ಸಧ್ಯದಲ್ಲೇ ಮುಗಿಯುತ್ತಾ ದೋಸ್ತಿ ಕತೆ?

 What is the future of the Dosti Govrnment?

09-01-2019

ಕರ್ನಾಟಕದಲ್ಲಿ ಆಡಳಿತದಲ್ಲಿರುವ ದೋಸ್ತಿ ಸರ್ಕಾರದ ಆಯುಷ್ಯ ಪ್ರತಿನಿತ್ಯವೂ ಕ್ಷೀಣಿಸುತ್ತಿರುವಂತಿದೆ. ಇದಕ್ಕೆ ಸಿಎಂ ಕುಮಾರಸ್ವಾಮಿ ಮಾತುಗಳೇ ಸಾಕ್ಷಿ ಒದಗಿಸುತ್ತಿದೆ. ನಾನು ಕಾಂಗ್ರೆಸ್ ಗುಮಾಸ್ತನಂತೆ ಕೆಲಸ ಮಾಡುತ್ತಿದ್ದೇನೆ. ಆಡಳಿತ ನನ್ನ ಕೈಯಲ್ಲಿಲ್ಲ. ಅವರು ಹೇಳಿದಂತೆ ನಾನು ಆಡಳಿತ ನಡೆಸುತ್ತಿದ್ದೇನೆ ಎಂದು ಬಹಿರಂಗವಾಗಿ ಹೇಳಿಕೊಳ್ಳುವ ಮೂಲಕ ಸಿಎಂ ಕುಮಾರಸ್ವಾಮಿ ಸರ್ಕಾರದಲ್ಲಿ ಎಲ್ಲವೂ ಸರಿ ಇಲ್ಲ ಎಂಬ ಹೇಳಿಕೆಗೆ ಪುಷ್ಠಿ ನೀಡಿದ್ದಾರೆ. 

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನಿನ್ನೆ ನಡೆಸಿದ್ದ ಜೆಡಿಎಸ್ ಶಾಸಕರ ಸಭೆಯಲ್ಲಿ ತಮ್ಮ ದುಃಖ ತೋಡಿಕೊಂಡಿರುವ ಕುಮಾರಸ್ವಾಮಿ ಕಾಂಗ್ರೆಸ್ ತಮ್ಮ ಪಾಲಿಗೆ  ಬಿಸಿತುಪ್ಪವಾಗಿದೆ. ಲೋಕಸಭೆ ಚುನಾವಣೆವರೆಗೂ ನಾನು ತುಟಿಕಚ್ಚಿಕೊಂಡು ಅಧಿಕಾರ ನಡೆಸುತ್ತೇನೆ. ಆಮೇಲೆ ಏನಾಗುತ್ತೋ ಗೊತ್ತಿಲ್ಲ.  ದೇವೆಗೌಡರ ಮಾತಿನಂತೆ ನಾನು ಯಾರಿಗೂ ಏನು ಹೇಳುತ್ತಿಲ್ಲ. ಡಿಸಿಪಿಯಿಂದ ಪಿಡಿಓವರೆಗಿನ ವರ್ಗಾವಣೆಯನ್ನು ಕೈಪಾಳಯವೇ ನಿರ್ವಹಿಸುತ್ತಿದೆ ಎನ್ನುವ ಮೂಲಕ ಮತ್ತೊಮ್ಮೆ ತಮ್ಮ ಅಸಮಧಾನವನ್ನು ಬಹಿರಂಗವಾಗಿ ತೋಡಿಕೊಂಡಿದ್ದಾರೆ. 

ಅತ್ತ ಮಾಜಿ ಪ್ರಧಾನಿ ದೇವೆಗೌಡರು, ಮೋದಿ ಪರ ಬ್ಯಾಟಿಂಗ್ ಮಾಡುತ್ತಿದ್ದರೇ, ಇತ್ತ ಪುತ್ರ ಕುಮಾರಸ್ವಾಮಿ ಮೈತ್ರಿ ಸರ್ಕಾರಕ್ಕೆ ಕಾರಣವಾದ ಕಾಂಗ್ರೆಸ್‍ನ್ನೆ ಟೀಕಿಸುತ್ತಿರುವುದು ಎಲ್ಲೋ ಒಂದು ಕಡೆ ಈ ಮೈತ್ರಿ ಸರ್ಕಾರ ಇನ್ನಷ್ಟು ಕಾಲ ಉಳಿಯೋದಿಲ್ಲ ಎಂಬ ಸೂಚನೆ ನೀಡುವಂತಿದೆ. ಅಧಿಕಾರಕ್ಕೆ ಬಂದಾಗಿನಿಂದಲೂ ಜನರ 
ಸಿಂಪತಿ ಗಳಿಸಿಕೊಳ್ಳಲು ಆಗಾಗ ಕಣ್ಣಿರು ಹಾಕುತ್ತಲೇ ತನ್ನನ್ನು ತಾವು ಸಮರ್ಥಿಸಿಕೊಳ್ಳುತ್ತ ಬಂದಿರುವ ಕುಮಾರಸ್ವಾಮಿ  ಮತ್ತೊಮ್ಮೆ  ಈ ರೀತಿಯ ಹೇಳಿಕೆ ನೀಡಿರುವುದು ರಾಜಕೀಯ ಪ್ರಬುದ್ಧತೆಯ ಕೊರತೆಯನ್ನು ಎತ್ತಿಹಿಡಿಯುತ್ತಿದೆ. ಕೇವಲ ಅಧಿಕಾರಕ್ಕಾಗಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡ ಕಾಂಗ್ರೆಸ್‍ನ್ನು ಜನರ ಎದುರು ವಿಲನ್ ಮಾಡುವ ಪ್ರಯತ್ನದಲ್ಲಿ ಜೆಡಿಎಸ್ ನಿರತವಾದಂತಿದೆ. 
ಕಾಂಗ್ರೆಸ್ ಜೊತೆಗೂ ಚೆನ್ನಾಗಿದ್ದಂತೆ ತೋರಿಸಿಕೊಂಡು ಇತ್ತ, ಜೆಡಿಎಸ್ ಎದುರು ಕಾಂಗ್ರೆಸ್‍ನ್ನು ಟೀಕಿಸುವ ಕುಮಾರಸ್ವಾಮಿಯವರ ಈ ಸೋಗಲಾಡಿತನದಿಂದ ಜನರು ಬೇಸತ್ತು ಹೋಗಿದ್ದಾರೆ ಎಂದರೆ ತಪ್ಪಿಲ್ಲ. ಲೋಕಸಭೆ ಚುನಾವಣೆಯ ಎದುರಿನಲ್ಲಿ ಹೀಗೆ ಕುಮಾರಸ್ವಾಮಿಯವರು ಸರ್ಕಾರದ ಭಾಗವಾಗಿರುವ ಕಾಂಗ್ರೆಸ್‍ನ್ನು ಟೀಕಿಸುತ್ತ ಬಂದಿರೋದು ಎಲ್ಲೂ ಒಂದು ಲೋಕಸಭೆ ಚುನಾವಣೆಯ ಬಳಿಕ ರಾಜಕೀಯದ ದಿಕ್ಕು ಬದಲಾಗಲಿದೆ ಅನ್ನೋದರ  ಮುನ್ಸೂಚನೆ ಒದಗಿಸುತ್ತಿದೆ. ಯಾವುದೆ ಪಕ್ಷದೊಂದಿಗೆ ಮೈತ್ರಿಮಾಡಿಕೊಂಡರೂ ಬಳಿಕ ಆಪಕ್ಷವನ್ನು ಅತ್ಯಂತ ಕೆಳಮಟ್ಟದಲ್ಲಿ ಟೀಕಿಸುವುದು ಜೆಡಿಎಸ್‍ನ ಹಳೆ ಚಾಳಿ ಇಲ್ಲೂ ಅದೇ ಮುಂದುವರಿಸಿದ್ದು  ಒಟ್ಟಿನಲ್ಲಿ ಸಮ್ಮಿಶ್ರ ಸರ್ಕಾರಕ್ಕೆ ಇನ್ನೆರಡೇ ತಿಂಗಳು ಆಯುಷ್ಯ ಎಂಬ ಮಾತು ವಿಧಾನಸೌಧದ ಮೊಗಸಾಲೆಯಲ್ಲಿ ಕೇಳಿಬರ್ತಿರೋದಂತು ಸತ್ಯ. 


ಸಂಬಂಧಿತ ಟ್ಯಾಗ್ಗಳು

#Karnataka #Congress #Dosthi Govrnment #Jds


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


Dosti iruvaga gali bandru enu madakkagalla kastadalli dostine prana rakshakanagi kayuttane sankranti ge kranti mugitu innenidru lokasamar jangi kustiyalli geluve namma mantra
  • ninganna