ಆರ್.ಎಸ್.ಎಸ್. ಮುಖಂಡರ ಹತ್ಯೆಗೆ ಸಂಚು ರೂಪಿಸಿದ ಡಾನ್ ಅರೇಸ್ಟ್

 Detention of the  conspirator

14-01-2019

ರಾಜ್ಯದಾದ್ಯಂತ ತೀವ್ರ ಆತಂಕಕ್ಕೆ ಕಾರಣವಾಗಿದ್ದ ಹಿಂದು ಮುಖಂಡರ ಹತ್ಯೆ ಸಂಚಿನ ಹಿಂದಿನ ರೂವಾರಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಮುಹತಾಸಿಂ ಅಲಿಯಾಸ್ ತಾಸಿಂ ಯಾನೆ ಡಾನ್ ಎಂಬಾತನೇ ಬಂಧಿತ ಆರೋಪಿ. ಈತನ ಮೇಲೆ ಆರ್.ಎಸ್.ಎಸ್.ಮುಖಂಡ ಕಲ್ಲಡ್ಕ್ ಪ್ರಭಾಕರ್ ಭಟ್ ಹಾಗೂ ಇನ್ನಿತರ ಹಿಂದು ಮುಖಂಡರ ಹತ್ಯೆಗೆ ಸಂಚು ರೂಪಿಸಿದ ಆರೋಪ ಕೇಳಿಬಂದಿದೆ. 

 ಕೆಲ ದಿನಗಳ ಹಿಂದೆ ಕರಾವಳಿಯ ಕೆಲ ಹಿಂದು ಮುಖಂಡರ ಹತ್ಯೆಗೆ ಬಲವಾದ ಸಂಚು ನಡೆದಿದೆ ಎಂಬ ಮಾತು ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಆರ್.ಎಸ್.ಎಸ್.ಮುಖಂಡ ಕಲ್ಲಡ್ಕ್ ಪ್ರಭಾಕರ್ ಭಟ್‍ರಿಗೆ ಹೆಚ್ಚಿನ ಭದ್ರತೆ ನೀಡಿ ಅವರನ್ನು ಬೆಂಗಳೂರಿಗೆ ಸ್ಥಳಾಂತರಿಸಲಾಗಿತ್ತು. ಇಷ್ಟೇ ಅಲ್ಲದೆ ವಿಶ್ವಹಿಂದೂ ಪರಿಷತ್ ಮುಖಂಡರಾದ ಶರಣ್ ಪಂಪ್‍ವೆಲ್ ಹಾಗೂ ಜಗದೀಶ್ ಶೇಣವ್‍ಅವರಿಗೆ ಎಚ್ಚರಿಕೆಯಿಂದ ಇರಲು ಸೂಚಿಸಲಾಗಿತ್ತು. ಈ ಮಾಹಿತಿಗಳು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ಸಹಜವಾಗಿಯೆ ಆತಂಕ ಮನೆಮಾಡಿತ್ತು. 

ಈ ಹಿನ್ನೆಲೆಯಲ್ಲಿ ಅಲರ್ಟ್ ಆದ ಪೊಲೀಸರು ಸಂಚುಕೋರರಿಗೆ ಹುಡುಕಾಟ ನಡೆಸಿದ್ದರು. ಭಾನುವಾರ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ದೆಹಲಿ ಪೊಲೀಸರು, ಕಾಸರಕೋಡು ಜಿಲ್ಲೆಯ ಚೆಮ್ನಾಡ್ ಪಂಚಾಯತಿ ವ್ಯಾಪ್ತಿಯ ಚೆಂಬರಿಕ ನಿವಾಸಿ ಸಿ.ಎಂ.ಮುಹತಾಸಿಂ ಅಲಿಯಾಸ್ ತಾಸಿಂ ಅಲಿಯಾಸ್ ಡಾನ್ ಎಂಬಾತನನ್ನು ದೆಹಲಿಯಲ್ಲಿ ಬಂಧಿಸಿದ್ದಾರೆ. ಬಂಧಿತ ಡಾನ್ ಉಗ್ರಸಂಘಟನೆ ಐಸಿಸ್ ನಂಟು ಹೊಂದಿರುವ ಶಂಕೆ ವ್ಯಕ್ತವಾಗಿದ್ದು, ಆರ್.ಎಸ್.ಎಸ್.ಮುಖಂಡರ ಹತ್ಯೆಗೆ ಸಂಚು ನಡೆಸಿದ್ದ ಶಂಕೆ ವ್ಯಕ್ತವಾಗಿದೆ. ಪೊಲೀಸರು ತೀವ್ರ ವಿಚಾರಣೆ ನಡೆಸಿದ್ದಾರೆ. 

ಈತನ ಬಂಧನದ ಬಳಿಕ ಕಾಸರಗೋಡಿಗೆ ಆಗಮಿಸಿದ ದೆಹಲಿ ಪೊಲೀಸರು ಸ್ಥಳೀಯ ಪೊಲೀಸರು ಹಾಗೂ ಜನರಿಂದ ಮಾಹಿತಿ ಸಂಗ್ರಹಿಸಿದ್ದಾರೆ ಎನ್ನಲಾಗಿದೆ. ಅಲ್ಲದೇ, ಬಂಧಿತನನ್ನು ಕಾಸರಗೋಡು ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟರ್ ಮುಂದೆ ಹಾಜರುಪಡಿಸಿದ ಬಳಿಕ ದೆಹಲಿಗೆ ಕರೆದೊಯ್ಯಲಾಗಿದೆ. ಇದರಿಂದ ರಾಜ್ಯದಲ್ಲಿ ಸೃಷ್ಟಿಯಾಗಿದ್ದ ಆತಂಕ ತಕ್ಕಮಟ್ಟಿಗೆ ಕಡಿಮೆಯಾದಂತಾಗಿದ್ದು, ಆದರೂ ಹಿಂದೂ ಮುಖಂಡರಿಗೆ ಸೂಕ್ತ ಭದ್ರತೆ ಒದಗಿಸಬೇಕೆಂಬ ಆಗ್ರಹ ವ್ಯಕ್ತವಾಗಿದೆ. 
 


ಸಂಬಂಧಿತ ಟ್ಯಾಗ್ಗಳು

#Arrest # conspirator # RSS Leader #Dehli Police


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ