ಜನವರಿ 26 ಕ್ಕೆ ನಟಸಾರ್ವಭೌಮ ಟ್ರೇಲರ್

Nata SarvabhoumaTrailer for January 26th

16-01-2019

2018 ರಲ್ಲಿ ಸ್ಯಾಂಡಲವುಡ್‍ನಲ್ಲಿ ಕೆಜಿಎಫ್ ಧೂಳೆಬ್ಬಿಸಿದೆ. ಇನ್ನು 2019 ರಲ್ಲೂ ಪೈಲ್ವಾನ್ ಸೇರಿದಂತೆ ಸಾಕಷ್ಟು ಹಲವು ಸಿನಿಮಾಗಳು ಗ್ರ್ಯಾಂಡ್ ಸಕ್ಸಸ್ ಪಡೆಯುವ  ನೀರಿಕ್ಷೆ ಮೂಡಿಸಿದೆ. ಇದರಲ್ಲಿ ಪವರ್  ಸ್ಟಾರ್ ಖ್ಯಾತಿಯ ಪುನೀತ್ ರಾಜಕುಮಾರ್ ಅಭಿನಯದ ನಟಸಾರ್ವಭೌಮ ಕೂಡ ಒಂದು. ಈ ಚಿತ್ರ ಇದೀಗ 2019 ರ ಫೆಬ್ರವರಿಯಲ್ಲಿ ತೆರೆಗೆ ಬರಲಿದೆ ಎಂಬ ಸಂತೋಷದ ಸುದ್ದಿಯನ್ನು ನಿರ್ದೇಶಕರು ನೀಡಿದ್ದಾರೆ. 

ಇದೇ ಬರುವ ಜನವರಿ 26 ಗಣರಾಜ್ಯೋತ್ಸವದಂದು ಚಿತ್ರದ ಇನ್ನೊಂದು ಟ್ರೇಲರ್ ಬಿಡುಗಡೆಯಾಗಲಿದ್ದು, ಸಾಕಷ್ಟು ಕುತೂಹಲ ಮೂಡಿಸಿದೆ. ನಿರ್ದೇಶಕ ಪವನ್ ಒಡೆಯರ್ ಈ ಬಗ್ಗೆ ಮಾಹಿತಿ ನೀಡಿದ್ದು, ಗಣರಾಜ್ಯೋತ್ಸವದಂದು ಬಿಡುಗಡೆಯಾಗುವ ಟ್ರೇಲರ್ ನೋಡಿ  ಚಿತ್ರತಂಡವನ್ನು ಬೆಂಬಲಿಸಿ ಎಂದು ಕೋರಿದ್ದಾರೆ. ರಾಕ್‍ಲೈನ್ ವೆಂಕಟೇಶ್ ಚಿತ್ರ ನಿರ್ಮಾಣ ಮಾಡುತ್ತಿದ್ದು, ದಕ್ಷಿಣ ಭಾರತದ ಖ್ಯಾತ ಫೈಟ್ ಮಾಸ್ಟರ್ ಹಾಗೂ ನಿರ್ದೇಶಕ  ಪೀಟರ್ ಹೈನ್ಸ್ ಪುನೀತರ ಕೈಯಲ್ಲಿ ಸಖತ್ ಫೈಟ್ ಮಾಡಿಸಿದ್ದು, ಯಾಕ್ಷನ್ ಪ್ರಿಯರಿಗೆ ಚಿತ್ರ ಸಖತ್  ಇಷ್ಟವಾಗಲಿದೆ. 

ಚಿತ್ರದಲ್ಲಿ ಗುಳಿಕೆನ್ನೆ ಚೆಲುವೆ ರಚಿತಾ ರಾಮ್ ಹಾಗೂ ಅನುಪಮ ಪರಮೇಶ್ವರ್ ನಟಿಸಿದ್ದು, ಡಿ.ಇಮಾಮ್ ಸಂಗೀತವಿದೆ. ವೈಧಿ ಛಾಯಾಗ್ರಹಣದಲ್ಲಿ ಸಿನಿಮಾ ಸುಂದರವಾಗಿ ಮೂಡಿಬಂದಿದೆ. ಚಿತ್ರದಲ್ಲಿ ಫೈಟ್, ಲವ್,ರೋಮಾನ್ಸ್,ಹಾಸ್ಯ ಎಲ್ಲವೂ ಇದ್ದು, ಪುನೀತ್ ರಾಜಕುಮಾರ್ ಕೂಡ ಸ್ಟೈಲಿಶ್ ಲುಕ್ ಹಾಗೂ ಅದ್ಭುತ ಡ್ಯಾನ್ಸ್ ಮೂಲಕ ಮನಸೆಳೆದಿದ್ದಾರೆ.  ಒಟ್ಟಿನಲ್ಲಿ ರಾಜ್‍ಕುಮಾರ್ ಸಿನಿಮಾ ಬಳಿಕ ತೆರೆಗೆ ಬರುತ್ತಿರುವ ಪುನೀತ್ ರಾಜಕುಮಾರ್ ಅಭಿನಯದ ಈ ಚಿತ್ರ ಸಾಕಷ್ಟು ನೀರಿಕ್ಷೆ ಹುಟ್ಟುಹಾಕಿದ್ದು, ಬಾಕ್ಸಾಪೀಸಿನಲ್ಲಿ ಸದ್ದು ಮಾಡುವ ಭರವಸೆ ಮೂಡಿಸಿದೆ. 


ಸಂಬಂಧಿತ ಟ್ಯಾಗ್ಗಳು

#Puneeth Rajkumar #Trailer #Nata Sarvabhouma #January 26th


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ