ಕರ್ನಾಟಕದಲ್ಲೂ  ಮೋಡಿ ಮಾಡಿದ ಪೇಟಾ

 PETA is also charmed in Karnataka

12-01-2019

ಕನ್ನಡ ಚಿತ್ರಗಳನ್ನು ಪ್ರೋತ್ಸಾಹಿಸಿ ಎಂಬ  ಸ್ಯಾಂಡಲವುಡ್‍ನ ಕೂಗಿನ ನಡುವೆಯೇ ನಮ್ಮ ಚಿತ್ರಗಳನ್ನು ಹಿಂದಿಕ್ಕಿ ಚಿತ್ರಮಂದಿರ ಪಡೆದುಕೊಂಡು ಪ್ರದರ್ಶನ ಕಾಣುತ್ತಿರುವ ಪೇಟಾಕ್ಕೆ ರಾಜ್ಯದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಈ ಚಿತ್ರ ರಾಜ್ಯದ ಹಲವೆಡೆ ಗುರುವಾರದಿಂದ ಪ್ರದರ್ಶನ ಕಾಣುತ್ತಿದ್ದು, ಥಿಯೇಟರ್‍ಗಳಲ್ಲಿ ಹೌಸ್ ಫುಲ್ ಬೋರ್ಡ್ ಬಿದ್ದಿದೆ. 

ಪೇಟಾ ಚಿತ್ರದಲ್ಲಿ ರಜನಿಕಾಂತ್ ಅಭಿನಯಕ್ಕೆ ಜನರು ಬೆರಗಾಗಿದ್ದಾರೆ. ಎಲ್ಲೆಡೆಯೂ ಜನ ಸಖತ್ ಎಂಜಾಯ್ ಮಾಡ್ತಿದ್ದಾರೆ.  ನಾನೇ ಹಲವು ಚಿತ್ರಮಂದಿರಗಳಿಗೆ ವಿಸಿಟ್ ಮಾಡಿ ವೀಕ್ಷಿಸಿದ್ದೇನೆ ಅಂತಾರೆ ವಿತರಕ ಜಾಕ್ ಮಂಜು. ಇದರೊಂದಿಗೆ ಹಲವು ಕನ್ನಡ ಚಿತ್ರಗಳು ಕೂಡ ತೆರೆ ಕಂಡಿದ್ದರೂ, ರಜನಿಕಾಂತ್ ಹವಾ ಮೀರಿಸುವುದು ಸಾಧ್ಯವಾಗುತ್ತಿಲ್ಲ. 

ಪೇಟಾ ಸಿನಿಮಾಗೆ ಕರ್ನಾಟಕದಲ್ಲಿ ಸಿಗುತ್ತಿರುವ ಪ್ರತಿಕ್ರಿಯೆ ಕಂಡು ಖುಷಿಯಾಗಿರುವ ವಿತರಕ ಜಾಕ್ ಮಂಜು, ಚಿತ್ರದ ಪ್ರಚಾರಕ್ಕಾಗಿ ನಟ ರಜನಿಕಾಂತ್ ಹಾಗೂ ನಟಿ ತ್ರಿಷಾರನ್ನು  ಬೆಂಗಳೂರಿಗೆ ಆಹ್ವಾನಿಸಿದ್ದೇನೆ. ನಿರ್ಮಾಪಕರಿಗೂ ಮನವಿ ಮಾಡಿದ್ದಾರಂತೆ. ರಜನಿಕಾಂತ್ ರಾಜ್ಯಕ್ಕೆ ಬಂದರೆ ಚಿತ್ರಪ್ರದರ್ಶನ ಮತ್ತಷ್ಟು ಯಶಸ್ಸು ಕಾಣೋದರಲ್ಲಿ ಯಾವುದೇ ಅನುಮಾನವಿಲ್ಲ ಅಂತಾರೆ ರಜನಿಕಾಂತ್ ಪ್ರಿಯರು. 


ಸಂಬಂಧಿತ ಟ್ಯಾಗ್ಗಳು

#Karnataka #Rajanikanth #Peta #Success


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ