕೂಡ ತಮ್ಮ ಬೇಡಿಕೆಗಳನ್ನು ಮುಂದಿಡುವ ಸಾಧ್ಯತೆ ಇದ್ದು, ಇದಕ್ಕೆ ಕಾಂಗ್ರೆಸ್ ಹೇಗೆ ಪ್ರತಿಕ್ರಿಯಿಸುತ್ತೆ ಅನ್ನೋದು ಸಧ್ಯದ ಕುತೂಹಲ. 


ಸಂಬಂಧಿತ ಟ್ಯಾಗ್ಗಳು

#Congress # Meeting #Legislative Assembly #Karnataka


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ