ಮನಸ್ಸಿನಲ್ಲಿದೆ ಬ್ಯೂಟಿಪಾರ್ಲರ್

Mind Is Your BeautyParlour

11-01-2019

ನಾನು ಸುಂದರವಾಗಿರಬೇಕು. ಎಲ್ಲರೂ ನನ್ನ ಸೌಂದರ್ಯವನ್ನ ಹೊಗಳಬೇಕು ಅಂತ ಯಾರಿಗೆ ಆಸೆ ಇರಲ್ಲ ಹೇಳಿ?  ಆದರೆ ಸೌಂದರ್ಯ ಬರಿ ಬಾಹ್ಯ ಮಾತ್ರ ಅಲ್ಲ ಅದು ನಿಮ್ಮ ಅಂತರಂಗದ ಪ್ರತಿಬಿಂಬ ಅನ್ನೋದು ನಿಮಗೆ ಗೊತ್ತಿದೆಯಾ? ಹಲವು ಅಧ್ಯಯನಗಳಿಂದ ಈ ಅಂಶ ಸಾಬೀತಾಗಿದ್ದು, ಯಾರು ಹೆಚ್ಚೆಚ್ಚು ಚಿಂತೆ ಮಾಡುತ್ತಾರೋ, ಇತರರಿಗೆ ಕೇಡು ಬಯಸುತ್ತಾರೋ ಅಥವಾ ಮನಸ್ಸಿನಲ್ಲಿ ದ್ವೇಷ, ಮಾತ್ಸರ್ಯದಂತಹ ನೆಗೆಟಿವ್ ಅಂಶಗಳನ್ನು ಹೊಂದಿರುತ್ತಾರೋ ಅವರು ಬೇಗ ವೃದ್ಧಾಪ್ಯಕ್ಕೆ ತುತ್ತಾಗುತ್ತಾರಂತೆ. 

ತಲೆತಲಾಂತರದಿಂದಲೂ ಸೌಂದರ್ಯ ಮನುಷ್ಯನ ಬದುಕಿನಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತ ಬಂದಿದೆ. ಪ್ರತಿಯೊಬ್ಬರು ತಾವು ಅಂದವಾಗಿರಬೇಕು ಎಂಬ  ಕಾರಣಕ್ಕೆ, ಬಾಹ್ಯ ಸಾಧನಗಳಾದ ಮೇಕಪ್, ಕೇಶ್ ಶೃಂಗಾರ, ಐ ಮೇಕಪ್, ಬಾಡಿ ಮಸಾಜ್‍ಗಳ ಮೊರೆ ಹೋಗ್ತಾರೆ. ಆದರೆ ಅಧ್ಯಯನಗಳು ಹೇಳುವ ಪ್ರಕಾರ ಯಾವ ಮನುಷ್ಯ ಉತ್ತಮ ಮನಸ್ಥಿತಿಯನ್ನು ಹೊಂದಿರುತ್ತಾನೋ ಅವನ ದೈಹಿಕ ಸೌಂದರ್ಯವೂ ಸುಂದರವಾಗಿರುತ್ತದೆ. ಆತ ಯಾವ ಪ್ರಯತ್ನವೂ ಇಲ್ಲದೆ ಹೊಳೆಯುವ ಮುಖ, ಕಾಂತಿಯುತ ಕಣ್ಣುಗಳನ್ನು ಹೊಂದಿರುತ್ತಾನೆ. 

ಮಾನಸಿಕವಾಗಿ ಅತಿಯಾದ ಒತ್ತಡದಿಂದ ಬಳಲುವರರಿಗೆ ತೊನ್ನಿನಂತಹ ಕಾಯಿಲೆಗಳು, ಚರ್ಮರೋಗ, ರಾತ್ರಿ ಬೆಳಗಾಗುವುದರ ಒಳಗೆ ತಲೆಕೂದಲು ಉದುರುವುದು ಸೇರಿ ಹಲವು ದೈಹಿಕ ಸಮಸ್ಯೆಗಳು ಎದುರಾದ ಉದಾಹರಣೆ ಇದೆ. ಅಷ್ಟೇ ಅಲ್ಲ ಕೆಲವರು ಅತಿಯಾದ ಚಿಂತೆ, ಕೋಪ, ದ್ವೇಷದಂತಹ ಭಾವನೆಗಳಿಂದ ದೀಢೀರ ಚರ್ಮಕಾಯಿಲೆ, ತೂಕಹೆಚ್ಚಳ, ಹೃದಯಾಘಾತದಂತಹ ಸಮಸ್ಯೆಗಳಿಗೆ  ತುತ್ತಾಗಿದ್ದಾರೆ. ಕೆಟ್ಟ ಯೋಚನೆಗಳು ಕೇವಲ ಮನುಷ್ಯನ ಮನಸ್ಸಿನ ಮೇಲೆ ಮಾತ್ರವಲ್ಲ ದೇಹದ ಮೇಲೂ ಪರಿಣಾಮ ಬೀರುತ್ತವೆ. 

ಮನುಷ್ಯ ಎಲ್ಲಿಯವರೆಗೆ ತನ್ನ ಮನಸ್ಸಿನಲ್ಲಿ ಧನಾತ್ಮಕ ವಿಚಾರಗಳನ್ನು ತುಂಬಿಕೊಂಡಿರುತ್ತಾನೋ ಅಲ್ಲಿಯವರೆಗೆ ಆರೋಗ್ಯ, ಚರ್ಮದ ಕಾಂತಿ. ಮುಖದ ತೇಜಸ್ಸು ಎಲ್ಲವೂ ವೃದ್ಧಿಸುತ್ತದೆ. ಆದರೆ ಮನಸ್ಸಿನಲ್ಲಿ ವಿಷ ತುಂಬಿಕೊಂಡರೆ ಆರೋಗ್ಯವೇ ಕ್ಷೀಣಿಸುತ್ತದೆ. ಹೀಗಾಗಿ ನಮಗೆ ನಮ್ಮ ಸೌಂದರ್ಯದ ಮೇಲೆ ಪ್ರೀತಿ ಅಭಿಮಾನವಿದ್ದರೇ, ಸೌಂದರ್ಯವನ್ನು ಮನಸ್ಸಿನಿಂದಲೇ ಮೂಡಿಸಿಕೊಳ್ಳಲು ಪ್ರಯತ್ನಿಸಬೇಕು. ಮನಸ್ಸಿನಲ್ಲಿ ಧನಾತ್ಮಕ ವಿಚಾರ ಇರಬೇಕು. ಸದಾ ಎಲ್ಲರ ಮೇಲೂ ಪ್ರೀತಿ, ಗೌರವ,ಅಭಿಮಾನ ತೋರಿಸಬೇಕು. 
ಪೇಸ್ ಇಸ್ ದ ಇಂಡೆಕ್ಸ್ ಆಫ್  ಮೈಂಡ್ ಎಂಬ ಇಂಗ್ಲೀಷ್ ಗಾದೆ ಮಾತಿನಂತೆ ಮುಖ ನಮ್ಮ ಮನಸ್ಸಿನ ಪ್ರತಿಬಿಂಬವಾದರೇ, ನಮ್ಮ ಕಣ್ಣು ನಮ್ಮ ಆತ್ಮದ ಕಿಟಕಿ ಇದ್ದಂತೆ. ನಿಮ್ಮ ಮುಖ ನೋಡುತ್ತಿದ್ದಂತೆ ನಿಮ್ಮ ಆತ್ಮ ಹಾಗು ಮನಸ್ಸು ಹೇಗಿದೆ ಎಂಬುದನ್ನು ಹೇಳಬಹುದು. ಹೀಗಾಗಿ ನೀವು ಜಗ ಮೆಚ್ಚುವ ಸೌಂದರ್ಯವನ್ನು ಬಯಸುತ್ತಿದ್ದರೇ ಮೊದಲು ನಿಮ್ಮ ಮನಸ್ಸು ಮತ್ತು ಆತ್ಮವನ್ನು ಸ್ವಚ್ಛಗೊಳಿಸಿಕೊಳ್ಳಬೇಕು. ಆಗ ನಿಮ್ಮ ಬಾಹ್ಯ ಬ್ಯೂಟಿಯೂ ಝಗಮಗಿಸಿ ಎಲ್ಲರನ್ನು ಸೆಳೆಯಬಹುದು. ಮತ್ಯಾಕೆ ತಡ  ನೀವು ಹೊರಜಗತ್ತಿನಲ್ಲಿರುವ ಬ್ಯೂಟಿಪಾರ್ಲರ್ ಬದಲು ಆಂತರಿಕ ಬ್ಯೂಟಿಪಾರ್ಲರ್ ಮೊರೆ ಹೋಗಿ ಉತ್ತಮ ಸೌಂದರ್ಯ ಪಡೆದುಕೊಳ್ಳಿ. 


ಸಂಬಂಧಿತ ಟ್ಯಾಗ್ಗಳು

#Mind #Positive #BeautyParlour #Negative


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ