ಮುಳಬಾಗಿಲು ಎಮ್‍ಎಲ್‍ಎ ಕಾಂಗ್ರೆಸ್‍ಗೆ ವಾಪಸ?

 Mulbhagilu MLA to return to Congress?

16-01-2019

ಕೋಲಾರ ಜಿಲ್ಲೆ ಮುಳಬಾಗಿಲು ವಿಧಾನಸಭಾ ಕ್ಷೇತ್ರದ ಪಕ್ಷೇತರ ಶಾಸಕ ನಾಗೇಶ್ ಜೊತೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾತುಕತೆ ನಡೆಸಿದ್ದು, ಸಫಲವಾಗಿದೆ ಎಂಬ ಮಾತು ಕೇಳಿಬರುತ್ತಿದೆ.

ಕಾಂಗ್ರೆಸ್ ಅತೃಪ್ತ ಶಾಸಕರನ್ನ ಮನವೊಲಿಸುವಲ್ಲಿ ಪಕ್ಷದನಾಯಕರು ಯಶಸ್ವಿಯಾಗಿದ್ದು ಈ ಬೆನ್ನಲ್ಲೇ ಇದೇ ಉತ್ಸಾಹದಲ್ಲಿ ದಿನೇಶ್ ಗುಂಡೂರಾವ್ ಪಕ್ಷೇತರ ಶಾಸಕ ನಾಗೇಶ್ ಗೆ ಕರೆ ಮಾಡಿ ಮಾತುಕತೆ ನಡೆಸಿದ್ದಾರೆ. ಈ ಮಾತುಕತೆ ಬಹುತೇಕ ಫಲಪ್ರದವಾಗಿದ್ದು ಮರಳಿ ಕಾಂಗ್ರೆಸ್ ಗೆ ಬೆಂಬಲ ನೀಡಲು ನಾಗೇಶ್ ಸಮ್ಮತಿ ಸೂಚಿಸಿದ್ದಾರೆ ಎನ್ನಲಾಗಿದೆ.

ಕುಮಾರಕೃಪಾ ಅತಿಥಿ ಗೃಹದಿಂದ ಕರೆ ಮಾಡಿದ್ದ ದಿನೇಶ್ ಗುಂಡೂರಾವ್ ನಾಗೇಶ್ ಜೊತೆ ಮಾತುಕತೆ ನಡೆಸಿದ್ದು, ಕಾಂಗ್ರೆಸ್ ಪಕ್ಷದ ಸಹಾಯದಿಂದ ಗೆದ್ದು ನೀವು ಮಾಡಿದ್ದು ಸರಿಯಲ್ಲ. ನಮ್ಮ ಅಧಿಕೃತ ಅಭ್ಯರ್ಥಿ ಕಾರಣಾಂತರದಿಂದ ಸ್ಪರ್ಧೆಯಿಂದ ಹಿಂದೆ ಸರಿಯಬೇಕು ಆದ ಅನಿವಾರ್ಯತೆ ಎದುರಾಯಿತು ಇದರಿಂದಾಗಿ ನಾವು ನಿಮ್ಮನ್ನ ನಮ್ಮ ಪಕ್ಷದ ಅಭ್ಯರ್ಥಿ ಎಂದೇ ಗುರುತಿಸಿ ಪ್ರಚಾರಕ್ಕೆ ಸಹಕಾರ ನೀಡಿದ್ದೆವು. ನಿಮ್ಮ ಗೆಲುವಿನಲ್ಲಿ ಕಾಂಗ್ರೆಸ್ ಮತದಾರರ ಒಲವು ಹೆಚ್ಚಾಗಿದೆ. ಇದನ್ನು ತಾವು ಮನಗಂಡು ಸೂಕ್ತ ನಿರ್ಧಾರ ಕೈಗೊಳ್ಳಬೇಕೆಂದು ಸೂಚಿಸಿದರು.

ಈ ಮನವರಿಕೆಯ ನಂತರ ಸಮಾಧಾನಚಿತ್ತರಾಗಿ ಪ್ರತಿಕ್ರಿಯೆ ನೀಡಿದ ನಾಗೇಶ್ ಕಾಂಗ್ರೆಸ್ ಬೆಂಬಲಕ್ಕೆ ನಿಲ್ಲುವುದಾಗಿ ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಕರೆ ಮಾಡಿದ ದಿನೇಶ್ ಗುಂಡೂರಾವ್ ಇದೇ ಸಂದರ್ಭ ನಾಗೇಶ್ ಅವರಿಗೆ ನಿಗಮ ಮಂಡಳಿಯಲ್ಲಿ ಸ್ಥಾನ ನೀಡುವ ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಕೆಪಿಸಿಸಿ ಅಧ್ಯಕ್ಷರ ಮಾತಿಗೆ ಪಕ್ಷೇತರ ಶಾಸಕ ನಾಗೇಶ್ ಸಮ್ಮತಿ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.ಮಾತಿನ ಕೊನೆಯಲ್ಲಿ ಅವರು ಮೈತ್ರಿ ಸರ್ಕಾರಕ್ಕೆ ಬೆಂಬಲ ನೀಡುವುದಾಗಿ ಕೆಪಿಸಿಸಿ ಅಧ್ಯಕ್ಷರಿಗೆ ಭರವಸೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.


ಸಂಬಂಧಿತ ಟ್ಯಾಗ್ಗಳು

# Mulbhagilu #Return # Mla #Congress


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ