ಹಾದಿ ಬಿಟ್ಟ ಹಾರ್ದಿಕ್

 Hardik Left the Road

09-01-2019

ಭಾರತ ಕ್ರಿಕೆಟ್ ತಂಡದ ಆಲ್‍ರೌಂಡ್ ಆಟಗಾರ ಹಾರ್ದಿಕ್  ಅದ್ಯಾಕೋ ಔಟ್ ಆಫ್ ದಿ ಬಾಕ್ಸ್ ಮಾತುಗಳನ್ನಾಡಿ ಸಮಸ್ಯೆಗೀಡಾಗಿದ್ದಾರೆ. ಬಾಲಿವುಡ್‍ನ ಶೋ ಕಾಫಿ ವಿತ್ ಕರಣ್‍ನಲ್ಲಿ ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಬಗ್ಗೆ ಅವರು ನೀಡಿರುವ ಹೇಳಿಕೆ ಇದೀಗ ವಿವಾದ ಸೃಷ್ಟಿಸಿದ್ದು,  ಬಿಸಿಸಿಐ ಕೂಡ ಕೆಂಗಣ್ಣು ಬೀರಿದೆ. ಇನ್ನು ಅವರ ವೈಯಕ್ತಿಕ ಜೀವನಶೈಲಿ ಹಾಗೂ ಪೋಟೋಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ಅವರು ಬ್ಲಾಕ್ ಕಲ್ಟರ್ ವ್ಯಕ್ತಿಎಂಬುದನ್ನು ಬಿಂಬಿಸುವಂತಿದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.  

ಹಾರ್ದಿಕ್ ಪಾಂಡ್ಯ ಭಾರತದ ಉದಯೋನ್ಮುಕ ಕ್ರಿಕೆಟ್ ಆಟಗಾರರಾಗಿ ಆಲ್‍ರೌಂಡ್ ಆಟಗಳನ್ನು ಪ್ರದರ್ಶಿಸಿ  ಮನಗೆಲ್ಲುತ್ತಿರುವ  ವೇಳೆಯಲ್ಲೇ ಎಡವಟ್ಟು ಮಾಡಿಕೊಂಡಿದ್ದಾರೆ.  ಟಿವಿ ಶೋವೊಂದರಲ್ಲಿ ಮಾತನಾಡುತ್ತಿದ್ದ ಹಾರ್ದಿಕ್ ಪಾಂಡ್ಯ, ಹೆಣ್ಣುಮಕ್ಕಳ ಬಗ್ಗೆ ಕೀಳುಅಭಿರುಚಿಯ ಮಾತನಾಡಿದ್ದು, ಸೆಕ್ಸ್ ಬಗ್ಗೆ  ಕೇಳಲಾದ ಪ್ರಶ್ನೆಗೆ ಅಸಭ್ಯವಾಗಿ ಹಾಗೂ ಮಹಿಳೆಯರ ಬಗ್ಗೆ ಅಗೌರವವಾಗಿ ಮಾತನಾಡಿದ್ದಾರೆ.  

ಜೊತೆಗೆ ಸಚಿನ್ ಮತ್ತು ವಿರಾಟ್ ಕೊಹ್ಲಿಯಲ್ಲಿ ಯಾರು ಉತ್ತಮ ಬ್ಯಾಟ್ಸಮನ್ ಎಂಬ ಪ್ರಶ್ನೆಗೆ ಹಾರ್ದಿಕ್, ಕೊಹ್ಲಿ ಎಂದು ಉತ್ತರಿಸಿದ್ದು,ಸಾಮಾಜಿಕ ಜಾಲತಾಣದಲ್ಲಿ ತೀವ್ರ ಟೀಕೆಗೆ ಗುರಿಯಾಗಿದೆ. ಟಿವಿಶೋ ಕೋಟ್ಯಾಂತರ ಮನೆಗಳನ್ನು ತಲುಪುತ್ತದೆ ಎಂಬ ಕನಿಷ್ಠ  ತಿಳುವಳಿಕೆಯೂ ಇಲ್ಲದಂತೆ ಹಾರ್ದಿಕ್ ಮಾತನಾಡಿರುವುದು ಈಗ ವಿವಾದಕ್ಕಿಡಾಗಿದೆ. 

ಇದು ಆರಂಭದಿಂದಲೂ ಹಾರ್ದಿಕ್ ಪಾಂಡ್ಯ ತಮ್ಮ ಅತಿಯಾದ ಬ್ಲಾಕ್ ಕಲ್ಚರ್‍ನಿಂದಲೆ ಸುದ್ದಿಯಾಗುತ್ತಿದ್ದರು. ಅವರ ಇನ್‍ಸ್ಟಾಗ್ರಾಂ ತುಂಬೆಲ್ಲ ಅವರ ಕಪ್ಪು ಸಂಸ್ಕøತಿಗೆ ಆಕರ್ಷಿತವಾದಂತಹ ರೀತಿಯ ಪೋಟೋಗಳೆ ನಿಮಗೆ ಕಾಣಸಿಗುತ್ತವೆ. ದುಬಾರಿ ವಸ್ತುಗಳನ್ನು ಧರಿಸುವ ಖಯಾಲಿ ಹೊಂದಿರುವ ಹಾರ್ದಿಕ್ ತಾವು ಧರಿಸಿದ ವಸ್ತುಗಳ ಪ್ರದರ್ಶನಕ್ಕೆ ಯತ್ನಿಸುತ್ತಿರುವುದು ಈ ಪೋಟೋಗಳಲ್ಲೇ ಸಾಬೀತಾಗುತ್ತಿತ್ತು. ಇದೀಗ ತಮ್ಮ ಹೇಳಿಕೆಯ ಮೂಲಕ ಬಿಸಿಸಿಐ ಕೆಂಗಣ್ಣಿಗೆ ಹಾರ್ದಿಕ್ ಪಾಂಡ್ಯ ತುತ್ತಾಗಿದ್ದು, ಸಧ್ಯದಲ್ಲೆ ಹಾರ್ದಿಕ್‍ಗೆ  ಬಿಸಿಸಿಐ ಬಿಸಿ ಮುಟ್ಟಿಸುವ ಎಲ್ಲ ಸಾಧ್ಯತೆ ಇದೆ. 


ಸಂಬಂಧಿತ ಟ್ಯಾಗ್ಗಳು

#India # Hardhik Pandya #Coffe With Karan #Controversy


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ