ಸರಗಳ್ಳನಿಗೆ  ಸಾರ್ವಜನಿಕರಿಂದ ಹಿಗ್ಗಾಮುಗ್ಗಾ ಗೂಸ !

Kannada News

05-06-2017

ಬೆಂಗಳೂರು:- ಸರಗಳ್ಳನಿಗೆ ಸಾರ್ವಜನಿಕರು ಕಂಬಕ್ಕೆ ಕಟ್ಟಿಹಾಕಿ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ಬಳಿ ನಡೆದಿದೆ. ನಗರದ ವೀರಬಧ್ರ ಪೇಟೆಯಲ್ಲಿ ಭಾರತಿ ಎಂಬ ಮಹಿಳೆ ನಡೆದುಕೊಂಡು ಹೋಗುವಾಗ ಕುತ್ತಿಗೆಯಲ್ಲಿದ್ದ ಸರ ಕಿತ್ತು ಪರಾರಿಯಾಗುತ್ತಿದ್ದ, ಈ ಸಂದರ್ಭದಲ್ಲಿ ಮಹಿಳೆ ಚೀರಾಟ ಕೇಳಿ ಅಟ್ಟಿಸಿಕೊಂಡು ಹೋಗಿ ಕಳ್ಳನನ್ನು ಸ್ಥಳೀಯರು ಹಿಡಿದುಕೊಂಡಿದ್ದಾರೆ. ನಂತರ ಕಂಬಕ್ಕೆಕಟ್ಟಿಹಾಕಿ ಬಟ್ಟೆ ಬಿಚ್ಚಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ ಸಾರ್ವಜನಿಕರು. ನಂತರ ಪೊಲೀಸರಿಗೆ ಒಪ್ಪಸಿದರು. ಸರಗಳ್ಳನು ತಾಲ್ಲೂಕಿನ ಆರೂಢಿ ಗ್ರಾಮಸ್ಥನೆಂದು ತಿಳಿದುಬಂದಿದೆ. ಸರಗಳ್ಳನನ್ನು ಹಿಡಿಯಲು ಹೋದಾಗ ಸಾರ್ವಜನಿಕರನ್ನು ಚಾಕುವಿನಿಂದ ಹಲ್ಲೆ ಮಾಡಲು ಯತ್ನಿಸಿರುವುದಾಗಿಯೂ ತಿಳಿದು ಬಂದಿದೆ. ಸದ್ಯ ಪೊಲೀಸರ ವಶದಲ್ಲಿರುವ ಸರಗಳ್ಳನನ್ನು ವಿಚಾರಣೆಗೆ ಒಳಪಡಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ