ಒಟ್ಟಿಗೆ ತೆರೆ ಮೇಲೆ ಬರ್ತಿದ್ದಾರೆ ಅಮಿತಾಬ್-ಐಶ್ವರ್ಯಾ 

Aishwarya-Amitabh in Mani Ratnam

11-01-2019

ಬಾಲಿವುಡ್‍ನ ಬಿಗ್‍ಬಿ ಖ್ಯಾತಿಯ ನಟ ಅಮಿತಾಬ್ ಬಚ್ಚನ್ ಹಾಗೂ ಅವರ ಮುದ್ದಿನ ಸೊಸೆ ವಿಶ್ವಸುಂದರಿ ಐಶ್ವರ್ಯ ರೈ ಮತ್ತೊಮ್ಮೆ ತೆರೆ ಮೇಲೆ ಒಂದಾಗಲಿದ್ದಾರೆ. ಐತಿಹಾಸಿನ ಚಿತ್ರಗಳ ಮೂಲಕವೇ ಹೆಸರು ಮಾಡಿದ ನಿರ್ದೇಶಕ ಮಣಿರತ್ನಂ ತಾವು ನಿರ್ದೇಶಿಸುತ್ತಿರುವ ಚಿತ್ರದಲ್ಲಿ ಮಾವ-ಸೊಸೆಯನ್ನು ಒಟ್ಟಾಗಿ ನಟಿಸುವಂತೆ ಆಫರ್ ನೀಡಿದ್ದರು. ಇದಕ್ಕೆ ಐಶ್ವರ್ಯಾ ಈಗಾಗಲೇ ಒಪ್ಪಿಕೊಂಡಿದ್ದು, ಬಿಗ್ ಬಿ ಒಪ್ಪಿಗೆ ನೀಡಿದ ತಕ್ಷಣ ಚಿತ್ರೀಕರಣ ಆರಂಭವಾಗಲಿದೆ. 

ಸಂಕ್ರಾಂತಿ ಹಬ್ಬದ  ವೇಳೆಗೆ ನಿರ್ದೇಶಕ ಮಣಿರತ್ನಂ ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ನೀಡಲಿದ್ದು,  ಲೇಖಕ ಕಲ್ಕಿ ಕೃಷ್ಣಮೂರ್ತಿಯವರ ಪೊನ್ನಿಯನ್ ಸೆಲ್ವನ್ ಎಂಬ ಕಾದಂಬರಿ ಆಧರಿಸಿ ಸಿನಿಮಾ ಮೂಡಿಬರಲಿದೆ. ಐಶ್ ಹಾಗೂ ಬಿಗ್ ಬಿ ಜೊತೆಗೆ ದಕ್ಷಿಣ ಭಾರತದ ಇನ್ನಷ್ಟು ಸ್ಟಾರ್ ನಟ-ನಟಿಯರೂ ಕೂಡ ಈ ಚಿತ್ರದಲ್ಲಿ ಇರಲಿದ್ದು,  ಎಲ್ಲ ಮಾಹಿತಿ ಸಧ್ಯದಲ್ಲೆ ಬಹಿರಂಗವಾಗಲಿದೆ. 

ಈ ಸಿನಿಮಾ ಮೂಲಕ ಬಿಗ್ ಬಿ  ತಮ್ಮ ಸೊಸೆ ಐಶ್ವರ್ಯಾ ರೈ ಜೊತೆ ಮತ್ತೊಮ್ಮೆ ತೆರೆ ಹಂಚಿಕೊಳ್ಳಲಿದ್ದಾರೆ. ಈ ಹಿಂದೆ ಅಮಿತಾಬ್ ಬಚ್ಚನ್ ಹಾಗೂ ಐಶ್ವರ್ಯಾ ರೈ, ಸರ್ಕಾರರಾಜ್ ಸಿನಿಮಾದಲ್ಲಿ ಒಟ್ಟಿಗೆ  ಕಾಣಿಸಿಕೊಂಡಿದ್ದರು. ಬಹುವರ್ಷಗಳ ಬಳಿಕ ಒಟ್ಟಾಗಿ ತೆರೆ ಮೇಲೆ ಬರುವ ಈ ಮಾವ ಸೊಸೆ ಜೋಡಿ ಮೋಡಿ ಮಾಡುತ್ತಾ ಕಾದುನೋಡಬೇಕಿದೆ. 
 


ಸಂಬಂಧಿತ ಟ್ಯಾಗ್ಗಳು

#Amitabh Bachchan #Mani Ratnam #Aishwarya Rai #Cinema


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ