ಪೈಲ್ವಾನ್ ಟೀಸರ್ ಮೆಚ್ಚಿದ ಸುಲ್ತಾನ್ ಸಲ್ಮಾನ್ ಖಾನ್

15-01-2019
ಕಿಚ್ಚ ಸುದೀಪ ಅಭಿಮಾನಿಗಳ ಸಂಕ್ರಾಂತಿ ಸಡಗರ ದುಪ್ಪಟ್ಟಾಗಿದೆ. ನಟ ಸುದೀಪರ ಬಹುನೀರಿಕ್ಷಿತ ಚಿತ್ರ ಪೈಲ್ವಾನ್ ಟೀಸರ್ 4.45 ಕ್ಕೆ ರಿಲೀಸ್ ಆಗಿದ್ದು, ಈಗಾಗಲೇ ತಮಿಳು ಸೇರಿದಂತೆ ಹಲವು ಚಿತ್ರರಂಗದ ಜನರ ಹುಬ್ಬೆರಿಸುವಂತೆ ಮೂಡಿಬಂದಿದೆ.
ಪೈಲ್ವಾನ್ ಟೀಸರ್ ನೋಡಿ ಸ್ವತಃ ಸಲ್ಮಾನ್ ಖಾನ್ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದು, ಟ್ವಿಟ್ ಮಾಡಿದ್ದಾರೆ. ಇದು ಸುದೀಪ್ ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿದೆ. ಕಿಚ್ಚ ಸುದೀಪ್ ನೀವು ನಮ್ಮ ಪ್ರಯತ್ನವನ್ನು ಇನ್ನೊಂದು ಹಂತಕ್ಕೆ ತೆಗೆದುಕೊಂಡು ಹೋಗಿದ್ದೀರಿ. ಆಲ್ ದಿ ಬೆಸ್ಟ್ ಫೈಲ್ವಾನ್ಗೆ ಅಭಿನಂದನೆಗಳು ಎಂದು ಸಲ್ಮಾನ್ ಖಾನ್ ಟ್ವಿಟ್ ಮಾಡಿದ್ದು, ಸುದೀಪ ಸೇರಿದಂತೆ ಚಿತ್ರತಂಡದ ಖುಷಿ ಹೆಚ್ಚಿಸಿದೆ .
ಪೈಲ್ವಾನ್ ಸಿನಿಮಾದ 1 ನಿಮಿಷ 3 ಸೆಕೆಂಡ್ನ ಟೀಸರ್ನ್ನು ಸಂಕ್ರಾಂತಿ ಹಬ್ಬವಾದ ಇಂದು ಬಿಡುಗಡೆಗೊಳಿಸಲಾಗಿದ್ದು, ಚಿತ್ರ ಮೇ ಅಂತ್ಯದ ವೇಳೆಗೆ ತೆರೆಗೆ ಬರುವ ಸಾಧ್ಯತೆ ಇದೆ. ಇದೇ ಮೊದಲ ಬಾರಿಗೆ ಸುದೀಪ್ ಕುಸ್ತಿಪಟುವಾಗಿ ಕಾಣಿಸಿಕೊಳ್ಳುತ್ತಿದ್ದು, ಬಾಲಿವುಡ್ ನಟ ಸುನೀಲ್ ಶೆಟ್ಟಿ ಕೂಡ ಮೊದಲ ಬಾರಿಗೆ ಕನ್ನಡ ಚಿತ್ರವೊಂದರಲ್ಲಿ ನಟಿಸುತ್ತಿದ್ದಾರೆ. ಹೆಬ್ಬುಲಿ ನಿರ್ದೇಶಕ ಕೃಷ್ಣ ಸುದೀಪ್ಗೆ ಯಾಕ್ಷನ್ ಕಟ್ ಹೇಳುತ್ತಿದ್ದು, ಅರ್ಜುನ್ ಜನ್ಯ ಸಂಗೀತವಿದೆ.
ಕೆಲವರ್ಷಗಳ ಹಿಂದೆಯಷ್ಟೇ ಪೈಲ್ವಾನ್ನೊಬ್ಬನ ಜೀವನ ಕತೆಯನ್ನೊಳಗೊಂಡ ಸುಲ್ತಾನ್ ಚಿತ್ರದಲ್ಲಿ ಸಲ್ಮಾನ್ಖಾನ್ ಮನೋಜ್ಞ ಅಭಿನಯ ನೀಡಿದ್ದರು. ಇದೀಗ ಕನ್ನಡದಲ್ಲೂ ಸುಲ್ತಾನ್ ರೀತಿಯದ್ದೇ ಚಿತ್ರವೊಂದು ಬರುತ್ತಿದ್ದು, ಇಂದು ಬಿಡುಗಡೆಯಾದ ಟೀಸರ್ ಚಿತ್ರದ ಬಗ್ಗೆ ನೀರಿಕ್ಷೆಯನ್ನು ಇನ್ನಷ್ಟು ಹೆಚ್ಚಿಸಿದೆ.
ಒಂದು ಕಮೆಂಟನ್ನು ಹಾಕಿ