ಸಿದ್ಧಗಂಗಾಶ್ರೀ ಆಸ್ಪತ್ರೆಯಿಂದ ಮಠಕ್ಕೆ ವಾಪಸ 

Siddagangashree  Return to Math from Hospital

16-01-2019

ಶತಾಯುಷಿ ಹಾಗೂ ನಡೆದಾಡುವ ದೇವರು ಖ್ಯಾತಿಯ ಸಿದ್ಧಗಂಗಾಶ್ರೀಗಳ ಆರೋಗ್ಯದಲ್ಲಿ ವಿಶೇಷ ಚೇತರಿಕೆ ಕಂಡುಬಂದಿಲ್ಲ. ಈ ಹಿನ್ನೆಲೆಯಲ್ಲಿ ಸ್ವಾಮೀಜಿಯವರ ಆಶಯದಂತೆ ಅವರನ್ನು ಬುಧವಾರ ಬೆಳಗಿನ ಜಾವ ತುಮಕೂರು ಆಸ್ಪತ್ರೆಯಿಂದ ಸಿದ್ಧಗಂಗಾ ಮಠಕ್ಕೆ  ಕರೆತರಲಾಗಿದೆ. ಸಿದ್ಧಗಂಗಾ ಮಠದಲ್ಲೂ ಶ್ರೀಗಳಿಗೆ ಚಿಕಿತ್ಸೆ ಮುಂದುವರಿಯಲಿದೆ. 

ಸಧ್ಯ ಸ್ವಾಮೀಜಿಗೆ ಶ್ವಾಸಕೋಶದ ಸೋಂಕು ಕಡಿಮೆಯಾಗಿದೆ. ಆದರೆ ಅವರ ಆರೋಗ್ಯ ನೀರಿಕ್ಷಿತ ಪ್ರಮಾಣದಲ್ಲಿ ಚೇತರಿಕೆಯಾಗಿಲ್ಲ. ದಿನಕ್ಕೆ ಎರಡು ಗಂಟೆಯಷ್ಟು ಕಾಲ ಸಹಜ ಉಸಿರಾಟ ಹಾಗೂ ಉಳಿದ ವೇಳೆ ಕೃತಕ ಉಸಿರಾಟದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಡಾ.ಪರಮೇಶ್ವರ್ ಮಾಹಿತಿ ನೀಡಿದ್ದಾರೆ. 

ಆದರೆ ನಿನ್ನೆ ರಾತ್ರಿಯಿಂದಲೂ ಸ್ವಾಮೀಜಿ ಮಠಕ್ಕೆ ತೆರಳಬೇಕೆಂದು ಬಯಸಿದ್ದರಿಂದ ಸ್ವಾಮೀಜಿಯನ್ನು ಅಂಬುಲೆನ್ಸ್‍ನಲ್ಲಿ ಮಠಕ್ಕೆ ಕರೆತರಲಾಗಿದೆ. 111 ವರ್ಷದ ಸಿದ್ಧಗಂಗಾಸ್ವಾಮೀಜಿ ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಅವರಿಗೆ ಚೈನೈನ್ ರೇವಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ಬಳಿಕ ಮಠಕ್ಕೆ ವಾಪಸ ಕರೆತರಲಾಗಿತ್ತು.


ಸಂಬಂಧಿತ ಟ್ಯಾಗ್ಗಳು

#Siddaganga Shree #From Hospital #Return to Math #Today


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ