ಪ್ರಥಮ್ ಹೋದೆಯಾ ಪಿಶಾಚಿ ಅಂದ್ರೇ...ಬಂದೆ ಬಿಗ್‍ಬಾಸ್‍ನಲ್ಲಿ...!

Again Pratham In BIgboss Show

16-01-2019

ಹೋದೆಯಾ ಪಿಶಾಚಿ ಅಂದ್ರೆ ಬಂದೇ ಗವಾಕ್ಷಿಲೀ ಅನ್ನೋ ಹಾಗೆ ಖಾಸಗಿ ವಾಹಿನಿಯ ಬಿಗ್ ಬಾಸ್ ಸೀಸನ್ 4 ರಲ್ಲಿ ಜನರಿಗೆ ತಮ್ಮ ವಿಚಿತ್ರ ವರ್ತನೆಯ ಮೂಲಕ ಕಿರಿ ಕಿರಿ ಮೂಡಿಸಿದ್ದ ನಟ ಪ್ರಥಮ್ ಮತ್ತೊಮ್ಮೆ ಬಿಗ್‍ಬಾಸ್ ಮನೆ ಸೇರಿದ್ದಾರೆ. ಹೌದು ಕಿಚ್ಚ ಸುದೀಪ್ ಭಾಗವಹಿಸುತ್ತಿರೋ ಈ ರಿಯಾಲಿಟಿ ಶೋ ಈ ಬಾರಿ ಅಂತಹ ಸದ್ದು ಮಾಡುವುದರಲ್ಲಿ ವಿಫಲವಾಗಿದೆ. ಹೀಗಾಗಿ ಸೀಸನ್ 4 ರ ವಿನ್ನರ್ ಪ್ರಥಮ್‍ನನ್ನು ಬಿಗ್‍ಬಾಸ್ ಮನೆಗೆ ಅತಿಥಿಯಾಗಿ ಕರೆತರಲಾಗಿದ್ದು, ಪ್ರಥಮ್ ಎಂದಿನಂತೆ ಜನರ ಮೆದುಳಿಗೆ ಕೈಇಕ್ಕುವ ತಮ್ಮ ವರ್ತನೆ ಆರಂಭಿಸಿದ್ದಾರೆ. 

ಬಿಗ್‍ಬಾಸ್ ಮನೆಗೆ ಬಂದಿರುವ ಪ್ರಥಮ್ ಮತ್ತೆ ತನ್ನ ಹಳೆಯ  ವರಾತಗಳನ್ನು ಆರಂಭಿಸಿದ್ದು, ಇತರ ಸ್ಪರ್ಧಿಗಳಿಗೂ ಟಾರ್ಚರ್ ನೀಡಲು ಆರಂಭಿಸಿದ್ದಾರೆ. ಈ ಭಾರಿ ಪ್ರಥಮ್ ಸೇರಿದಂತೆ ಐವರನ್ನು ಸಿಕ್ರೇಟ್ ಗೆಸ್ಟ್ ಎಂದು ಕರೆಯಿಸಲಾಗಿದ್ದು, ಅಲ್ಲಿಂದಲೇ ವಿಶೇಷ ಟಾಸ್ಕ್‍ಗಳನ್ನು ನೀಡಲಾಗಿದೆ. ಪ್ರಥಮ್ ಮಾತು-ಕತೆ ಎಲ್ಲವೂ ಒಂದು ರೀತಿ ವಿಚಿತ್ರವಾಗಿಯೇ ಇರೋದರಿಂದ ಜನರು ಈತನನ್ನು ನೋಡಿ ಅಯ್ಯೋ ಸಾಕಪ್ಪ ಇವನ ಆಟ. ಮತ್ಯಾಕಪ್ಪ ಬಂದ ಇವನು ಅಂತ ಹಣೆ ಚಚ್ಚಿಕೊಳ್ತಿದ್ದಾರೆ. 

ಮೈಸೂರು ಮೂಲದ ಈ ಪ್ರಥಮ್ ತನ್ನ ಹುಚ್ಚಾಟಗಳು ಹಾಗೂ ಅರ್ಥಹೀನ ಮಾತುಗಳಿಂದಲೇ ಸೀಸನ್ 4 ರಲ್ಲೂ ನೋಡುಗರಿಗೆ ಕಿರಿ ಕಿರಿ ಉಂಟು ಮಾಡಿದ್ದರು. ಬಿಗ್ ಬಾಸ್‍ನಿಂದ ಹೊರಬಂದ ಬಳಿಕವೂ ಪ್ರಥಮ್ ಇಂಥ ಅತಿರೇಕಗಳನ್ನು ಮುಂದುವರಿಸಿದ್ದರು. ತನ್ನದೆ ಆದ ಹಾವಭಾವ- ಮಾತು, ಬುದ್ಧಿ ಹೊಂದಿರುವ ಪ್ರಥಮ್ ಆತನೊಂದಿಗೆ ಮಾತನಾಡುವವರಿಗೆ ತಲೆನೋವು ಬರಿಸುವಂತ ಆಸಾಮಿ. 

ಸ್ಯಾಂಡಲವುಡ್‍ನಲ್ಲಿ ಒಂದೆರಡು ಚಿತ್ರಗಳಲ್ಲಿಯೂ ನಟಿಸಿರುವ ಪ್ರಥಮ್ ತಿಕ್ಕಲು ಸ್ವಭಾವದ ವ್ಯಕ್ತಿ ಎಂದ್ರೆ ತಪ್ಪಿಲ್ಲ.  ವಿಚಿತ್ರ ಮನಸ್ಥಿತಿ ಹೊಂದಿರುವ ಪ್ರಥಮ್ ಈ ಮೊದಲೊಮ್ಮೆ ಸೊಸೈಡ್ ಯತ್ನವನ್ನು ಮಾಡಿ ಸುದ್ದಿಯಾಗಿದ್ದರು. ವಿಲಕ್ಷಣ ವ್ಯಕ್ತಿತ್ವದವರನ್ನು ಬಿಗ್‍ಬಾಸ್ ಮನೆಯೊಳಕ್ಕೆ ತಂದು ಇತರರಿಗೆ ಕಿರಿ ಕಿರಿ ಉಂಟು ಮಾಡಿ ಮಜಾ ತೆಗೆದುಕೊಳ್ಳುವ ವಾಹಿನಿ ಈ ಬಾರಿ ಮತ್ತೊಮ್ಮೆ ಪ್ರಥಮ್‍ರನ್ನು ಬಿಗ್‍ಬಾಸ್ ಮನೆಯೊಳಕ್ಕೆ ಕಳುಹಿಸಿದ್ದು, ಜನರ ತಾಳ್ಮೆಯನ್ನು ಪರೀಕ್ಷಿಸುವ ಪ್ರಯತ್ನ ಮಾಡುತ್ತಿದೆ ಎಂಬ ಆಕ್ರೋಶ ಪ್ರೇಕ್ಷಕರಿಂದ ವ್ಯಕ್ತವಾಗಿದೆ. 


ಸಂಬಂಧಿತ ಟ್ಯಾಗ್ಗಳು

#BIg Boss #Pratham #Again #Suddep


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ