ಜಾಹೀರಾತು ಲೋಕದಲ್ಲಿ ದೀಪಿಕಾ ನಂ 2

 Deepika No. 2 in the Advertising World

12-01-2019

ಇತ್ತೀಚಿಗಷ್ಟೆ ಹೊಸಬದುಕಿಗೆ ಕಾಲಿಟ್ಟು, ಹನಿಮೂನ್ ಮೂಡನಲ್ಲಿರೋ ದೀಪಿಕಾ  ಮೋಸ್ಟ್ ವ್ಯಾಲ್ಯೂಬಲ್ ಇಂಡಿಯನ್ ಸೆಲಿಬ್ರೆಟಿ ಲಿಸ್ಟ್‍ನಲ್ಲಿ ಎರಡನೇ ಸ್ಥಾನ ಗಳಿಸಿದ್ದಾರೆ. ಕಾರ್ಪೋರೇಟ್ ಹಣಕಾಸು ಸಲಹೆಗಾರ ಸಂಸ್ಥೆಯೊಂದು ಬಿಡುಗಡೆ ಮಾಡಿರುವ 2018  ಅಂಕಿ-ಅಂಶಗಳ ಪ್ರಕಾರ ದೀಪಿಕಾ ಪಡುಕೋಣೆ ಈ ಗೌರವಕ್ಕೆ ಪಾತ್ರರಾಗಿದ್ದಾರೆ. 

ಮೊದಲನೆ ಸ್ಥಾನದಲ್ಲಿ ಕ್ರಿಕೆಟಿಗ ವಿರಾಟ್ ಕೊಹ್ಲಿ ಇದ್ದು, ದೀಪಿಕಾ ನಂತರದ ಸ್ಥಾನಗಳಲ್ಲಿ, ಅಕ್ಷಯ್ ಕುಮಾರ್,ರಣವೀರ್ ಸಿಂಗ್, ಶಾರುಕ್ ಖಾನ್ ಮತ್ತು ಸಲ್ಮಾನ್ ಖಾನ್ ಮತ್ತು ಅಮಿತಾಭ ಬಚ್ಚನ್ ಮುಂತಾದವರು ಸ್ಥಾನ ಪಡೆದುಕೊಂಡಿದ್ದಾರೆ. ದೀಪಿಕಾ ಪಡುಕೋಣೆಯವರ ಸಧ್ಯದ ಬ್ರಾಂಡ್ ಮೌಲ್ಯ 102.5 ದಶಲಕ್ಷ ಡಾಲರ್‍ನಷ್ಟಿದೆ ಎಂದು ವರದಿಯಾಗಿದೆ. 

2018 ರಲ್ಲಿ ಯಶಸ್ವಿ ಚಿತ್ರಗಳ ಜೊತೆ ಮೋಡಿ ಮಾಡಿದ ದೀಪಿಕಾ ಪಡುಕೋಣೆ ಸುಮಾರು 21 ಬ್ರ್ಯಾಂಡ್‍ಗಳ 
ರೂಪದರ್ಶಿಯಾಗಿಯೂ ಕೂಡ ಜಾಹೀರಾತು ಲೋಕದಲ್ಲಿ ಮೋಡಿ ಮಾಡಿದ್ದಾರೆ. ಇನ್ನು ದೀಪಿಕಾರನ್ನು ಹಿಂದಿಕ್ಕಿದ ವಿರಾಟ್ ಕೊಹ್ಲಿ ಬ್ರ್ಯಾಂಡ್ ವ್ಯಾಲ್ಯೂ, 170.9 ದಶಲಕ್ಷ ಡಾಲರ್ ನಷ್ಟಿದೆ.  


ಸಂಬಂಧಿತ ಟ್ಯಾಗ್ಗಳು

#Deepika Padukone #Advertising World # No 2 #Virat Kohli


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ