ದೇಶದ ಗಡಿ ದಾಟಿದ ಕೆಜಿಎಫ್

KGF Crosses The Country Border

12-01-2019

ಹಲವು ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಗೊಂಡು ಮೋಡಿ ಮಾಡಿ 200 ಕೋಟಿ ಕ್ಲಬ್ ದಾಟಿದ ಕೆಜಿಎಫ್ ಈಗ ದೇಶದ ಗಡಿ ದಾಟಿ ಚಿತ್ರರಸಿಕರ ಮನಸೊರೆಗೊಳ್ಳುವ ಮೂಲಕ ಹೊಸ ದಾಖಲೆ ನಿರ್ಮಿಸಿದೆ. ಹೌದು ಜನವರಿ 10 ರಿಂದ  ಕೆಜಿಎಫ್  ಪಾಕಿಸ್ತಾನದಲ್ಲೂ  ಪ್ರದರ್ಶನ ಕಾಣುತ್ತಿದೆ. ಅಲ್ಲಿನ ಜನ ಈ ಚಿತ್ರವನ್ನು ಮೆಚ್ಚಿಕೊಂಡಿರುವುದಾಗಿ ಪಾಕ್ ಮಾಧ್ಯಮಗಳು ವರದಿ ಮಾಡಿವೆ. 

ಪಾಕಿಸ್ತಾನದ ಲಾಹೋರ್,ಮುಲ್ತಾನ್ ನಗರ ಹಾಗೂ ರಾವಲ್ಪಿಂಡಿಯಲ್ಲಿ ಈ ಚಿತ್ರ ರಿಲೀಸ್ ಆಗಿದ್ದು, ಕೆಜಿಎಫ್‍ನ ಹಿಂದಿ ಅವತರಣಿಕೆ ನೋಡಿದ ಪಾಕಿಸ್ತಾನದ ಜನರು ಯಶ್ ನಟನೆ ಹಾಗೂ ಚಿತ್ರಕತೆಯನ್ನು ಮೆಚ್ಚಿಕೊಂಡಿದ್ದಾರೆ. ಕನ್ನಡದ ನಿರ್ಮಾಪಕರ ಚಿತ್ರವೊಂದು ಹಿಂದಿಯಲ್ಲಿ ಡಬ್ ಆಗಿ ಪಾಕಿಸ್ತಾನದಲ್ಲಿ ರಿಲೀಸ್ ಆಗಿರುವುದು ಇದೇ ಮೊದಲ ಬಾರಿ. ಕೇವಲ ಕೆಜಿಎಫ್ ಮೆಚ್ಚಿಕೊಂಡಿರುವುದು ಮಾತ್ರವಲ್ಲದೇ ಪಾರ್ಟ್ -2 ಗೆ ಕಾಯುತ್ತಿರುವುದಾಗಿಯೂ ಅಲ್ಲಿನ ಪ್ರೇಕ್ಷಕರು ಹೇಳಿಕೊಂಡಿದ್ದಾರೆ. 

ಪಾಕಿಸ್ತಾನದಲ್ಲಿ ಬಾಲಿವುಡ್‍ನ ಚಿತ್ರಗಳು ತೆರೆಕಾಣೋದು ಮಾಮೂಲು. ಇಲ್ಲಿ ಸಲ್ಮಾನ್ ಖಾನ್, ಶಾರೂಕ್ ಖಾನ್‍ರಂತಹ ಬಾಲಿವುಡ್‍ನಟರಿಗೆ ಫ್ಯಾನ್ಸ್ ಇದ್ದಾರೆ. ಇದನ್ನು ಹೊರತುಪಡಿಸಿದರೇ ಬೇರೆ ಭಾಷೆಯ ಸಿನಿಮಾಗಳು ಇಲ್ಲಿ ತೆರೆ ಕಾಣೋದು ಅತಿ ಕಡಿಮೆ. ಆದರೆ ಈ ಭಾರಿ  ಕನ್ನಡ ಚಿತ್ರವೊಂದು ದೇಶದ ಗಡಿದಾಟಿ ವೈರಿ ರಾಷ್ಟ್ರ ಪಾಕಿಸ್ತಾನದಲ್ಲೂ ಯಶಸ್ಸು ಕಂಡಿದ್ದು, ಯಶ್ ಕೆರಿಯರ್ ಗೆ ಹೊಸ ಕೊಡುಗೆಯೊಂದು ದೊರೆತಂತಾಗಿದೆ. ಈ ಚಿತ್ರವನ್ನು ಮುಂದಿನ ದಿನಗಳಲ್ಲಿ ಚೀನಾದಲ್ಲೂ ಕೂಡ ಬಿಡುಗಡೆ ಮಾಡುವ ಚಿಂತನೆಯಲ್ಲಿದ್ದಾರಂತೆ ನಿರ್ಮಾಪಕರು. 


ಸಂಬಂಧಿತ ಟ್ಯಾಗ್ಗಳು

#KGF #Show # Pakistan #Yesh


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ