ಟಿವಿ ದಾಸರಾಗುತ್ತಿದ್ದಾರೆ ಬೆಂಗಳೂರಿನ ಮಹಿಳೆಯರು!

Women

10-01-2019

ಇದು ತಂತ್ರಜ್ಞಾನದ ಯುಗ. ಹೀಗಾಗಿ ಎಲ್ಲವೂ ನಮಗೆ ನಮ್ಮ ಬೆರಳಂಚಿನಲ್ಲೆ ಲಭ್ಯವಾಗುತ್ತಿದೆ. ಜಗತ್ತಿನ ಯಾವುದೋ ಮೂಲೆಯಲ್ಲಿ ನಡೆಯುತ್ತಿರುವ ವಿದ್ಯಮಾನವನ್ನು ನಮ್ಮ ಕಣ್ಣಿಗೆ ಕಟ್ಟುವಂತೆ ತೆರೆಯ ಮೇಲೆ ತೋರಿಸುವ ಮಾಧ್ಯಮವಾದ ಟಿವಿ ಇಂತಹುದೆ ತಂತ್ರಜ್ಞಾನದ ಆವಿಷ್ಕಾರ. ಆದರೆ ಹೀಗೆ ನಮ್ಮ ಮನೆಯೊಳಕ್ಕೆ ಬಂದ ಟಿವಿ ನಮ್ಮ ಬದುಕಿನ ಬಹುಭಾಗವನ್ನೆ ನುಂಗಿ ಹಾಕುತ್ತಿದೆ ಎಂದರೆ ನೀವು ನಂಬಲೇ ಬೇಕು. 

ಅಧ್ಯಯನವೊಂದರ ಪ್ರಕಾರ ದೇಶದಲ್ಲಿ ಟಿವಿನೋಡುವವರ ಸಂಖ್ಯೆ ಹೆಚ್ಚಿರುವ  ರಾಜ್ಯ ಕರ್ನಾಟಕವಂತೆ. ಪ್ರತಿನಿತ್ಯ ಸರಾಸರಿ 4 ಗಂಟೆಗಳ ಕಾಲ ಇಲ್ಲಿ ಟಿವಿ ವೀಕ್ಷಿಸಲಾಗುತ್ತದೆ ಎನ್ನುತ್ತದೆ ಮಾಹಿತಿ. ಹಾಗಿದ್ದರೆ ಗ್ರಾಮೀಣ ಭಾಗಗಳಿಂದ ಕೂಡಿದ ಕರ್ನಾಟಕದಲ್ಲಿ ಹಳ್ಳಿ ಜನ ಹೆಚ್ಚು ಟಿವಿ ನೋಡ್ತಾರೆ ಅಂತ ನೀವಂದುಕೊಂಡ್ರೆ ಅದು ನಿಮ್ಮ ತಪ್ಪುಕಲ್ಪನೆ.  ಸಮೀಕ್ಷೆಯೊಂದರ ಪ್ರಕಾರ ರಾಜ್ಯದಲ್ಲಿ ಅತಿ ಹೆಚ್ಚು ಟಿವಿ ನೋಡುವುದು ರಾಜಧಾನಿ ಬೆಂಗಳೂರಿಗರಂತೆ. 

ಹೌದು ಸರಾಸರಿ ದಿನಕ್ಕೆ 6 ಗಂಟೆ ಅವಧಿ ಬೆಂಗಳೂರಿನ ಜನರು ಟಿವಿ ನೋಡ್ತಾರಂತೆ. ಅದರಲ್ಲಿ ಮಹಿಳೆಯರದ್ದೆ ಮೇಲುಗೈಯಂತೆ. ಈ ಸಮೀಕ್ಷೆಯನ್ನು ತಳ್ಳಿಹಾಕುವಂತಿಲ್ಲ. ಯಾಕಂದ್ರೆ ಪ್ರತಿನಿತ್ಯ ಕನ್ನಡದ ಎಲ್ಲ ಮನೋರಂಜನಾ ವಾಹಿನಿಗಳು 6 ರಿಂದ 11 ಗಂಟೆಯವರೆಗೆ ನಿರಂತರವಾಗಿ ಧಾರಾವಾಹಿ  ಪ್ರಸಾರ ಮಾಡುತ್ತವೆ. ಇದಕ್ಕೆ ಮನಸೋತಿರುವ ಹೆಣ್ಣುಮಕ್ಕಳು ಒಂದಾದ ಮೇಲೆ ಒಂದರಂತೆ ಧಾರಾವಾಹಿ ನೋಡುತ್ತಲೆ ಇರುತ್ತಾರೆ. 

ಹೀಗೆ ಮಹಿಳೆಯರನ್ನು ಟಾರ್ಗೆಟ್ ಮಾಡಿ ಕಣ್ಣೀರು ಬರಿಸುವ ಧಾರವಾಹಿ ಪ್ರಸಾರ ಮಾಡುವ ವಾಹಿನಿಗಳು ಇತ್ತ ಜನರಿಂದಲೂ ಕೇಬಲ್ ಹೆಸರಿನಲ್ಲಿ ಸುಲಿಗೆ ಮಾಡುತ್ತಿದ್ದರೇ, ಅತ್ತ ಜಾಹೀರಾತು ಮಾಧ್ಯಮಗಳಿಂದಲೂ ಲಕ್ಷಗಟ್ಟಲೆ  ವಸೂಲಿ ಮಾಡುತ್ತವೆ.  ಸೀರಿಯಲ್‍ಗೆ ದಾಸರಾಗಿರುವ ಹೆಣ್ಣುಮಕ್ಕಳು ಈ ಜಾಹೀರಾತುಗಳನ್ನು 
ಬಿಟ್ಟ ಕಣ್ಣು ಬಿಟ್ಟಂತೆ ನೋಡುತ್ತ ಕುಳಿತಿರುತ್ತಾರೆ. ಹೀಗಾಗಿ ಸಿಲಿಕಾನ ಸಿಟಿ, ಐಟಿ ಸಿಟಿ ಎಂದೆಲ್ಲ ಕರೆಯಿಸಿಕೊಳ್ಳುವ ಬೆಂಗಳೂರಿನಲ್ಲೆ ಹೆಣ್ಣುಮಕ್ಕಳು ಅತಿಯಾಗಿ ಟಿವಿ ದಾಸರಾಗಿರುವ ಸಂಗತಿ ಬೆಳಕಿಗೆ ಬಂದಿದೆ. 

ಧಾರವಾಹಿಗಳು ಮಹಿಳೆಯರ ಅವಿಭಾಜ್ಯ ಅಂಗದಂತಾಗಿದ್ದು, ಏನನ್ನಾದರೂ ಬಿಡ್ತಾರೆ ಸೀರಿಯಲ್ ಬಿಡಲ್ಲ ಎನ್ನುವಂತಹ ಸ್ಥಿತಿ ಹೆಣ್ಣುಮಕ್ಕಳದ್ದು. ಹೀಗಾಗಿ ಟಿವಿ ವೀಕ್ಷಣೆಯಲ್ಲೂ ಮಹಿಳೆಯರಿಂದಲೇ ವಿಶೇಷ ಸಾಧನೆಯಂತಾಗಿದ್ದು, ಕೇಬಲ್ ಮತ್ತು ಜಾಹೀರಾತು ಮಾಧ್ಯಮದ ಉದ್ಧಾರಕ್ಕೆ ಪರೋಕ್ಷ ಕೊಡುಗೆ ನೀಡುತ್ತಿದ್ದಾರೆ ಎಂದರೆ ತಪ್ಪಾಗಲಿಕ್ಕಿಲ್ಲ. 


ಸಂಬಂಧಿತ ಟ್ಯಾಗ್ಗಳು

#Bangalore #Womans # Tv Watching #seiral


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ