ನಿರ್ಮಾಪಕ ಕೆ.ಮಂಜುಗೆ ಹೃದಯಶಸ್ತ್ರಚಿಕಿತ್ಸೆ

 Cardiac Surgery To Producer K. Manju

11-01-2019

ಸ್ಯಾಂಡಲವುಡ್‍ನ ಹಿರಿಯ ನಿರ್ಮಾಪಕ ಕೆ.ಮಂಜು ತೆರೆದ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಕಳೆದ ಮೂರು ದಿನದ ಹಿಂದೆ ಎದೆನೋವಿನಿಂದ ಕೆ.ಮಂಜು, ಬನ್ನೇರುಘಟ್ಟ ರಸ್ತೆಯಲ್ಲಿರುವ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಹೃದಯ ಕವಾಟದಲ್ಲಿ ಒಟ್ಟು 5 ಬ್ಲಾಕೇಜ್‍ಗಳು ಕಂಡು ಬಂದ ಹಿನ್ನೆಲೆಯಲ್ಲಿ ಅವರಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ. 

ಕೆ.ಮಂಜು ಅವರು ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆ ಸ್ಯಾಂಡಲವುಡ್‍ನ ಹಿರಿಯ ನಟ ರವಿಚಂದ್ರನ್ ಸೇರಿದಂತೆ ಹಲವರು ಭೇಟಿ ನೀಡಿ ಕೆ.ಮಂಜು ಆರೋಗ್ಯ ವಿಚಾರಿಸಿದ್ದರು.  ಕಳೆದ ಎರಡು ದಿನದ ಹಿಂದೆಯೇ ಕೆ.ಮಂಜು ಅವರಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು, ಈಗ ಅವರನ್ನು ತೀವ್ರ ನಿಗಾಘಟಕದಿಂದ ವಾರ್ಡ್‍ಗೆ ಶಿಫ್ಟ್ ಮಾಡಲಾಗಿದೆ. 
ಕನ್ನಡದಲ್ಲಿ ಕೆ.ಮಂಜು ಸಿನಿಮಾಸ್ ಹಾಗೂ  ಲಕ್ಷ್ಮೀಶ್ರೀ ಕಂಬೈನ್ಸ್ ಅಡಿಯಲ್ಲಿ ಸಿನಿಮಾ ನಿರ್ಮಾಣ ಮಾಡುವ ಕೆ.ಮಂಜು ಅವರು, ಒಂದೆ ಬಾರಿಗೆ ಐದು ಸಿನಿಮಾ  ನಿರ್ಮಾಣ ಮಾಡಿ ಲಿಮ್ಕಾ ದಾಖಲೆ ಬರೆದಿದ್ದರು. ದಯಾಳ್ ಪದ್ಮನಾಭನ್ ಅವರ ನಿರ್ದೇಶನದ ಕೊನೆಯ ಚಿತ್ರ. 

ಇನ್ನು ಕೆ.ಮಂಜು ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆ ಮೀಡಿಯಾಗಳಲ್ಲಿ ಸಾಕಷ್ಟು ಸುದ್ದಿಗಳು ಹರಿದಾಡಿದ್ದವು. ಹೀಗಾಗಿ  ಎಲ್ಲರ ಆತಂಕ ದೂರ ಮಾಡುವ ಉದ್ದೇಶದಿಂದ ಕೆ.ಮಂಜು ಅವರು ಸ್ವತಃ ಆಸ್ಪತ್ರೆಯಲ್ಲೇ ಸುದ್ದಿಗೋಷ್ಠಿ ನಡೆಸಿ ತಮ್ಮ ಆರೋಗ್ಯ ಸಮಸ್ಯೆ ಬಗ್ಗೆ ವಿವರಿಸಿದರು. ಅನಾರೋಗ್ಯದಲ್ಲೂ ಮಾಧ್ಯಮಗಳಿಗಾಗಿ ಸುದ್ದಿಗೋಷ್ಠಿ ಏರ್ಪಡಿಸುವಂತ ಅಗತ್ಯವೇನಿತ್ತು ಅಂತ ಅವರ ಆಪ್ತರು ಗೊಣಗುತ್ತಿದ್ದ ದೃಶ್ಯವೂ ಆಸ್ಪತ್ರೆಯಲ್ಲಿ ಕಂಡುಬಂತು. 
 


ಸಂಬಂಧಿತ ಟ್ಯಾಗ್ಗಳು

# K. Manju #Bangalore # Cardiac Surgery #Apolo hospital


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ