ಪಾಕಿಸ್ತಾನ್‍ದಲ್ಲಿ ಭಾರತದ ಟಿವಿ ಶೋ, ಸಿನಿಮಾ ಬ್ಯಾನ್

 India TV Show, Cinema Ban in Pakistan

10-01-2019

ನೀವು ಪಾಕಿಸ್ತಾನ್‍ದಲ್ಲಿ ವಾಸವಾಗಿರುವ ಭಾರತೀಯರಾ? ಅಲ್ಲಿನ ಟಿವಿಗಳಲ್ಲಿ ಇಂಡಿಯಾದ ಟಿವಿ ಶೋ, ಸಿನಿಮಾ ನೋಡಿ ಎಂಜಾಯ್ ಮಾಡುವ ಕನಸಿನಲ್ಲಿದ್ದರೇ ಇನ್ನು ಅದನ್ನು ಮರೆತುಬಿಡಿ. ಹೌದು ಮತ್ತೊಮ್ಮೆ ಭಾರತದ ವಿರುದ್ಧ ತನ್ನ ದ್ವೇಷ ಮೆರೆದಿರುವ ಪಾಕಿಸ್ತಾನ್ ತಮ್ಮ ದೇಶದಲ್ಲಿ ಭಾರತೀಯ ಸಿನಿಮಾಗಳು ಹಾಗೂ ಟಿವಿಶೋಗಳನ್ನು ಪ್ರಸಾರ ಮಾಡುವುದನ್ನು ನಿಷೇಧಿಸಿದೆ. 

ಪಾಕಿಸ್ತಾನದ ಟಿವಿ ವಾಹಿನಿಗಳಲ್ಲಿ ಭಾರತೀಯ ಸಿನಿಮಾ ಹಾಗೂ ಟಿವಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲು ಅನುಮತಿ ನೀಡುವುದಿಲ್ಲ ಎಂದು  ಪಾಕಿಸ್ತಾನ ಸುಪ್ರೀಂಕೋರ್ಟ್‍ನ ಮುಖ್ಯನ್ಯಾಯಮೂರ್ತಿ ಸಾಕಿಬ್ ನಿಸಾರ್ ಹೇಳಿದ್ದಾರೆ. ಭಾರತೀಯ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವುದರಿಂದ  ಪಾಕಿಸ್ತಾನದ ಸಂಸ್ಕøತಿಗೆ ಧಕ್ಕೆಯಾಗುತ್ತದೆ ಎಂದು ಅವರು ಅಭಿಪ್ರಾಯಿಸಿದ್ದಾರೆ. 

 ಭಾರತೀಯ ಕಾರ್ಯಕ್ರಮಗಳ ಪ್ರಸಾರದ ಕುರಿತು ಹೈಕೋರ್ಟ್ ನೀಡಿದ್ದ ಆದೇಶದ ಪ್ರಶ್ನಿಸಿ ಪಿಇಎಂಆರ್‍ಎ ಮೇಲ್ಮನವಿ ಸಲ್ಲಿಸಿತ್ತು. ಈ ಹಿನ್ನೆಲೆಯಲ್ಲಿ ಪ್ರಕರಣದ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ನೀಡಿರುವ ಆದೇಶ ಅಚ್ಚರಿ ತಂದಿದ್ದು, ಆದರೆ ಯಾವ ಕಾರಣಗಳಿಂದ ಭಾರತೀಯ ಸಿನಿಮಾಗಳನ್ನು ಪ್ರಸಾರ ಮಾಡಲು ಅನುಮತಿ ನೀಡುತ್ತಿಲ್ಲ ಎಂಬ ಅಂಶಗಳನ್ನು ನ್ಯಾಯಾಲಯ ಸ್ಪಷ್ಟಪಡಿಸಿಲ್ಲ. 

ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ತೀರ್ಪನ್ನು ಕೇಳಿದ ಜನರು ಅಚ್ಚರಿಗೊಂಡಿದ್ದಾರೆ. ಎಲ್ಲ ರೀತಿಯಲ್ಲೂ ಭಾರತೀಯ ಸಂಸ್ಕøತಿ, ಚಿತ್ರಗಳು, ರಿಯಾಲಿಟಿ ಶೋಗಳು ಎಲ್ಲವೂ ಪಾಕಿಸ್ತಾನದ ಕಾರ್ಯಕ್ರಮಕ್ಕಿಂತ  ಉತ್ತಮವಾಗಿದೆ. ಭಾರತ-ಪಾಕ್ ಸಂಬಂಧಗಳ ಬಗ್ಗೆಯೂ ಸಕಾರಾತ್ಮಕವಾದ ಅಂಶಗಳನ್ನೆ ಪ್ರದರ್ಶಿಸಲಾಗುತ್ತಿದೆ. ಹೀಗಿದ್ದಾಗಲೂ ಹೇರಲಾಗಿರುವ ನಿಷೇಧ ಹಲವು ಪ್ರಶ್ನೆ ಮೂಡಿಸಿದೆ. ಭಾರತೀಯ ಕಾರ್ಯಕ್ರಮಗಳಿಂದ ಯಾವ ರೀತಿ ಪಾಕಿಸ್ತಾನದ ಸಂಸ್ಕøತಿಗೆ ಧಕ್ಕೆಯಾಗಬಹುದು ಎಂಬುದನ್ನ ನ್ಯಾಯಾಲಯವೇ ಹೇಳಬೇಕಿದೆ. ಬಹುಷಃ ಭಾರತದ ಸಿನಿಮಾಗಳು ಹಾಗೂ ಟಿವಿಶೋಗಳ ಉತ್ಕøಷ್ಟತೆ ಪಾಕಿಸ್ತಾನದ ಸಿನಿಉದ್ಯಮದ ಮೇಲೆ ಹೊಡೆತ ತರುವ ಸಾಧ್ಯತೆ ಇರೋದರಿಂದ ಇಂತಹ ಆದೇಶ ನೀಡಿರಬಹುದೆಂದು ಅಂದಾಜಿಸಲಾಗುತ್ತಿದೆ. ಒಟ್ಟಿನಲ್ಲಿ ಪಾಕಿಸ್ತಾನ ಸುಪ್ರೀಂ ಕೋರ್ಟ್ ಆದೇಶ ವಿಚಿತ್ರವಾಗಿರೋದಂತು ನಿಜ. 


ಸಂಬಂಧಿತ ಟ್ಯಾಗ್ಗಳು

# Tv show # Ban In Pakistan # Indian Cinema #Supreem Court


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ