ಸುಳ್ಳು ಹೇಳಿ ಸಿಕ್ಕಿಬಿದ್ರಾ ನಟಿ ರಮ್ಯ?

Where Are You Actress Ramya ?

10-01-2019

ತಮ್ಮ ಅನುಕೂಲಸಿಂಧು ರಾಜಕಾರಣದಿಂದಲೇ ಪ್ರಸಿದ್ಧಿ ಪಡೆದುಕೊಂಡ ನಟಿ ರಮ್ಯ, ರಾಜಕಾರಣಕ್ಕಿಂತ ತಮ್ಮ ಎಡವಟ್ಟುಗಳಿಂದ ಸುದ್ದಿಯಾಗಿದ್ದೆ ಜಾಸ್ತಿ. ಇದೀಗ ಮತ್ತೊಮ್ಮೆ ರಮ್ಯ ಗೋಸುಂಬೆತನಕ್ಕೆ  ಸಾಮಾಜಿಕ ಜಾಲತಾಣದಲ್ಲಿ ಟೀಕೆ ವ್ಯಕ್ತವಾಗುತ್ತಿದ್ದು, ಅಂಬಿ ಅಂತ್ಯಸಂಸ್ಕಾರಕ್ಕೂ ಬಾರದೆ ಅನಾರೋಗ್ಯದ ನೆಪ ಹೇಳಿದ್ದ ರಮ್ಯ ದುಬೈ ಈಗ ಟ್ರಿಪ್‍ನಲ್ಲಿದ್ದು, ಆಕೆಯ ಟ್ರಿಪ್ ಪೋಟೋ ನೋಡಿದ ಜನರು ಇನ್ನೆಷ್ಟಮ್ಮ ನಾಟಕ ನಿಂದು ಅಂತ ಪ್ರಶ್ನಿಸುತ್ತಿದ್ದಾರೆ. 

ರಮ್ಯ ಅಲಿಯಾಸ್ ದಿವ್ಯಸ್ಪಂದನ್, ಕಾಂಗ್ರೆಸ್‍ನಲ್ಲಿ ದೀಢೀರ ಎಂದು ಉದ್ಭವಿಸಿದ ಸ್ಟಾರ್ ರಾಜಕಾರಣಿ. ಇದ್ದಕ್ಕಿದ್ದಂತೆ ಕಾಂಗ್ರೆಸ್ ಸೇರ್ಪಡೆಗೊಂಡ ರಮ್ಯ, ಕಾಂಗ್ರೆಸ್ಸಿನ ಸಾವಿರಾರು ಹಿರಿಯ ನಾಯಕರು ನೋಡ ನೋಡುತ್ತಿದ್ದಂತೆ ಸಂಸದೆಯಾಗಿ ಲೋಕಸಭೆ ಪ್ರವೇಶಿಸಿದರು. ಮಂಡ್ಯದಲ್ಲಿ ಮನೆ ಮಾಡಿ ಪಕ್ಷದ ಚಟುವಟಿಕೆಗಳನ್ನು ಮುಂದುವರೆಸುವುದಾಗಿ ಕತೆಕಟ್ಟಿದ ರಮ್ಯ, ರಾತ್ರೋರಾತ್ರಿ ಮಂಡ್ಯದಿಂದ ಮರೆಯಾಗಿ ದೆಹಲಿ ಸೇರಿ, ಕಾಂಗ್ರೆಸ್‍ನ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆಯಾದರು. ಅಷ್ಟೇ ಬೇಗ ರಾಜ್ಯ ರಾಜಕಾರಣವನ್ನೇ ಮರೆತುಬಿಟ್ಟರು. 

ಕೇವಲ ರಾಜ್ಯವನ್ನು ಮರೆತಿದ್ದು, ಮಾತ್ರವಲ್ಲ ಚುನಾವಣೆಗೆ ಮತಚಲಾಯಿಸಲು ರಮ್ಯ ಮಂಡ್ಯಕ್ಕಾಗಲಿ, ನಗರಕ್ಕಾಗಲಿ ಹಿಂತಿರುಗಲೇ ಇಲ್ಲ. ಸಾಮಾಜಿಕ ಜಾಲತಾಣದಲ್ಲಿ ಮೋದಿಯಿಂದ ಆರಂಭಿಸಿ ಎಲ್ಲರನ್ನು ಹೀನಾಯವಾಗಿ ಟೀಕಿಸುವ ರಮ್ಯ, ಸಂಸದೆಯಾಗಿ ಮಂಡ್ಯದ ಜನತೆಗೆ ಚಿಕ್ಕಸಹಾಯವನ್ನು ಮಾಡಿಲ್ಲ. ಕನಿಷ್ಟ ಭಾರತದ ನಾಗರೀಕರ  ಜವಾಬ್ದಾರಿಯಾಗಿರುವ ಮತದಾನ ಮಾಡಲು ಕೂಡ ರಮ್ಯ ಬರಲಿಲ್ಲ. ಇದೇ ಕಾರಣಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ರಮ್ಯ ತೀವ್ರ ಟೀಕೆಗೂ ಗುರಿಯಾದರು. 

ನೋಡ ನೋಡುತ್ತಿದ್ದಂತೆ ರಮ್ಯ, ಬಹುತೇಕ ರಾಜ್ಯ ರಾಜಕಾರಣದಿಂದ ನಾಪತ್ತೆಯಾದರು. ಉಪಚುನಾವಣೆಗೆಗಾಗಲಿ, ವಿಧಾನಸಭೆ ಚುನಾವಣೆ ಪ್ರಚಾರಕ್ಕಾಗಲಿ ಅವರು ರಾಜ್ಯದತ್ತ ಮುಖಮಾಡಲಿಲ್ಲ.  ಜನರು ಅವರನ್ನ ಬಹುತೇಕ ಮರೆತೇ ಬಿಟ್ಟಿದ್ದರು. ಆದರೆ  5-6 ವರ್ಷದ ಹಿಂದೆ ರಮ್ಯ ದೀಢೀರ ರಾಜಕಾರಣಕ್ಕೆ ಬಂದಾಗ ಅವರನ್ನು 
ಕೈ ಹಿಡಿದು ನಡೆಸಿದ್ದು, ಮಂಡ್ಯದ ಗಂಡು ಅಂಬರೀಶ್. ರಮ್ಯ ಹುಟ್ಟಿನ ಬಗ್ಗೆ ಚರ್ಚೆಯಾದಾಗಲೂ ಅಂಬರೀಶ್ ಆಕೆಯ ಬೆಂಬಲಕ್ಕೆ ನಿಂತಿದ್ದರು. 
ಆದರೆ ಅಂಬರೀಶ್ ನಿಧನದ ಬಳಿಕ ಅವರ ಅಂತಿಮದರ್ಶನಕ್ಕಾಗಲಿ, ಅವರ ಕುಟುಂಬಕ್ಕೆ ಸಾಂತ್ವನ ಹೇಳುವುದಕ್ಕಾಗಲಿ ರಮ್ಯ ಬರಲೇ ಇಲ್ಲ. ಇದು ಅಂಬರೀಶ್ ಅಭಿಮಾನಿಗಳ ತೀವ್ರ ಆಕ್ರೋಶಕ್ಕೆ ಕಾರಣವಾಯಿತು. ಇದನ್ನು ಸರಿತೂಗಿಸಲು ತಮ್ಮ ಎಂದಿನ ನಾಟಕವಾಡಿದ ರಮ್ಯ, ಕಾಲಿಗೊಂದು ಬ್ಯಾಂಡೇಜ್ ಕಟ್ಟಿಕೊಂಡು ತಾವು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ವೈದ್ಯರು ವಿಶ್ರಾಂತಿ ತೆಗೆದುಕೊಳ್ಳಲು ಸೂಚಿಸಿದ್ದನ್ನು ಪೋಸ್ಟ್ ಮಾಡಿ ಜನರನ್ನು ಸಮಾಧಾನಿಸುವ ಪ್ರಯತ್ನ ಮಾಡಿದರು. 

ಆದರೆ ಅಂಬರೀಶ್ ನಿಧನದ ಒಂದು ತಿಂಗಳಿನಲ್ಲೇ ರಮ್ಯ ಸುಳ್ಳು ಬಯಲಾಗಿದೆ. ರಮ್ಯ ದುಬೈ ಪ್ರವಾಸದಲ್ಲಿರುವ ಪೋಟೋವೊಂದು ಲೀಕ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಿದೆ.  ಆ ಪೋಟೋದಲ್ಲಿ ರಮ್ಯ, ದುಬೈನಲ್ಲಿದ್ದು, ಸಚಿವ ಯು.ಟಿ.ಖಾದರ್ ಅವರ ಸಹೋದರನ ಜೊತೆ ನಿಂತು ಪೋಟೋ ತೆಗೆಸಿಕೊಂಡಿದ್ದಾರೆ. ಹೀಗಾಗಿ ರಮ್ಯ ಅನಾರೋಗ್ಯದ ನಾಟಕವಾಡಿ ಜನರನ್ನು ಮರಳು ಮಾಡಿದರೇ? ನಿಜಕ್ಕೂ ಅನಾರೋಗ್ಯವಾಗಿದ್ದರೇ, ಒಂದೇ ತಿಂಗಳಲ್ಲಿ ಅವರು ಚೇತರಿಸಿಕೊಂಡು ವಿದೇಶ ಪ್ರವಾಸಕೈಗೊಳ್ಳುವುದು ಸಾಧ್ಯವೇ ಎಂದು  ಜನರು ಪ್ರಶ್ನಿಸುತ್ತಿದ್ದಾರೆ. 

ಒಟ್ಟಿನಲ್ಲಿ ತಮ್ಮ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸುವ ಶಕ್ತಿ ಇಲ್ಲದೇ ಇದ್ದರೂ ಎಲ್ಲರನ್ನು ಮುಕ್ತವಾಗಿ ಟೀಕಿಸವ ದಾಷ್ಟ್ರ್ಯ ತೋರುವ ಮೇಡಂ ರಮ್ಯ, ರಾಜ್ಯವನ್ನು ಹಾಗೂ ಆಕೆ ಸಂಕಷ್ಟದಲ್ಲಿದ್ದಾಗ ಜೊತೆ ನಿಂತಿದ್ದ ನಟ ಅಂಬರೀಶ್ ರನ್ನು ಹಾಗೂ ಚಿತ್ರರಂಗವನ್ನು ಮರೆತಿದ್ದು ಸರಿಯೇ? ಆಕೆಗೆ ಗೌರವ, ಸ್ಥಾನಮಾನ ರಾಜಕೀಯ ಭವಿಷ್ಯ ಎಲ್ಲವನ್ನೂ ನೀಡಿದ ಕರ್ನಾಟಕವನ್ನು ಕಾಲುಕಸದಂತೆ ಎಸೆದು ಹೋಗಿದ್ದ್ಯಾಕೆ? ಎಂಬ ಪ್ರಶ್ನೆ ರಾಜ್ಯದ ಜನರದ್ದು. ಇದಕ್ಕೆ ಮಾಜಿ ಸಂಸದೆ ರಮ್ಯ ಇನ್ಯಾವ ಕತೆ ಕಟ್ಟುತ್ತಾರೆ ಅನ್ನೋದನ್ನು ಕಾದುನೋಡಬೇಕಿದೆ.


ಸಂಬಂಧಿತ ಟ್ಯಾಗ್ಗಳು

#Actress Ramya #Congress #Karnataka #Photo


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ