ಕಿಂಗ್‍ಫಿಶರ್ ಕ್ಯಾಲೆಂಡರ್ ನಲ್ಲಿ ಕನ್ನಡತಿ

 Kannada Girl in the Kingfisher Calendar

10-01-2019

ಸ್ಯಾಂಡಲವುಡ್‍ನ ಸುಂದರಿಯರು ಬಾಲಿವುಡ್‍ಗೆ ಲಗ್ಗೆ ಇಡುತ್ತಿರುವ ಬೆನ್ನಲ್ಲೇ ಕನ್ನಡತಿಯೊಬ್ಬರು ಕಿಂಗ್‍ಫಿಶರ್ ಮಾಡೆಲ್ ಆಗಿದ್ದು ಹಾಟ್ ಹಾಟ್ ಪೋಟೋಗಳ ಮೂಲಕ ಎಲ್ಲರೂ ಹುಬ್ಬೆರಿಸುವಂತೆ ಮಾಡಿದ್ದಾರೆ. ಈ ಬೆಡಗಿ ಮತ್ಯಾರೂ ಅಲ್ಲ ಬೆಂಗಳೂರಿನ ಚೆಲುವೆ ಶುಭ್ರಾ ಅಯ್ಯಪ್ಪ. 

2014 ರಲ್ಲಿ ತೆಲುಗು ಚಿತ್ರ ಸುನೈನಾ ಚಿತ್ರದ ಮೂಲಕ ಸಿನಿ ಕೆರಿಯರ್ ಆರಂಭಿಸಿದ ಮಾಡೆಲ್ ಶುಭ್ರಾ ಅಯ್ಯಪ್ಪ, ತಮಿಳುಚಿತ್ರ ಹಾಗೂ  ಕನ್ನಡದ ವಜ್ರಕಾಯ ಚಿತ್ರದಲ್ಲೂ ಗೆಸ್ಟ್ ಅಫೀಯರೆನ್ಸ್ ನೀಡಿದ್ದಾರೆ. ಹಲವು ವರ್ಷಗಳಿಂದ ಮಾಡೆಲಿಂಗ್‍ನಲ್ಲಿ ತೊಡಗಿಕೊಂಡಿರುವ ಶುಭ್ರಾ ಈ ಬಾರಿ ಪ್ರತಿಷ್ಠಿತ ಕಿಂಗ್‍ಫಿಶರ್ ಕ್ಯಾಲೆಂಡರ್ ಗಾಗಿ ಪೋಸು ನೀಡಿದ್ದಾರೆ. 

 ಮೈ ಚಳಿ ಬಿಟ್ಟು ಸ್ವಿಮ್ಮಿಂಗ್ ಸೂಟ್ ಹಾಗೂ ವಿಭಿನ್ನ ವಿನ್ಯಾಸದ ಬಟ್ಟೆಗಳಲ್ಲಿ ಶುಭ್ರಾ ಅಯ್ಯಪ್ಪ ಕಾಣಿಸಿಕೊಂಡಿದ್ದು, ಪೋಟೋಶೂಟ್ ಸುಂದರವಾಗಿ ಮೂಡಿಬಂದಿದೆ. ಶುಭ್ರಾ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್‍ವೈರಲ್ ಆಗಿದ್ದು, ಜನರು ಬೆಂಗಳೂರು ಬೆಡಗಿಯ ಅಂದಕ್ಕೆ ಮಾರು ಹೋಗಿದ್ದಾರೆ. ಬಾಲಿವುಡ್, ಹಾಲಿವುಡ್ ಚೆಲುವಿಯರಿಗೆ ಒಲಿಯುವ ಈ ಕಿಂಗ್‍ಫಿಶರ್ ಕ್ಯಾಲೆಂಡರ್‍ನಲ್ಲಿ ಈ ಬಾರಿ ಕನ್ನಡತಿಯೊಬ್ಬರು ಕಾಣಿಸಿಕೊಂಡಿದ್ದು, ಅಂದದ ಪೋಟೋಗಳನ್ನು ನೋಡಿ ಪಡ್ಡೆಹೈಕಳು ಫುಲ್ ಖುಷಿಯಾಗಿದ್ದಾರೆ. 


ಸಂಬಂಧಿತ ಟ್ಯಾಗ್ಗಳು

# Kingfisher # Kannada Girl # Calendar # Shubra aiyappa


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ