ಜನಪ್ರಿಯತೆಯಲ್ಲಿ ಮೋದಿ ಮೀರಿಸಿದ ರಾಹುಲ್ ಗಾಂಧಿ!

Rahul Gandhi Over Modi

09-01-2019

ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯತೆ ಕಡಿಮೆ ಆಗಿದ್ಯಾ? ಹೌದು ಅಂತಿದೆ ಸಮೀಕ್ಷೆಗಳು. ನರೇಂದ್ರ ಮೋದಿಯವರ ಜನಪ್ರಿಯತೆ ಕುಗ್ಗಿರೋದಕ್ಕಿಂತ ಶಾಕಿಂಗ್ ಸುದ್ದಿ ಏನು ಗೊತ್ತಾ? ಕಾಂಗ್ರೆಸ್‍ನ ಯುವರಾಜ ಎಂಬ ಖ್ಯಾತಿ ಗಳಿಸಿಕೊಂಡಿರುವ ರಾಹುಲ್ ಗಾಂಧಿ ಜನಪ್ರಿಯತೆಯಲ್ಲಿ ಮೋದಿಯನ್ನು ಮೀರಿಸಿದ್ದಾರೆ. ಅಚ್ಚರಿಯಾದ್ರೂ ಇದು ಸತ್ಯ.

ಇಂತಹದೊಂದು ಶಾಕಿಂಗ್ ಸುದ್ದಿಯನ್ನು ಗೂಗಲ್ ನ್ಯೂಸ್ ಹೊರಹಾಕಿದ್ದು, ಸಾಮಾಜಿಕ ಜಾಲತಾಣಗಳ ಸರ್ಚ್ ಇಂಜಿನ್‍ಗಳಲ್ಲಿ ಸದಾ ಮುಂದಿರುತ್ತಿದ್ದ ನರೇಂದ್ರ ಮೋದಿ ಸ್ಥಾನವನ್ನು ಈ ಬಾರಿ ರಾಹುಲ್ ಗಾಂಧಿ ಪಡೆದುಕೊಂಡಿದ್ದಾರಂತೆ. ಇದರ ಫಲವಾಗಿಯೇ, ಗೂಗಲ್ ಸರ್ಚ್‍ನಲ್ಲಿ ರಾಹುಲ್ ಗಾಂಧಿ ಮೋದಿಯವರನ್ನು ಹಿಂದಿಕ್ಕಿ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ.  ಜನವರಿ 1 2018 ರಿಂದ ಆರಂಭವಾಗಿ ಜನವರಿ 6 2019 ರವರೆಗಿನ ಸರ್ಚ್ ಇಂಜಿನ್ ದಾಖಲೆ ಆಧರಿಸಿ  ನೀಡಲಾದ ಮತಗಳಲ್ಲಿ ಮೋದಿ 34 ಅಂಕಗಳೊಂದಿಗೆ ಹಿಂದೆ ಉಳಿದಿದ್ದರೇ ರಾಹುಲ್ ಗಾಂಧಿ 45 ಅಂಕಗಳ ಜೊತೆ  ಮೊದಲ ಸ್ಥಾನ ಗಳಿಸಿಕೊಂಡಿದ್ದಾರೆ. 

ಸರ್ಚ್ ಇಂಜಿನ್ ದಾಖಲೆಗಳ ಪ್ರಕಾರ  ವಿಶ್ವದ 100 ಇಂಟರ್ ನೆಟ್  ಬಳಕೆದಾರರಲ್ಲಿ 45 ಜನ ರಾಹುಲ್ ಗಾಂಧಿಯನ್ನು ಹುಡುಕಿದರೇ, ಕೇವಲ ಜನರಲ್ಲಿ 34 ಜನರು ಮೋದಿಯವರನ್ನು ಹುಡುಕಿದ್ದಾರಂತೆ. ಆದರೆ 2014 ರಲ್ಲಿ ಈ ಪರಿಸ್ಥಿತಿ ಇರಲಿಲ್ಲ. ಆಗ ಜನಪ್ರಿಯತೆಯ ಮುಂಚೂಣಿಯಲ್ಲಿ ನರೇಂದ್ರ ಮೋದಿಯಿದ್ದರು. ಆದ 100 ಸರ್ಚ್ ಇಂಜಿನ್  ಫಲಿತಾಂಷ್‍ದಲ್ಲಿ ಮೋದಿ 37 ಜನರ ಹುಡುಕಾಟವಾಗಿದ್ದರೇ, ರಾಹುಲ್ ಕೇವಲ 4 ಜನರ ಹುಡುಕಾಟವಾಗಿದ್ದರು. 

ಹೀಗೆ ಮೋದಿ ಜನಪ್ರಿಯತೆಯ ಜಾಗವನ್ನು ರಾಹುಲ್ ಗಾಂಧಿ ಆಕ್ರಮಿಸಿಕೊಳ್ಳುವುದಕ್ಕೆ ಕಾರಣವಾಗಿದ್ದು ಅವರ ಮೇಲಿನ ಟೀಕೆಗಳು. ಹೌದು ಇತ್ತೀಚಿನ ಕೆಲ ವರ್ಷಗಳಲ್ಲಿ ರಾಹುಲ್ ಗಾಂಧಿಯನ್ನು ಪಪ್ಪು ಎಂದು ಕರೆಯಲಾಯಿತು. ಅಷ್ಟೇ ಅಲ್ಲ 2018 ರ ಕರ್ನಾಟಕ ವಿಧಾನಸಭಾ ಚುನಾವಣೆ ಸೇರಿದಂತೆ  ಹಲವು ಸಂದರ್ಭದಲ್ಲಿ ರಾಹುಲ್ ಗಾಂಧಿಯ ಭಾಷಣ ಸಾಕಷ್ಟು ಟ್ರೋಲ್ ಆಗಿದ್ದಲ್ಲದೇ ಟೀಕೆಗೆ ಗುರಿಯಾಯಿತು. ರಾಹುಲ್ ಗಾಂಧಿಯ ಪ್ರತಿ ಮಾತೂ ವಿವಾದದ ಕೇಂದ್ರ ಬಿಂದುವಾಗ  ತೊಡಗಿತು. ವಿಶ್ವೇಶ್ವರಯ್ಯ ಎಂಬುದನ್ನು ಉಚ್ಛರಿಸಲು ಸೋತಿದ್ದು, ಇವನರ್ವಾ ಎಂಬ ವಚನ, ಆಲೂಗಡ್ಡೆಯಿಂದ ಚಿನ್ನ ಸೃಷ್ಟಿಸುವ ಹೇಳಿಕೆಗಳಂತಹ ಎಡವಟ್ಟುಗಳೆ ರಾಹುಲ್ ಗೆ ಪಬ್ಲಿಸಿಟಿಗೆ ಕಾರಣವಾದಂತಿದೆ.


 ಇನ್ನು ಬಿಜೆಪಿಗರು ಹಾಗೂ ಮೋದಿ ಫ್ಯಾನ್ ಕ್ಲಬ್‍ಗಳು ರಾಹುಲ್ ಗಾಂಧಿಯ ಮೇಲೆ ಇನ್ನಿಲ್ಲದಷ್ಟು ಜೋಕ್‍ಗಳನ್ನು ಸೃಷ್ಟಿಸಿದವು. ವ್ಯಂಗ್ಯಚಿತ್ರಕಾರರು ಕೂಡ ಸಾಕಷ್ಟು ಟೀಕಿಸಿದರು. ಹೀಗಾಗಿ ಪ್ರತಿನಿತ್ಯ ಒಂದಿಲ್ಲ ಒಂದು ಕಾರಣಕ್ಕಾಗಿ ರಾಹುಲ್ ಗಾಂಧಿ, ಚರ್ಚೆಯ ವಸ್ತುವಾದರು. ಇದೇ ಅವರ ಜನಪ್ರಿಯತೆಗೆ ಕಾರಣವಾಗಿದೆ ಎನ್ನಲಾಗುತ್ತಿದ್ದು, ಹೀಗಾಗಿ ಸರ್ಚ್ ಇಂಜಿನ್‍ಗಳ ಹಾಟ್ ಫೆವರಿಟ್ ಆಗಿ ರಾಹುಲ್ ಪ್ರಧಾನಿಯನ್ನು ಹಿಂದಿಕ್ಕಿದ್ದಾರೆ. 

ಇನ್ನು ಪಂಚ ರಾಜ್ಯಗಳ ಚುನಾವಣೆ ವೇಳೆಯೂ ರಾಹುಲ್ ಗಾಂಧಿ ಸಾಮಾಜಿಕ ಜಾಲತಾಣಗಳಲ್ಲಿ ಇನ್ನಷ್ಟು ಆಕ್ಟಿವ್ ಆಗಿದ್ದು, ಪ್ರಚಾರಕ್ಕೆ ಬಳಸಿಕೊಂಡಿದ್ದರು. ಇದು ಕೂಡ ಅವರಿಗೆ ನೆರವಾಗಿದೆ. ಇವತ್ತಿಗೂ ಟ್ವಿಟ್‍ನಲ್ಲಿ ಪ್ರಧಾನಿ ಮೋದಿ, 44 ಮಿಲಿಯನ್ ಹಿಂಬಾಲಕರನ್ನು ಹೊಂದಿದ್ದರೇ, ರಾಹುಲ್ ಗಾಂಧಿ 7.6 ಮಿಲಿಯನ್ ಪಾಲೋವರ್ಸ್  ಮಾತ್ರಹೊಂದಿದ್ದಾರೆ. ಒಟ್ಟಿನಲ್ಲಿ ಸರ್ಚ್ ಇಂಜಿನ್‍ನಲ್ಲೂ ಮೋದಿ-ರಾಹುಲ್ ಗಾಂಧಿ ಪೈಟ್ ಆರಂಭವಾಗಿದ್ದು, ಪಪ್ಪು ಎಂಬ ಟೀಕೆಯೇ ರಾಹುಲ್ ಜನಪ್ರಿಯತೆಗೆ ನೆರವಾಗಿದ್ದು ಮಾತ್ರ ಅಚ್ಚರಿಯ ಸಂಗತಿ. 
 


ಸಂಬಂಧಿತ ಟ್ಯಾಗ್ಗಳು

#India #Narendra Modi #Rahul Gandhi #Popularity


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ