ಮತದಾರರ ಅಂತಿಮ ಪಟ್ಟಿ ಪ್ರಕಟ 

 The Final List of Voters is Published

16-01-2019

ಮುಂಬರುವ  ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನಗರದ ಎಲ್ಲಾ 28 ವಿಧಾನಸಭಾ ಕ್ಷೇತ್ರಗಳ ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದ್ದು ಸಾರ್ವಜನಿಕರು ಮತದಾರರ ಪಟ್ಟಿಯನ್ನು ಪರಿಶೀಲಿಸಬಹುದಾಗಿದೆ. ಮತದಾರರ ಸಹಾಯಕ ನೋಂದಾಣಾಧಿಕಾರಿಗಳ ಕಚೇರಿ ಹಾಗೂ ವಾರ್ಡ್ ಕಚೇರಿಗಳಲ್ಲಿ ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗಿದ್ದು ಅಲ್ಲಿಗೆ ತೆರಳಿ  ಸಾರ್ವಜನಿಕರು ಮತದಾರರ ಪಟ್ಟಿಯನ್ನು ಪರಿಶೀಲಿಸಬದು ಎಂದು ಚುನಾವಣಾ ಅಧಿಕಾರಿ ಹಾಗೂ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಅವರು ತಿಳಿಸಿದರು.

ಮತದಾರರ ಪಟ್ಟಿಯಲ್ಲಿ ಹೆಸರು ನೊಂದಣಿಯಾಗದವರು ನಿರಾಶರಾಗಬೇಕಾಗಿಲ್ಲ. ಲೋಕಾಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸುವ ದಿನಾಂಕದಿಂದ 10 ದಿನಗಳ ಒಳಗಾಗಿ ತಮ್ಮ ಹೆಸರುಗಳನ್ನು ಅರ್ಜಿ ನಮೂನೆ 6, 7, 8, 8 ಎ ಅರ್ಜಿಗಳನ್ನು ಎರಡು ಪ್ರತಿಗಳಲ್ಲಿ ಸಲ್ಲಿಸಬಹುದು. ಅಲ್ಲದೇ ಇಂದು ಪ್ರಕಟಿಸಿರುವ ಅಂತಿಮ ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದವರು, ಹೆಸರು ತಪ್ಪಾಗಿರುವವರು, ವರ್ಗಾವಣೆ ಯಾಗ ಬೇಕಾದವರು ಕೂಡ ಆಕ್ಷೇಪಣೆಗಳನ್ನು ಸಲ್ಲಿಸಬಹುದು ಎಂದರು.

ಕಳೆದ ವರ್ಷ ಅಕ್ಟೋಬರ್ ತಿಂಗಳ 10 ರಂದು ಪ್ರಕಟಿಸಲಾಗಿದ್ದ, ಪರಿಷ್ಕೃತ ಕರಡು ಮತದಾರರ ಪಟ್ಟಿಗೆ ಬಂದ ಎಲ್ಲಾ ಆಕ್ಷೇಪಣೆಗಳನ್ನು ಇತ್ಯರ್ಥ ಪಡಿಸಲಾಗಿದ್ದು, ಅಂತಿಮವಾಗಿ ಮತದಾರರ ಪಟ್ಟಿಯನ್ನು ಆನ್ ಲೈನ್  ವೆಬ್ ಸೈಟ್ ನಲ್ಲೂ ಮತದಾರರ ಅನುಕೂಲಕ್ಕಾಗಿ ಪ್ರಕಟಿಸಲಾಗಿದೆ ಅಂತಿಮ ಮತದಾರರ ಪಟ್ಟಿಯಲ್ಲಿ 46 ಲಕ್ಷ 32 ಸಾವಿರ 900 ಪುರುಷರು ಮತ್ತು 42 ಲಕ್ಷ 48 ಸಾವಿರದ 166 ಮಹಿಳೆಯರು ಸೇರಿದಂತೆ ಒಟ್ಟು 88 ಲಕ್ಷ 81 ಸಾವಿರದ 66 ಮತದಾರರು ಲೋಕಸಭಾ ಚುನಾವಣೆಯಲ್ಲಿ ಮತ ಚಲಾಯಿಸಲಿದ್ದಾರೆ ಎಂದು  ಪತ್ರಿಕಾ ಗೋಷ್ಠಿಯಲ್ಲಿ ವಿವರಿಸಿದರು.

ಇಂದು ಪ್ರಕಟಿಸಲಾದ ಮತದಾರರ ಪಟ್ಟಿಯಲ್ಲಿ 18 ರಿಂದ 19 ವರ್ಷದೊಳಗಿನ 6 ಲಕ್ಷದ 70 ಸಾವಿರದ 20 ಮತದಾರರು 18 ರಿಂದ 19 ವರ್ಷದವರಾಗಿದ್ದಾರೆ. 80 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ಮತದಾರರು 13 ಲಕ್ಷದ 85 ಸಾವಿರದ 24 ಮತದಾರರು ಇದ್ದಾರೆ ಎಂದು ವಿವಿರ ನೀಡಿದರು. ಈ ಬಾರಿ ವಿಳಾಸಗಳನ್ನು ಬದಲಾಯಿಸಿಕೊಂಡಿರುವವರು ಸಾವನ್ನಪ್ಪಿದವರು ಹಾಗೂ ನಕಲಿ ಮತದಾರರು ಸೇರಿದಂತೆ ಒಟ್ಟು 1 ಲಕ್ಷದ 75 ಸಾವಿರ 183 ಮತದಾರರನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕಲಾಗಿದೆ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ಎಂದರೆ 14 ಸಾವಿರದ 880, ಯಶವಂತಪುರ ಕ್ಷೇತ್ರದ 12,798 ಮಹದೇವಪುರದ ಕ್ಷೇತ್ರದ 12,537, ಹಾಗೂ ದಾಸರಹಳ್ಳಿ ಕ್ಷೇತ್ರದ 10 ಸಾವಿರದ 596 ಮತದಾರರನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕಲಾಗಿದೆ. ಉಳಿದಂತೆ ಎಲ್ಲಾ ವಿಧಾನ ಕ್ಷೇತ್ರಗಳಲ್ಲೂ ಅನರ್ಹ ಮತದಾರರನ್ನು ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಅವರು ತಿಳಿಸಿದರು.

ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ಎಲ್ಲಾ 28 ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಪಟ್ಟಂತೆ ಪ್ರತಿ ಭಾಗ ಸಂಖ್ಯೆಗೆ ಒಬ್ಬ ಮತಗಟ್ಟೆ ಅಧಿಕಾರಿಯಂತೆ ಒಟ್ಟು 8,514 ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಅವರ ಹೆಸರು ಮತ್ತು ದೂರವಾಣಿ ಸಂಖ್ಯೆಗಳನ್ನು ನಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಅಳವಡಿಸಲಾಗಿದೆ ಎಂದು ಅವರು ತಿಳಿಸಿದರು. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಎಲ್ಲಾ ವಿದ್ಯುನ್ಮಾನ ಮತಯಂತ್ರಗಳ ಕಾರ್ಯಾ ವೈಖರಿಯನ್ನು ಕಳೆದ ಒಂದು ತಿಂಗಳಿನಿಂದ ಜಂಟಿ ಆಯುಕ್ತರ (ದಕ್ಷಿಣ) ಕಚೇರಿಯಲ್ಲಿ ಪರಿಶೀಲಿಸಲಾಗಿದೆ. ಉತ್ತರ ಲೋಕಸಭಾ ಕ್ಷೇತ್ರದ ವಿದ್ಯುನ್ಮಾನ ಮತಯಂತ್ರಗಳ ಪರಿಶೀಲನೆ ಕೆಲಸ ಆರಂಭವಾಗಿದೆ. ಕೇಂದ್ರ ಲೋಕಸಭಾದ ಪರಿಶೀಲನೆ ಕಾರ್ಯ ಬಸವೇಶ್ವರ ನಗರದ ಅಂಬೇಡ್ಕರ್ ಕ್ರೀಡಾಂಗಣದಲ್ಲಿ 1 ವಾರದ ನಂತರ ಆರಂಭವಾಗಲಿದೆ.

ಗೋವಿಂದರಾಜನಗರ, ಕೆಆರ್‍ಪುರಂ, ರಾಜರಾಜೇಶ್ವರಿ ನಗರ, ವಿಧಾನಸಭಾ ಕ್ಷೇತ್ರಗಳ ವಿದ್ಯುನ್ಮಾನ ಮತಯಂತ್ರ ಹಾಗೂ ಇವಿ ಪ್ಯಾಟ್ ಗಳನ್ನು ನ್ಯಾಯಾಲಯದ ಆದೇಶ ಬರುವವರೆಗೆ ಲೋಕಸಭಾ ಚುನಾವಣೆಯಲ್ಲಿ ಬಳಸುವಂತಿಲ್ಲ.ಬಾಂಗ್ಲಾ, ಅಸ್ಸಾಂ ಮತ್ತಿತರ ಭಾಗಗಳಿಂದ ಬಂದವರು ಯಾರೇ ಆಗಿರಬಹುದು. ಅವರು ಒಂದು ವಾರ ನೆಲೆಸಿದ್ದರೂ ಮತದಾರರ ಪಟ್ಟಿಯಲ್ಲಿ ನೊಂದಣಿ ಮಾಡಿಕೊಳ್ಳಬಹುದು ಎಂದು ಅವರು ವಿವರಿಸಿದರು.


ಸಂಬಂಧಿತ ಟ್ಯಾಗ್ಗಳು

#2019 Election #Final List #Voters Id #Published


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ