ಲಾರಿ ಮಾಲೀಕರ ಅನಿರ್ದಿಷ್ಟಾವಧಿ ಮುಷ್ಕರದ ಎಚ್ಚರಿಕೆ !

Kannada News

05-06-2017 172

ಬೆಂಗಳೂರು:- ಲಾರಿ ಮಾಲೀಕರು ಮತ್ತೊಮ್ಮೆ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ಮುಂದಾಗಿದ್ದಾರೆ. ಮೈಸೂರಿನ  ಕನ್ನಂಬಾಡಿಯಲ್ಲಿ ಮರಳು ಹಾಗೂ ಹೂಳು ತೆಗೆಯಲು ಅವಕಾಶ ನೀಡಬೇಕೆಂದು ಆಗ್ರಹಿಸಿ ವಾರಾಂತ್ಯದಲ್ಲಿ ಪ್ರತಿಭಟನೆ ನಡೆಸಲು ಲಾರಿ ಮಾಲೀಕರು ನಿರ್ಧರಿಸಿದ್ದಾರೆ. ಈಗಾಗಲೇ ಮೆಟ್ಟೂರು ಡ್ಯಾಂನಲ್ಲಿ ಹೂಳು ಮತ್ತು ಮರಳು ತೆಗೆಯಲು ಅವಕಾಶ ನೀಡಲಾಗಿದ್ದು , ಇದರಿಂದ 22,735 ರೈತರಿಗೆ ಅನುಕೂಲವಾಗಿದೆ. ನಾಲ್ಕು ಲಕ್ಷ ಕ್ಯೂಬಿಕ್ ಮೀಟರ್ ಮರಳನ್ನು ತೆಗೆಯಲಾಗಿದ್ದು, ಲಕ್ಷಾಂತರ ಲಾರಿಯವರಿಗೂ  ಅನುಕೂಲವಾಗಿದೆ. ಅದೇ ರೀತಿ ಕನ್ನಂಬಾಡಿಯಲ್ಲೂ ಮರಳು, ಹೂಳು ತೆಗೆಯಲು ಅವಕಾಶ ನೀಡಬೇಕೆಂದು ಸರ್ಕಾರಕ್ಕೆ ಹತ್ತು ಬಾರಿ ಪತ್ರ ಬರೆದು ಮನವಿ ಮಾಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಹಾಗಾಗಿ ಮೈಸೂರು ಲಾರಿ ಮಾಲೀಕರ ಸಂಘದವರೊಂದಿಗೆ ಚರ್ಚಿಸಿ ವಾರಾಂತ್ಯದೊಳಗೆ ಪ್ರತಿಭಟನೆ ನಡೆಸಲಾಗುವುದು ಎಂದು ಲಾರಿ ಮಾಲೀಕರ ಸಂಘದ ಅಧ್ಯಕ್ಷ ಷಣ್ಮುಗಪ್ಪ ಹೇಳಿದ್ದಾರೆ. ಕೆಆರ್‍ಎಸ್‍ನಲ್ಲಿ 124 ಅಡಿ ಆಳದ ನೀರು ಸಾಮಥ್ರ್ಯ ಸಂಗ್ರಹ ಹೊಂದಿರುವ ಕೆಆರ್‍ಎಸ್‍ನಲ್ಲಿ ಸುಮಾರು 7 ಅಡಿಗೂ ಹೆಚ್ಚು ಹೂಳು ತುಂಬಿದೆ. ಹೂಳು ತೆಗೆಯಲು ಅವಕಾಶ ನೀಡಿದರೆ ಫಲವತ್ತಾದ ಮಣ್ಣು ಈ ಪ್ರದೇಶದ ರೈತರ  ಹೊಲಗಳು ಪಡೆಯಬಹುದಾಗಿದೆ. ಕೂಡಲೇ ಸರ್ಕಾರ ಹೂಳು, ಮರಳು ತೆಗೆಯಲು ಅವಕಾಶ ನೀಡಬೇಕು. ಮತ್ತೊಮ್ಮೆ ಸರ್ಕಾರಕ್ಕೆ ಮನವಿ ಮಾಡುತ್ತೇವೆ. ಮನವಿಗೆ ಸ್ಪಂದಿಸದಿದ್ದರೆ ಅನಿವಾರ್ಯವಾಗಿ ಮುಷ್ಕರ ನಡೆಸಬೇಕಾಗುತ್ತದೆ ಎಂದು ಷಣ್ಮುಗಪ್ಪ ತಿಳಿಸಿದ್ದಾರೆ.

 
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ