ಐಎಂಎಫ್‍ನ ಅರ್ಥಶಾಸ್ತ್ರಜ್ಞೆಯಾಗಿ ಗೀತಾಗೋಪಿನಾಥ ಅಧಿಕಾರ ಸ್ವೀಕಾರ

Geetha Gopinanth of Karnataka as an economist at IMF

09-01-2019 187

ಅಂತಾರಾಷ್ಟ್ರೀಯ ಹಣಕಾಸು ನಿಧಿಯ ಮುಖ್ಯ ಆರ್ಥಿಕ ತಜ್ಞೆಯಾಗಿ  ಕರ್ನಾಟಕದ ಮೈಸೂರು ಮೂಲದ  ಗೀತಾ ಗೋಪಿನಾಥ ಅಧಿಕಾರ ಸ್ವೀಕರಿಸಿದ್ದಾರೆ. ಈ ಹುದ್ದೆ ಸ್ವೀಕರಿಸಿದ ಮೊದಲ ಮಹಿಳೆ ಎಂಬ ಖ್ಯಾತಿಗೂ ಗೀತಾ ಭಾಜನರಾಗಿದ್ದು, ಕರ್ನಾಟಕದ ಪಾಲಿಗೂ ಇದು ಹೆಮ್ಮೆಯ ವಿಷಯವಾಗಿದೆ. ಐಎಂಎಫ್‍ನ 11 ನೇ ಮುಖ್ಯ ಆರ್ಥಿಕ ತಜ್ಞೆಯಾಗಿ ಗೀತಾಅವರು ಕಾರ್ಯನಿರ್ವಹಿಸಲಿದ್ದು, ಜಾಗತಿಕ ಆರ್ಥಿಕ ಸಂಕಷ್ಟದ ವೇಳೆಯಲ್ಲಿ ಅಧಿಕಾರ ವಹಿಸಿಕೊಂಡಿರುವ ಗೀತಾಗೋಪಿನಾಥ, ಸಾಕಷ್ಟು ನೀರಿಕ್ಷೆ ಮೂಡಿಸಿದ್ದಾರೆ.

ಮೈಸೂರಿನಲ್ಲಿ ಜನಿಸಿದ ಗೀತಾ ಗೋಪಿನಾಥ, ಪ್ರಾಥಮಿಕ ಶಿಕ್ಷಣವನ್ನು  ಸಾಂಸ್ಕøತಿಕ ನಗರಿ ಮೈಸೂರಿನಲ್ಲೆ ಮುಗಿಸಿದ್ದು, ದಿಲ್ಲಿಯ ಸ್ಕೂಲ್ ಆಫ್ ಎಕನಾಮಿಕ್ಸ್ ನಲ್ಲಿ ಮಾಸ್ಟರ್ ಡಿಗ್ರಿ ಪಡೆದಿದ್ದಾರೆ.  ಅಮೆರಿಕಾದ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ  ಇಂಟರ್‍ನ್ಯಾಷನಲ್ ಸ್ಟಡೀಸ್ ಮತ್ತು ಎಕನಾಮಿಕ್ಸ್  ವಿಭಾಗದಲ್ಲಿ ಪ್ರೊಫ್ರೆಸರ್  ಆಗಿ ಕಾರ್ಯ ನಿರ್ವಹಿಸಿದ್ದಾರೆ. 


 ಐಎಂಎಫ್ ಗೆ ನೇಮಕವಾಗುವ ಮೊದಲು ಗೀತಾ ಗೋಪಿನಾಥ, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‍ಗೆ  ಹಣಕಾಸು ಸಲಹೆಗಾರರಾಗಿ ಕಾರ್ಯನಿರ್ವಹಿಸಿದ್ದರು. ಮೂಲತಃ ಕೇರಳದವರಾದ ಗೀತಾ ಗೋಪಿನಾಥ ಪೋಷಕರು ಮೈಸೂರಿನಲ್ಲಿ ವಾಸವಾಗಿದ್ದಾರೆ. 47 ವರ್ಷದ ಗೀತಾ ಗೋಪಿನಾಥ ಸಾಧನೆ ಕರ್ನಾಟಕದ ಜನರ ಪಾಲಿಗೆ ಹೆಮ್ಮೆಯ ಸಂಗತಿಯಾಗಿದೆ. 


ಸಂಬಂಧಿತ ಟ್ಯಾಗ್ಗಳು

#Mysore #IMF #Geetha gopinath #Economist


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ