ತೆಲುಗಿಗೆ ಸುಕೃತಾ 

 Actress Sukritha is Acting in Telugu Language

11-01-2019 195

ಕನ್ನಡತಿಯರು ಸಾಲು-ಸಾಲಾಗಿ ಬಾಲಿವುಡ್‍ಗೆ ಲಗ್ಗೆ ಇಟ್ಟ ಬೆನ್ನಲ್ಲೇ, ಕಿರಗೂರಿನ ಗಯ್ಯಾಳಿಗಳು ಚಿತ್ರದಲ್ಲಿ ಗಯ್ಯಾಳಿ ಪಾತ್ರದ ಮೂಲಕ ಗಮನಸೆಳೆದಿದ್ದ ಸುಕೃತಾ ವಾಗ್ಳೆ ಕೂಡ ಪರಭಾಷೆಯಲ್ಲಿ ಮಿಂಚಿದ್ದಾರೆ. ತೆಲುಗಿನಲ್ಲಿ ಶ್ರೀಹರ್ಷಂ ನಿರ್ದೇಶಿಸುತ್ತಿರುವ ರಾಮ ಚಕ್ಕನಿ ಸೀತಾ ಎಂಬ ಸಿನಿಮಾದಲ್ಲಿ ಸುಕೃತಾ ನಾಯಕಿಯಾಗಿ ನಟಿಸುತ್ತಿದ್ದಾರೆ. 

ಇಂದ್ರ ನಾಯಕರಾಗಿರುವ ಈ ಚಿತ್ರಕ್ಕೆ  ಪಣಿಕಾಂತ್ ನಿರ್ಮಾಪಕರಾಗಿದ್ದಾರೆ. ಪೇಸ್‍ಬುಕ್‍ನಲ್ಲಿ ಬಂದ ಪ್ರಕಟಣೆ ನೋಡಿ ಅಡಿಷನ್‍ನಲ್ಲಿ ಭಾಗವಹಿಸಿದ  ಸುಕೃತಾ ನಾಯಕಿಯ ಅವಕಾಶವನ್ನು ತಮ್ಮದಾಗಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ ಪಾತ್ರದ ಅಗತ್ಯಕ್ಕೆ ತಕ್ಕಂತೆ ಸುಕೃತಾ ಭಾಷೆಯನ್ನು ಕೂಡ ವರ್ಕ ಶಾಪ್‍ನಲ್ಲಿ ಭಾಗವಹಿಸಿ ಕಲಿತುಕೊಂಡಿದ್ದಾರಂತೆ. 

ಕಮರ್ಷಿಯಲ್ ಹಾಗೂ ರೋಮ್ಯಾಂಟಿಕ್ ಚಿತ್ರವಾಗಿರುವ ರಾಮ ಚಕ್ಕನಿ ಸೀತಾದಲ್ಲಿ ಸುಕೃತಾ ಹಳ್ಳಿಹುಡುಗಿಯಂತಹ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರಂತೆ. ಕಿರಗೂರಿನ ಗಯ್ಯಾಳಿಗಳು ಚಿತ್ರದಲ್ಲಿ ಬಜಾರಿ ಪಾತ್ರ ಮಾಡಿದ್ದ ಸುಕೃತಾ ಈ ಚಿತ್ರದಲ್ಲಿ ಸೌಮ್ಯ ಸ್ವಭಾವದ ಹುಡುಗಿಯ ಪಾತ್ರದಲ್ಲಿ ಮಿಂಚಲಿದ್ದಾರಂತೆ. 

ಈಗಾಗಲೇ ಚಿತ್ರದ ಶೇಕಡಾ 60 ರಷ್ಟು ಚಿತ್ರೀಕರಣ ಮುಗಿದಿದ್ದು, ಹಾಡು ಮತ್ತು ಫೈಟ್ ಸೀನ್‍ಗಳ ಚಿತ್ರೀಕರಣ ಬಾಕಿ ಉಳಿದಿದೆಯಂತೆ. ಇನ್ನು ಈ ಚಿತ್ರದಲ್ಲಿ ಫುಲ್ ಬ್ಯುಸಿಯಾಗಿದ್ದ ಸುಕೃತಾ ಬೇರೆ ಯಾವುದೇ ಚಿತ್ರವನ್ನು ಒಪ್ಪಿಕೊಂಡಿರಲಿಲ್ಲವಂತೆ. ಈಗ ಕನ್ನಡದಲ್ಲಿ ಒಂದೆರಡು  ಒಳ್ಳೆಯ ಕತೆಗಳಿದ್ದು, ಕೇಳಿ ಆಯ್ಕೆ ಮಾಡಿಕೊಳ್ಳುತ್ತೇನೆ ಅನ್ನೋದ ಸುಕೃತಾ ಮಾತು. ಒಟ್ಟಿನಲ್ಲಿ ಕನ್ನಡತಿಯರ ಹವಾ ಇತ್ತೀಚಿಗೆ ಜೋರಾಗಿದ್ದು ಎಲ್ಲೆಡೆಯೂ ಮಿಂಚುತ್ತಿದ್ದಾರೆ. 


ಸಂಬಂಧಿತ ಟ್ಯಾಗ್ಗಳು

#Sukrutha wagle # Ram Chakkani Seetha #Telugu #Kannada


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ