ಶಬರಿಮಲೈ ಪ್ರವೇಶಿಸಿದ ಕನಕದುರ್ಗಾ ಮೇಲೆ ಹಲ್ಲೆ

 The attack on Kanakdurga Who Entered Sabarimale

15-01-2019

ಶಬರಿಮಲೈ ದೇವಾಲಯ ಪ್ರವೇಶಿಸುವ ಮೂಲಕ 800 ವರ್ಷಗಳ ಸಂಪ್ರದಾಯ ಮುರಿದಿದ್ದ ಮಹಿಳೆ ಕನಕದುರ್ಗಾ ಮೇಲೆ ಆಕೆಯ ಅತ್ತೆಯೇ ಹಲ್ಲೆ ನಡೆಸಿದ್ದು, ದೇವಾಲಯ ಪ್ರವೇಶಿಸುವ ಕ್ರಾಂತಿಕಾರಿ ನಿರ್ಣಯದ ಬಳಿಕ ಮೊದಲ ಬಾರಿ ಮನೆಗೆ ವಾಪಸ್ಸಾದ ಕನಕದುರ್ಗಾಗೆ ಶಾಕ್ ಎದುರಾಗಿದೆ. ಶಬರಿಮಲೈ ದೇವಾಲಯಕ್ಕೆ ಮಹಿಳೆಯರ ಪ್ರವೇಶಕ್ಕೆ ಅವಕಾಶ ಕಲ್ಪಿಸಿ ಸುಪ್ರೀಂಕೋರ್ಟ್ ಆದೇಶ ನೀಡಿದ ಬಳಿಕ ಮೊದಲ ಬಾರಿಗೆ ಎಲ್ಲರ ಕಣ್ಣುತಪ್ಪಿಸಿ ಕನಕದುರ್ಗಾ ತನ್ನ ಸ್ನೇಹಿತೆಯೊಂದಿಗೆ ದೇವಾಲಯವನ್ನು ಪ್ರವೇಶಿಸಿದ್ದರು.

ಜನವರಿ 2 ರ ತಡರಾತ್ರಿ ಕನಕದುರ್ಗಾ ತನ್ನ ಸ್ನೇಹಿತೆ ಬಿಂದು ಎಂಬುವವರ ಜೊತೆ ದೇವಾಲಯ ಪ್ರವೇಶಿಸಿದ್ದರು. ಇದರ ಬಳಿಕ ಭದ್ರತೆ ದೃಷ್ಟಿಯಿಂದ ಕನಕದುರ್ಗಾ ಹಾಗೂ ಬಿಂದು ಅವರನ್ನು ಗೌಪ್ಯ ಸ್ಥಳದಲ್ಲಿ ಇಡಲಾಗಿತ್ತು. ಅವರಿಬ್ಬರು ಹಿಂತಿರುಗಿ ತಮ್ಮ ಮನೆಗಳಿಗೆ ತೆರಳಿರಲಿಲ್ಲ. ಇದೀಗ ನಿನ್ನೆ ಕನಕದುರ್ಗಾ ಮನೆಗೆ ತೆರಳಿದ ವೇಳೆ ಕನಕದುರ್ಗಾ ಮೇಲೆ ಆಕೆಯ ಅತ್ತೆ ಹಲ್ಲೆ ಮಾಡಿ ಮನೆಯಿಂದ ಹೊರಕ್ಕೆ ದಬ್ಬಿದ್ದಾಳೆ ಎಂಬ ಮಾಹಿತಿ ಲಭ್ಯವಾಗಿದೆ. 

ಅತ್ತೆಯ ಹಲ್ಲೆಯಿಂದ ಗಾಯಗೊಂಡಿರುವ ಕನಕದುರ್ಗಾಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಇನ್ನೊಂದೆಡೆ ಕನಕದುರ್ಗಾ ಮೇಲೆ ಅತ್ತೆ ಮಾಡಿರುವ ಹಲ್ಲೆಯ ಪರ ವಿರುದ್ಧ ಚರ್ಚೆಗಳು ಆರಂಭವಾಗಿದ್ದು, ಕ್ರಾಂತಿಕಾರಿ ಸೊಸೆಯನ್ನು ಅತ್ತೆ ಬೆಂಬಲಿಸಲಿಲ್ಲ ಎಂಬ ಮಾತು ಕೇಳಿಬಂದರೇ, ಇನ್ನೊಂದೆಡೆ ಸಾವಿರಾರು ವರ್ಷಗಳ ನಂಬಿಕೆಯನ್ನು ಹುಸಿಗೊಳಿಸಿದ ಕನಕದುರ್ಗಾ ಅವರ ಹೋರಾಟಕ್ಕೆ ಮನೆಯಲ್ಲಿಯೇ ಬೆಂಬಲ ಸಿಗಲಿಲ್ಲ. ಮನೆಯಲ್ಲಿಯೇ ತಮ್ಮ ವಿಚಾರಗಳನ್ನು ಮನದಟ್ಟು ಮಾಡಿಸಿ ಬೆಂಬಲ ಪಡೆಯಲಾಗದವರೂ  ಜನರನ್ನು ಹೇಗೆ ಮನವೊಲಿಸುತ್ತಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಕನಕದುರ್ಗಾ ಹಾಗೂ ಬಿಂದುಗೆ ಇನ್ನಷ್ಟು ವಿರೋದ ಕಾದಿದೆ ಎಂಬ ಮಾತುಗಳು ಕೇಳಿಬರುತ್ತಿವೆ. 

ಒಟ್ಟಿನಲ್ಲಿ ಐತಿಹಾಸಿಕ ಕಾರ್ಯ ಎಂಬಂತೆ ಶಬರಿಮಲೈಯ ಸಂಪ್ರದಾಯ ಮುರಿದು ದೇವಾಲಯ ಪ್ರವೇಶಿಸಿದ ಹೆಣ್ಣುಮಕ್ಕಳಿಬ್ಬರು ಇನ್ನಷ್ಟು ವಿರೋದ ಎದುರಿಸುವ ಸ್ಥಿತಿ ಉಂಟಾಗಿದೆ. ಬಿಂದು ಕೂಡ ಇನ್ನು ಮನೆಗೆ ತೆರಳದೆ ತಮ್ಮ ಆಪ್ತರ ಮನೆಂiÀಲ್ಲಿಯೇ ಉಳಿದಕೊಂಡಿದ್ದಾರೆ ಎನ್ನಲಾಗಿದ್ದು, ಒಟ್ಟಿನಲ್ಲಿ ದೇವಾಲಯ ಪ್ರವೇಶಿಸಿದ ತಪ್ಪಿಗೆ ಈ ಹೆಣ್ಣುಮಕ್ಕಳು ಸಂಕಷ್ಟ ಎದುರಿಸುವಂತಾಗಿರೋದು ಮಾತ್ರ ಸತ್ಯ. 


ಸಂಬಂಧಿತ ಟ್ಯಾಗ್ಗಳು

#Kanakdurgha #Mother in Law #Attack #Shabarimale


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ