ಮರಗಳ ಚಲನವಲನ ಸ್ಥಿತಿಗತಿಗಳನ್ನು ಮೊಬೈಲ್ ಪೋನ್‍ನಲ್ಲೇ ಗಮನಿಸಬಹುದು !

Kannada News

05-06-2017

ಬೆಂಗಳೂರು:- ರಸ್ತೆ ಬದಿಯ ಗಿಡ, ಮರ, ಸಸಿಗಳನ್ನು ಸಂರಕ್ಷಿಸಲು ಹಾಗೂ ರೋಗಗ್ರಸ್ಥ  ಗಿಡಗಳಿಗೆ ಸೂಕ್ತ ಚಿಕಿತ್ಸೆ ನೀಡುವ ಉದ್ದೇಶದಿಂದ ಯಡಿಯೂರು ವಾರ್ಡ್‍ನಲ್ಲಿ ಹಸಿರು ರಥ ವಾಹನಕ್ಕೆ ಚಾಲನೆ ನೀಡಲಾಗಿದೆ. ವಿಶ್ವ ಪರಿಸರ ದಿನಾಚರಣೆಯಂದು ಹಸಿರು ರಥ ವಾಹನಕ್ಕೆ ಮಾಜಿ ಡಿಸಿಎಂ ಆರ್.ಅಶೋಕ್ ಅವರು ಚಾಲನೆ ನೀಡಿದರು. ವೃಕ್ಷೋ ರಕ್ಷತಿ ರಕ್ಷಿತಃ ಎಂಬ ಧ್ಯೇಯ ವಾಕ್ಯದೊಂದಿಗೆ ಯಡಿಯೂರು ವಾರ್ಡ್‍ನಲ್ಲಿರುವ ಎಲ್ಲಾ ಗಿಡ, ಮರಗಳನ್ನು ಸಂರಕ್ಷಿಸಲು ಮತ್ತು ಪೋಷಿಸಲು ಪಾಲಿಕೆ ಸದಸ್ಯೆ ಪೂರ್ಣಿಮಾ ರಮೇಶ್ ಅವರು ಹಸಿರು ರಥ ವಾಹನ ಬಿಡುಗಡೆ ಮಾಡಿರುವುದು ಸೂಕ್ತ ಎಂದು ಅಶೋಕ್ ಅಭಿಪ್ರಾಯಪಟ್ಟರು. ಯಡಿಯೂರು ವಾರ್ಡ್‍ನಲ್ಲಿ 197 ರಸ್ತೆಗಳಿದ್ದು, 11 ವಿಭಿನ್ನ ಉದ್ಯಾನವನಗಳಲ್ಲಿ ಸುಮಾರು 1730 ವಿವಿಧ ಬಗೆಯ ಗಿಡ, ಮರಗಳಿದ್ದು, ಎಲ್ಲಾ ಗಿಡಗಳಿಗೂ ಮೈಕ್ರೋ ಚಿಪ್ ಅಳವಡಿಸಲು ತೀರ್ಮಾನಿಸಲಾಗಿದೆ. ಈ ಚಿಪ್ ಮೂಲಕ ಆಯಾ ಗಿಡ, ಮರಗಳ ಚಲನವಲನ ಸ್ಥಿತಿಗತಿಗಳನ್ನು ಮೊಬೈಲ್ ಪೋನ್‍ನಲ್ಲೇ ಗಮನಿಸಬಹುದಾಗಿದೆ ಎಂದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ