ಅಷ್ಟೊಂದು ಹಣವೂ ವಿವಾಹವನ್ನು ಉಳಿಸಲಿಲ್ಲವೇ?

So Much Off Money   Did Not Save The Marriage?

10-01-2019

ಪ್ರಪಂಚಕ್ಕೆ ಆನ್‍ಲೈನ್ ಉದ್ಯಮದ ಹೊಸ ಪಾಠವನ್ನು ಹೇಳಿದ ಯಶಸ್ವಿ ಉದ್ಯಮಿ, ವಿಶ್ವದ ಅತ್ಯಂತ ಶ್ರೀಮಂತ ದಂಪತಿಗಳು 25 ವರ್ಷಗಳ ಬಳಿಕ ತಮ್ಮ ಸುದೀರ್ಘ ದಾಂಪತ್ಯಕ್ಕೆ ಅಂತ್ಯಹಾಡಲು ನಿರ್ಧರಿಸಿದ್ದಾರೆ. ನೀವು-ನಾವೆಲ್ಲ ಪ್ರತಿನಿತ್ಯ ನಮ್ಮಿಷ್ಟದ ವಸ್ತುಗಳನ್ನು ಬೆರಳ ತುದಿಯಲ್ಲಿ ಆಯ್ಕೆಮಾಡಿ ಆರ್ಡರ್ ಮಾಡಿ ಪಡೆದುಕೊಳ್ಳುವಂತಹ ಯಶಸ್ವಿ ವ್ಯವಸ್ಥೆಯೊಂದನ್ನು ಸೃಷ್ಟಿಸಿದ ಅಮೇಜಾನ್ ಆನ್‍ಲೈನ್ ಉದ್ಯಮದ ರೂವಾರಿ  ಜೆಫ್ ಬಿಜೋಸ್ ಮತ್ತು ಮ್ಯಾಕೆಂಜೀ ತಮ್ಮ ದಾಂಪತ್ಯವನ್ನು ವಿಚ್ಛೇದನದಲ್ಲಿ ಕೊನೆಗೊಳಿಸಲು ನಿರ್ಧರಿಸಿದ್ದು, ಅತ್ಯಂತ ಸೌಹಾರ್ದಯುತವಾಗಿ ಈ ನಿರ್ಣಯವನ್ನು ಪ್ರಕಟಿಸಿ ಅಚ್ಚರಿ ಮೂಡಿಸಿದ್ದಾರೆ. 

25 ವರ್ಷಗಳ ಮಾದರಿ ದಾಂಪತ್ಯದ ಬಳಿಕ ಇದೀಗ ಈ ಶ್ರೀಮಂತ ದಂಪತಿ ವಿಚ್ಛೆಧನ ಪಡೆದುಕೊಳ್ಳಲು ನಿರ್ಧರಿಸಿದ್ದಾರೆ. ನಿನ್ನೆ ಈ ವಿಚಾರವನ್ನು ಸ್ವತಃ ಅಮೇಜಾನ್ ಮಾಲೀಕ ಜೆಫ್ ಬಿಜೋಸ್ ಅಮೇಜಾನ್ ಸಿಈಓ ಟ್ವಿಟರ್ ಅಕೌಂಟ್‍ನಲ್ಲಿ ಪ್ರಕಟಿಸಿದ್ದಾರೆ. 54 ವರ್ಷದ ಜೆಫ್ ಬಿಜೋಸ್ ಹಾಗೂ 48 ವರ್ಷದ ಲೇಖಕಿ ಮ್ಯಾಕೆಂಜೀ 
ದಂಪತಿಗೆ ನಾಲ್ಕು ಮಕ್ಕಳಿದ್ದಾರೆ. 

ತಮ್ಮ ಟ್ವಿಟರ್ ಅಕೌಂಟ್‍ನಲ್ಲಿ  ಸುಂದರ ಬರಹದ ಮೂಲಕ ವಿಚಾರವನ್ನು ಹಂಚಿಕೊಂಡಿರುವ ಜೇಫ್ ಬಿಜೋಸ್, " ನಮ್ಮ  ವೈಯಕ್ತಿಕ ಬದುಕಿನ ವಿಚಾರಗಳ ಬಗ್ಗೆ ನಮ್ಮ ಸ್ನೇಹಿತರು, ಕುಟುಂಬದವರು ಹಾಗೂ ಜನರು ತಿಳಿದಿರಬೇಕೆಂದು ನಾವು ಬಯಸುತ್ತೇವೆ. ಸುದೀರ್ಘ ಅವಧಿಯ ಈ ಪ್ರೇಮಾವಿಷ್ಕಾರದ ಬದುಕಿನ ಬಳಿಕ  ನಾವು ಬೇರೆಯಾಗಿ ಬದುಕಲು ಬಯಸುತ್ತಿದ್ದೇವೆ.   ಆದರೆ ಸ್ನೇಹಿತರಾಗಿ, ಒಳ್ಳೆಯ ಪೋಷಕರಾಗಿ, ಉದ್ಯಮದ ಪಾಲುದಾರರಾಗಿ ಹಾಗೂ ಹೊಸ ಸಾಹಸಗಳಿಗೆ ಒಳ್ಳೆಯ ಸಂಗಾತಿಯಾಗಿ ನಾವು ಎಂದಿಗೂ ಜೊತೆಯಾಗಿರುತ್ತೇವೆ ಎಂದು ಹೇಳಲು ಹರ್ಷವಿದೆ " ಎಂದಿದ್ದಾರೆ. 1994 ರಲ್ಲಿ ಅಮೇಜಾನ್‍ನನ್ನು ಕೇವಲ ಪುಸ್ತಕ ಮಾರಾಟದ ಆನ್‍ಲೈನ್ ಮಳಿಗೆಯಾಗಿ ಆರಂಭಿಸಿದಾಗ ಪತ್ನಿ ನೀಡಿದ ಸಹಕಾರವನ್ನು ಕೂಡ ಅವರು ಸ್ಮರಿಸಿಕೊಂಡಿದ್ದಾರೆ. ಹೀಗೆ ಪ್ರೋತ್ಸಾಹಿಸುವ ಜೀವಗಳು ಜೊತೆಗಿದ್ದರೆ ಎಂತಹ ಸಾಹಸವನ್ನಾದರೂ ಮಾಡಬಹುದು ಎಂದು ಅವರು ಹೇಳಿಕೊಂಡಿದ್ದಾರೆ.

ಜಗತ್ತಿನ ಶ್ರೀಮಂತ ದಂಪತಿಯಾಗಿ ಹೆಸರು ಮಾಡಿದ್ದ ಜೆಫ್ ಬಿಜೋಸ್ ಹಾಗೂ ಮ್ಯಾಕೆಂಜೀ, ಸಾಕಷ್ಟು ಸಾಮಾಜಿಕ ಕಾರ್ಯಗಳಲ್ಲೂ ತೊಡಗಿಕೊಂಡಿದ್ದು, ತಮ್ಮ ಸಂಪತ್ತಿನ ಒಂದಷ್ಟು ಭಾಗವನ್ನು ದಾನಧರ್ಮಕ್ಕಾಗಿಯೂ ಬಳಸುತ್ತಿದ್ದರು.  2012 ರಲ್ಲಿ ಸಂಲಿಗಿಗಳ ವಿವಾಹವನ್ನು ಕಾನೂನು ಬದ್ಧಗೊಳಿಸುವ ಉದ್ದೇಶಕ್ಕೆ ವಾಷಿಂಗ್‍ಟನ್ ಸರ್ಕಾರಕ್ಕೆ 2.5 ಮಿಲಿಯನ್ ಹಣವನ್ನು ದಾನವಾಗಿ ನೀಡಿದ್ದರು. ಇದಲ್ಲದೆ ವಸತಿ ರಹಿತರು ಹಾಗೂ ಆರ್ಥಿಕವಾಗಿ ಹಿಂದುಳಿದವರಿಗಾಗಿ ಸ್ಕೂಲ್ ಆರಂಭಿಸಲೂ ಕೂಡ ಜೆಫ್ ನಿರ್ಧರಿಸಿದ್ದರು. 

ಸಾಮಾನ್ಯವಾಗಿ ಆರ್ಥಿಕ ಕಾರಣಗಳಿಗೆ ದಂಪತಿಗಳು ವಿಚ್ಛೇಧನದ ಮೊರೆ ಹೋಗುತ್ತಾರೆ ಎಂಬ ಮಾತಿದೆ. ಬಹುತೇಕ ಪ್ರಕರಣಗಳಲ್ಲಿ ಈ ಕಾರಣ ನಿಜವೇ ಆಗಿರುತ್ತದೆ. ಆದರೆ ಇಲ್ಲಿ ಜಗತ್ತಿನ ಅರ್ಧದಷ್ಟು ರಾಷ್ಟ್ರವನ್ನು ಖರೀದಿಸುವಷ್ಟು ಹಣ ಹೊಂದಿರುವ ಈ ದಂಪತಿಗಳೂ ಕೂಡ ಡಿವೋರ್ಸ್ ಮೊರೆ ಹೋಗಿರುವುದು  ಯಶಸ್ವಿ ದಾಂಪತ್ಯಕ್ಕೆ ಪ್ರೀತಿ ವಿಶ್ವಾಸ ಮಾತ್ರ ಬುನಾದಿಯಲ್ಲ ಎಂಬ ಅಂಶವನ್ನು ಸ್ಪಷ್ಟಪಡಿಸಿದೆ. ಅಲ್ಲದೆ ಈ ವಿಚ್ಛೆಧನ ಜಗತ್ತಿನಾದ್ಯಂತ ಚರ್ಚೆಗೆ ಗ್ರಾಸವಾಗಿದೆ. 


ಸಂಬಂಧಿತ ಟ್ಯಾಗ್ಗಳು

#Jeff Bezos #Divorce #MacKenzie Bezos #25 years of marriage


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ