ಸಿದ್ಧಗಂಗಾ ಶ್ರೀಗಳ ಚಿಕಿತ್ಸೆಗೆ ಜಯದೇವ ವೈದ್ಯರ ತಂಡ

 Jayadeva Doctors Team for Treatment of SiddagangaShree

11-01-2019

ಕಳೆದ ಕೆಲ ದಿನಗಳಿಂದ ಅನಾರೋಗ್ಯಕ್ಕಿಡಾಗಿರುವ ನಡೆದಾಡುವ ದೇವರು ಎಂದೇ ಕರೆಯಿಸಿಕೊಳ್ಳುವ ಸಿದ್ಧಗಂಗಾಶ್ರೀಗಳಿಗೆ ಚಿಕಿತ್ಸೆ ಮುಂದುವರಿದಿದೆ. ತುಮಕೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಿದ್ಧಗಂಗಾಶ್ರೀಗಳ ಆರೋಗ್ಯ ನೀರಿಕ್ಷಿತ ಮಟ್ಟದಲ್ಲಿ ಚೇತರಿಸಿಕೊಳ್ಳುತ್ತಿಲ್ಲ ಎಂದು ಅವರನ್ನು ನೋಡಿಕೊಳ್ಳುತ್ತಿರುವ ವೈದ್ಯರು ಪ್ರತಿಕ್ರಿಯಿಸಿದ್ದಾರೆ. ಈ ಮಧ್ಯೆ ಸಿಎಂ ಸೂಚನೆ ಮೇರೆಗೆ ಇಂದು ಜಯದೇವ ಆಸ್ಪತ್ರೆಯ ವೈದ್ಯರ ತಂಡ ತುಮಕೂರಿಗೆ ಭೇಟಿ ನೀಡಲಿದ್ದು,  ಶ್ರೀಗಳ ಆರೋಗ್ಯ ಪರಿಶೀಲನೆ ನಡೆಸಲಿದೆ. 

ಶ್ರೀಗಳು ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿದ್ದು, ಶ್ವಾಸಕೋಶದಲ್ಲಿ ಸಂಗ್ರಹವಾಗುತ್ತಿರುವ ನೀರನ್ನು ಹೊರ ತೆಗೆಯಲಾಗುತ್ತಿದೆ. ಸೋಂಕಿನಿಂದಾಗಿ ಶ್ರೀಗಳಿಗೆ ಸಹಜ ಉಸಿರಾಟಕ್ಕೆ  ತೊಂದರೆಯಾಗುತ್ತಿದೆ. ಚೈನೈನ ರೇವಾ ಆಸ್ಪತ್ರೆಯ ವೈದ್ಯರುಗಳ ಮೇಲುಸ್ತುವಾರಿಯಲ್ಲಿ ಶ್ರೀಗಳಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ದೇಹದಲ್ಲಿ ಅಲ್ಬಮಿನ್ ಕಣಗಳ ಉತ್ಪತ್ತಿ ಮತ್ತು ರಕ್ತಕಣಗಳ ಉತ್ಪತ್ತಿಯಾಗದೆ ಇರೋದರಿಂದ ಆರೋಗ್ಯ ಚಿಕಿತ್ಸೆಗೆ ನೀರಿಕ್ಷಿತ ಪ್ರಮಾಣದಲ್ಲಿ ಸ್ಪಂದಿಸುತ್ತಿಲ್ಲ ಎನ್ನಲಾಗಿದೆ.


 ಇನ್ನು ಇಂದು ತಜ್ಞ ವೈದ್ಯರ ತಂಡ ಆಸ್ಪತ್ರೆಗೆ ಭೇಟಿ ನೀಡಲಿದ್ದು, ಹೃದಯರೋಗ ತಜ್ಞ ಹಾಗೂ ಜಯದೇವ ಆಸ್ಪತ್ರೆಯ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ ಅವರು ಪರಿಶೀಲಿಸಿದ ಬಳಿಕ ಶ್ರೀಗಳ ಚಿಕಿತ್ಸೆಯ ಸ್ವರೂಪವನ್ನು ನಿರ್ಧರಿಸಿಲಾಗುತ್ತದೆ ಎಂದು ಕಿರಿಯ ಶ್ರೀಗಳು ಪ್ರತಿಕ್ರಿಯಿಸಿದ್ದಾರೆ.  

ಅಗತ್ಯಬಿದ್ದರೇ  ಶ್ರೀಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರಿನಿಂದ ಬೆಂಗಳೂರಿಗೆ ಶಿಫ್ಟ್ ಮಾಡುವ ಚಿಂತನೆ ಕೂಡ ಇದ್ದು, ಸಂಜೆ ವೇಳೆಗೆ ಸ್ಪಷ್ಟ ಚಿತ್ರಣ ದೊರೆಯಲಿದೆ. ಕಳೆದ ಒಂದು ವಾರದ ಹಿಂದೆ ಶ್ರೀಗಳಿಗೆ ಸೋಂಕು ಹೆಚ್ಚಾಗಬಾರದೆಂಬ ಕಾರಣಕ್ಕೆ ಅವರನ್ನು ಶ್ರೀಮಠದಿಂದ ತುಮಕೂರಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. 


ಸಂಬಂಧಿತ ಟ್ಯಾಗ್ಗಳು

#SiddagangaShree #Doctors Team # Jayadeva #Treatment


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ