ಡಿವೋರ್ಸ್ ವಿಚಾರಕ್ಕೆ ಸಿಂಧು ಏನಂದ್ರು ಗೊತ್ತಾ? 

 Did Sindhulokanath break the wedding?

12-01-2019

ಸಿಂಧುಲೋಕನಾಥ್. ಅಪ್ಪಟ ಕನ್ನಡದ ಹುಡುಗಿ. ಕಳೆದ ವರ್ಷವಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಸಿಂಧು ಪತಿ ಜೊತೆ ಜೋಡಿ ಹಕ್ಕಿ ತರ ಹಾರಾಡಿಕೊಂಡಿದ್ದಾರೆ. ಆದರೆ ಹೀಗಿರುವಾಗಲೇ ಸಿಂಧುಲೋಕನಾಥ್ ದಾಂಪತ್ಯ ಜೀವನದಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಸುದ್ದಿ ಹಬ್ಬಿದೆ. ಈಗಾಗಲೇ ಸಿಂಧು ದಾಂಪತ್ಯ ಮುರಿದು ಬಿದ್ದಿದ್ದು, 
ಇನ್ನೇನೂ ವಿಚ್ಛೇಧನದ ಹಂತದಲ್ಲಿದೆ ಎಂಬ ಸುದ್ದಿ ಓಡಾಡ್ತಿದೆ. 


ಸಧ್ಯ ಕಾಣದಂತೆ ಮಾಯವಾದನೋ ಚಿತ್ರದಲ್ಲಿ ನಟಿಸುತ್ತಿರುವ ಸಿಂಧು, ಚಿತ್ರದ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಆದರೆ ಸೋಷಿಯಲ್ ಮೀಡಿಯಾದಲ್ಲಿ ಮಾತ್ರ ಚಿತ್ರಕ್ಕಿಂತ ಸಿಂಧು ವೈಯಕ್ತಿಕ ವಿಚಾರವೇ ಹೆಚ್ಚು ರಂಗೇರಿಸಿಕೊಂಡು ಸುದ್ದಿಯಾಗುತ್ತಿದೆ. ಇನ್ನು ಈ ಬಗ್ಗೆ ಸಿಂಧು ಮಾತ್ರ ಸಖತ್ ಖಡಕ್ ರಿಪ್ಲೈ ನೀಡಿದ್ದಾರೆ. 

ಚೆನ್ನಾಗಿರುವ ತಮ್ಮ ಸಂಸಾರವನ್ನು ಬೀದಿಗೆ ತಂದಿರುವ ಈ ಗಾಸಿಪ್ ಬಗ್ಗೆ ಕೆಂಡಾಮಂಡಲವಾಗಿರುವ ಸಿಂಧು, ನಾನು ಮದುವೆಯಾಗಿ ಒಂದು ವರ್ಷವಾಗಿದೆ. ನಾವಿಬ್ಬರೂ ಜಾಲಿಯಾಗಿ ಓಡಾಡಿಕೊಂಡಿದ್ದೇವೆ. ನನ್ನ ಕೆಲಸಗಳಲ್ಲಿ ಪತಿ ನನಗೆ ತುಂಬಾ ಒಳ್ಳೆಯ ಸಹಕಾರ ನೀಡ್ತಿದ್ದಾರೆ. ಹೀಗಿರುವಾಗ ಇದ್ಯಾರೋ ಸೋಷಿಯಲ್ ಮೀಡಿಯಾದಲ್ಲಿ ನಾನು ಡಿವೋರ್ಸ್ ತಗೋತಿದ್ದೇನೆ. ಪಿಜಿಯಲ್ಲಿದ್ದೇನೆ ಎಂದೆಲ್ಲ ಸುದ್ದಿ ಹಬ್ಬಿಸಿದ್ದಾರೆ. ಇದರಿಂದ ತುಂಬಾ ನೋವಾಗಿದೆ ಅಂತಿದ್ದಾರೆ. 

 ಒಟ್ಟಿನಲ್ಲಿ ಈ ಸೆಲಿಬ್ರೆಟಿಗಳಿಗೆ ಮದುವೆಯಾಗ್ತಿದ್ದಂತೆ ಇಂಥ ಗಾಸಿಪ್‍ಗಳು ಕಾಮನ್ ಎಂಬಂತಾಗಿದ್ದು, ಸುದ್ದಿ ಹಬ್ಬಿಸೋರಿಗೆ ಇಂಥ ಕೀಳು ಮನಸ್ಸಿತಿಯಿಂದ ಅದೇನೂ ಖುಷಿ ಸಿಗುತ್ತೋ ಅಂತಿದ್ದಾರೆ ಸಿಂಧುಲೋಕನಾಥ್. 


ಸಂಬಂಧಿತ ಟ್ಯಾಗ್ಗಳು

#Sindhu Loknath #Marrige #Sandalwood #Divorce


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ