ಕುಮಾರಸ್ವಾಮಿ ವರ್ಸಸ್ ಡಾ ಸುಧಾಕರ್, ಇದು ಮುಗಿಯದ ವಾರ್

 Kumaraswamy vs. Dr Sudhakar, This Is An Unfinished War

11-01-2019

ಅದ್ಯಾಕೋ ಚಿಕ್ಕಬಳ್ಳಾಪುರ ಶಾಸಕ ಡಾ.ಸುಧಾಕರ್ ಹಾಗೂ ಸಿಎಂ ಕುಮಾರಸ್ವಾಮಿಯವರ ನಡುವೆ ಅಸಮಾಧಾನ ಮುಗಿಯುವ ಲಕ್ಷಣವೇ ಕಾಣಿಸುತ್ತಿಲ್ಲ. ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಜೆಡಿಎಸ್ ಹಾಗೂ ಸಿಎಂ ಬಗ್ಗೆ ತಮ್ಮ ಅತೃಪ್ತಿಯನ್ನು ಪ್ರಕಟಿಸುತ್ತಲೇ ಇರುವ ಡಾ.ಸುಧಾಕರ್, ಸಚಿವ ಸ್ಥಾನ ಕೈತಪ್ಪಿದಾಗಲೂ ಸರ್ಕಾರವನ್ನು ಟೀಕಿಸಿದ್ದರು. ಆದರೆ ಈಗ ನಿಗಮಮಂಡಳಿ ಸ್ಥಾನ ಕೈತಪ್ಪಿರೋದಿಕ್ಕೆ ಕೆಂಡಾಮಂಡಲವಾಗಿರುವ  ಡಾ.ಸುಧಾಕರ್ ಈ ಸರ್ಕಾರ ಎಸ್‍ಎಸ್‍ಎಲ್‍ಸಿ ಫೇಲ್ ಆಗಿರೋರಿಗೆ ಎರಡೆರಡು ಸಚಿವ ಸ್ಥಾನ ಕೊಡುತ್ತೆ ಎನ್ನುವ ಸರ್ಕಾರದವಿರುದ್ಧ ತಮ್ಮ ಸಮರ ಸಾರಿದ್ದಾರೆ. ಅಷ್ಟೆ ಅಲ್ಲ, ಇಂತಹದೊಂದು ಬಾಂಬ್ ಸಿಡಿಸುವ ಮೂಲಕ ಜೆಡಿಎಸ್‍ನ  ರೇವಣ್ಣ ಹಾಗೂ ಸಿಎಂ ಕುಮಾರಸ್ವಾಮಿಗೆ ಪರೋಕ್ಷ ಟಾಂಗ್ ನೀಡಿದ್ದಾರೆ.  

20 ಶಾಸಕರನ್ನು ವಿವಿಧ ನಿಗಮ ಮಂಡಳಿ ನೇಮಿಸಿದ ಕಾಂಗ್ರೆಸ್ ಅನುಮೋದನೆಗಾಗಿ ಸಿಎಂ ಬಳಿಗೆ ಕಳುಹಿಸಿತ್ತು. ಆದರೆ ಅದ್ಯಾಕೋ ಗೊತ್ತಿಲ್ಲ ಸಿಎಂ ಕುಮಾರಸ್ವಾಮಿ ಡಾ.ಸುಧಾಕರ್, ಎನ್.ಎ.ಹ್ಯಾರೀಸ್, ಎಸ್.ಟಿ.ಸೋಮಶೇಖರ್ ಸೇರಿದಂತೆ ಐವರನ್ನು ಕೈಬಿಟ್ಟು ಉಳಿದವರ ನೇಮಕಕ್ಕೆ ಅಂಕಿತ ಹಾಕಿದ್ದರು. ಇದು ಡಾ.ಸುಧಾಕರ್ ಅವರನ್ನು ಕೆರಳಿಸಿದ್ದು, ಎಸ್‍ಎಸ್‍ಎಲ್‍ಸಿ ಪಾಸಾಗವರಿಗೆ ಎರಡೆರಡು ಮಂತ್ರಿ ಸ್ಥಾನವಿದೆ ಎನ್ನುವ ಮೂಲಕ ಸಚಿವ ಸಂಪುಟವನ್ನೆ ಬಹಿರಂಗವಾಗಿ ಟೀಕಿಸಿದ್ದಾರೆ. 

ಡಾ.ಸುಧಾಕರ್ ಅಸಮಾಧಾನಲ್ಲೂ ಅರ್ಥವಿದೆ. ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್‍ನ್ನು ಬಲಪಡಿಸುವ ಉದ್ದೇಶದಿಂದ ಡಾ.ಸುಧಾಕರ್ ಹುದ್ದೆ ಅಪೇಕ್ಷಿಸಿದ್ದರು. ಆದರೆ ಹುದ್ದೆ ನೀಡದೆ ಇರೋದರಿಂದ ಅವರಿಗೆ ನೋವಾಗಿದೆ. ಅದಕ್ಕೆ ಟೀಕಿಸುತ್ತಿದ್ದಾರೆ. ಎಸ್‍ಎಸ್‍ಎಲ್‍ಸಿ ಫೇಲ್ ಆದ ರೇವಣ್ಣನವರ ಬಳಿ ಎರಡು ಖಾತೆಗಳಿದ್ದರೇ, 8 ನೇ ತರಗತಿ ಪಾಸಾಗಿರುವ ಜಿ.ಟಿ.ದೇವೆಗೌಡರ್ ಬಳಿ ಉನ್ನತ ಶಿಕ್ಷಣ ಖಾತೆಯಿದೆ. ಹೀಗಾಗಿ ಸುಧಾಕರ್ ಸಿಎಂ ವಿರುದ್ಧ ತಿರುಗಿ ಬಿದ್ದಿರೋದು ತಪ್ಪೇನಲ್ಲ ಅಂತಿದ್ದಾರೆ ಕೆಲ ಕಾಂಗ್ರೆಸ್ ಕಾರ್ಯಕರ್ತರು. 

ಸುಧಾಕರ್ ಗೆ ಸ್ವತಃ ಸಾಕಷ್ಟು ವಿದ್ಯಾರ್ಹತೆ ಹಾಗೂ ಜನಬೆಂಬಲವಿದೆ. ಅಂತಹದರಲ್ಲಿ ಸಿಎಂ ಅವರಿಗೆ ಸಚಿವ ಸ್ಥಾನವನ್ನು ಕೊಡದೆ ಕೊನೆಗೆ ನಿಗಮ ಮಂಡಳಿಯನ್ನು ಕಿತ್ತುಕೊಂಡಿದ್ದು ಯಾಕೆ ಅನ್ನೋದರ ಹಿಂದೆ ಒಂದು ಇಂಟರಸ್ಟಿಂಗ್  ವಿಚಾರವಿದೆ. ಈ ಹಿಂದೆ ಸುಧಾಕರ್‍ಗೆ ಸಚಿವ ಸ್ಥಾನ ಸಿಗದೆ ಇರೋದರಿಂದ ಬೇಸರಗೊಂಡಿದ್ದ ಸುಧಾಕರ್ ಕುಮಾರಸ್ವಾಮಿಯವರನ್ನು ಟೀಕಿಸಿದ್ದರು. ಇದೇ ಸೇಡು ತೀರಿಸಿಕೊಳ್ಳೋಕೆ ಸಿಎಂ ನಿಗಮ ಮಂಡಳಿಯಿಂದ ಕೈಬಿಟ್ಟಿದ್ದಾರೆ. ಆದರೆ ಶಾಸಕ ಡಾ.ಸುಧಾಕರ್ ಯಾರಿಗೂ ಕೇರ್ ಮಾಡುವ ಸ್ವಭಾವದವರಲ್ಲ ಹೀಗಾಗಿ ಮತ್ತೊಮ್ಮೆ ಡಿಗ್ರಿ ಕಂಪ್ಲೀಟ್ ಮಾಡದವರೆಲ್ಲ ಸಿಎಂಗಳು ಎಂದು ಟೀಕಿಸಿದರೂ ಅಚ್ಚರಿ ಏನಿಲ್ಲ ಅಂತಿದ್ದಾರೆ ಸುಧಾಕರ್ ಆಪ್ತರು. 
 


ಸಂಬಂಧಿತ ಟ್ಯಾಗ್ಗಳು

# Kumaraswamy #Unfinished War #Dr Sudhakar #Karnataka


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ