ನೋಡಿ.... ಟಿವಿ ನೀಡ್ತಿರೋ ಸಂದೇಶ 

 What

14-01-2019

ನಾಡಿನೆಲ್ಲೆಡೆ ಸುಗ್ಗಿ ಸಂಭ್ರಮ ಮನೆಮಾಡಿದೆ. ಟಿವಿಶೋಗಳಲ್ಲೂ ಈ ಸಂಭ್ರಮ ತುಸು ಹೆಚ್ಚಾಗಿಯೇ ಇದೆ. ಆದರೆ ಸಂಕ್ರಾಂತಿ ಸಂಭ್ರಮದ ಹೆಸರಿನಲ್ಲಿ ಕಾರ್ಯಕ್ರಮ ನಡೆಸಿದ ವಾಹಿನಿಯೊಂದು ಈಗ ಚರ್ಚೆಗೀಡಾಗಿದೆ. ಇದಕ್ಕೆ ಕಾರಣ ವಾಹಿನಿ ನಿರೂಪಕಿಯ ಮಾತು. ಹೌದು ಈಗಾಗಲೇ ಮಹಿಳೆಯ ಮೇಲಿನ ದೌರ್ಜನ್ಯಗಳು ಎಲ್ಲೆ ಮೀರುತ್ತಿದೆ. ಇಂಥ ವೇಳೆಯಲ್ಲೇ ಟಿವಿ ನಿರೂಪಕಿಯೊಬ್ಬರು ಹುಡುಗರನ್ನು ಉತ್ತೇಜಿಸುವ ರೀತಿಯಲ್ಲಿ ಮಾತನಾಡಿದ್ದು, ವಿವಾದಕ್ಕೆ ಕಾರಣವಾಗಿದೆ. 

ಟಿವಿ ವಾಹಿನಿಯೊಂದು ಸ್ಟಾರ್ ನಟರೊಬ್ಬರ ಹೊಸ ಸಿನಿಮಾದ ಆಡಿಯೋ ರೀಲಿಸ್ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಯೋಜಿಸಿತ್ತು. ಈ ವೇಳೆ ಕಾರ್ಯಕ್ರಮದಲ್ಲಿ ಸಾಕಷ್ಟು ಕಾಲೇಜು ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು. ವಿದ್ಯಾರ್ಥಿನಿಯರ ಬಳಿ ಡ್ರೆಸ್ ಬಗ್ಗೆ ಮಾತನಾಡಿನ ನಿರೂಪಕಿ ನೀವ್ಯಾಕೆ ಇನ್ನು ಮಾಡರ್ನ್ ಡ್ರೆಸ್ ಹಾಕೋದಿಲ್ಲ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ವಿದ್ಯಾರ್ಥಿನಿಯರು, ಇಷ್ಟು ಡ್ರೆಸ್ ಹಾಕ್ಕೊಂಡ್ರೆ ಹುಡುಗರ ಕಾಟ ಎಂದು ಹೇಳಿದ್ದಾರೆ. ಇದಕ್ಕೆ ಉತ್ತರಿಸಿದ ಆಂಕ್ಯರ್, ಇಷ್ಟೆಲ್ಲ ಸುಂದರವಾಗಿ ಬಟ್ಟೆಹಾಕಿದ ಮೇಲೂ ರೇಗಿಸದೆ ಇದ್ದರೆ ಹುಡುಗರು ವೇಸ್ಟ್ ಎಂದು ಹೇಳಿದ್ದಾರೆ. 

ಈ ಹೇಳಿಕೆ ಇದೀಗ ವಿವಾದಕ್ಕೆ ಕಾರಣವಾಗಿದ್ದು, ಮೊದಲೆ ಹಳ್ಳಿಗಳಲ್ಲಿ ವಿದ್ಯಾರ್ಥಿನಿಯರಿಗೆ ಬೀದಿ ಕಾಮಣ್ಣನ ಕಾಟ ಹೆಚ್ಚಿದೆ. ಕೆಲವೆಡೆಯಂತೂ ಹೆಣ್ಣುಮಕ್ಕಳು ಈ ಕಾಟ ಸಹಿಸಲಾಗದೇ ಶಾಲೆ ತೊರೆದು ಮನೆಯಲ್ಲಿ ಕುಳಿತುಕೊಳ್ಳುತ್ತಿದ್ದಾರೆ. ಹೀಗಿರುವಾಗ ಒಂದು ಕಾರ್ಯಕ್ರಮದ ನಿರೂಪಕಿಯರು ಈ ರೀತಿ ಬಹಿರಂಗವಾಗಿ ಹೇಳಿಕೆ ನೀಡುವುದು ಎಷ್ಟು ಸರಿ. ಅವರಿಗೂ ಸಾಮಾಜಿಕ ಜವಾಬ್ದಾರಿ ಬೇಡವೇ ಎಂದು ಪ್ರಜ್ಞಾವಂತ ಮಹಿಳೆಯರು ಗರಂ ಆಗಿದ್ದಾರೆ. ಹುಡುಗಿಯರನ್ನು ಚುಡಾಯಿಸದೇ ಇದ್ದರೆ ಹುಡುಗರು ವೇಸ್ಟ್ ಎಂದಿರುವುದು ಎಲ್ಲೋ ಒಂದು ಕಡೆ ಇನ್ನಷ್ಟು ಹುಡುಗರಿಗೆ ಪ್ರೋತ್ಸಾಹ ನೀಡಿದಂತಾಗಲಿದ್ದು, ಇದರಿಂದ ಏನಾದ್ರೂ ಹೆಚ್ಚುಕಮ್ಮಿಯಾದರೇ ಯಾರು ಹೊಣೆ ಎಂದು ಪ್ರಶ್ನಿಸುತ್ತಿದ್ದಾರೆ. 

ಇತ್ತೀಚಿಗೆ ಈ ರೀತಿಯ ಟಿವಿ ಕಾರ್ಯಕ್ರಮಗಳಲ್ಲಿ ನಿರೂಪಕ-ನಿರೂಪಕಿಯರು ಸಾಮಾಜಿಕ ಜವಾಬ್ದಾರಿ ಮರೆಯುತ್ತಿದ್ದು ಮನಸ್ಸಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಇದರಿಂದ ಟಿವಿ ಶೋಗಳನ್ನು ನೋಡುವ ಲಕ್ಷಾಂತರ ಜನರ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಹೀಗಾಗಿ ಕಾರ್ಯಕ್ರಮ ಆಯೋಜಕರು ಹಾಗೂ ವಾಹಿನಿಗಳು ಆಂಕ್ಯರ್‍ಗಳ ಮಾತಿನ ಓಘಕ್ಕೆ ಬ್ರೇಕ್ ಹಾಕಿ ಅವರಿಗೂ ಜವಾಬ್ದಾರಿಯಿಂದ ವರ್ತಿಸುವುದನ್ನು ಕಲಿಸಬೇಕು ಎಂಬ ಆಗ್ರಹ ವ್ಯಕ್ತವಾಗಿದೆ. 


ಸಂಬಂಧಿತ ಟ್ಯಾಗ್ಗಳು

#Tv Show #Message #Anchors #Kannada


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ