ಕನ್ನಡ ಸಿನಿಮಾಗಳ ಸುಳ್ಳು ಬಜೆಟ್

 Fake Budget of Kannada Cinema

08-01-2019

ಕನ್ನಡ ಚಿತ್ರರಂಗ ಇತ್ತೀಚಿಗೆ ಅದ್ದೂರಿ ಚಿತ್ರಗಳ ಮೂಲಕವೆ ದೇಶ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಒಂದು ಕಾಲದಲ್ಲಿ ಕಾದಂಬರಿ ಆಧಾರಿತ ಚಿತ್ರಗಳ ಮೂಲಕ, ಸಾಹಿತ್ಯ ಕೃತಿಗಳ ಸಿನಿಮಾಗಳ ಮೂಲಕ ಪ್ರಚಾರ ಪಡೆದುಕೊಳ್ಳುತ್ತಿದ್ದ ಸ್ಯಾಂಡಲವುಡ್‍ನಲ್ಲಿಗ ಈಗ ಏನಿದ್ದರೂ ಕೋಟಿಗಳದ್ದೆ ಮಾತು. ಹೌದು ಇತ್ತೀಚಿನ ಯಾವ ಚಿತ್ರವನ್ನು ಉದಾಹರಣೆಯಾಗಿ  ತೆಗೆದುಕೊಂಡರೂ ಎಲ್ಲವೂ 10 ಕೋಟಿ , 25 ಕೋಟಿ, 50 ಕೋಟಿ ಹೀಗೆ ಕೋಟಿಗಳಾಚೆಯ ಲೆಕ್ಕವನ್ನೆ ಕೊಡುತ್ತದೆ. ಆದರೆ ನಿಜಕ್ಕೂ ಇಷ್ಟು ಕೋಟಿ ವ್ಯಯಿಸಿ ಚಿತ್ರ ನಿರ್ಮಾಣ ಮಾಡಿದ್ದಾರಾ ಅಂದ್ರೆ ಇಲ್ಲ..ಬಹುತೇಕ ಸಿನಿಮಾಗಳಲ್ಲಿ ಸುಮ್ಮನೆ ಪಬ್ಲಿಸಿಟಿಗಾಗಿ ಅದ್ದೂರಿ ಬಜೆಟ್ ಚಿತ್ರ ಎಂಬ ಹಣೆಪಟ್ಟಿ ಅಂಟಿಸಲಾಗುತ್ತದೆ. ಇಲ್ಲಿ ಭಾರಿ ಬಜೆಟ್ ಚಿತ್ರವೆಂಬುದೆ ಸುಳ್ಳು ಅಂತಿದ್ದಾರೆ ಪ್ರೇಕ್ಷಕರು.

ಕಳೆದ ಒಂದೆರಡು ವರ್ಷಗಳಲ್ಲಿ ಸ್ಯಾಂಡಲವುಡ್‍ನಲ್ಲಿ ಸಿನಿಮಾಗಳು, ಕತೆ,ಚಿತ್ರಕತೆ, ನಾಯಕ-ನಾಯಕಿಯ ಕಾರಣಕ್ಕೆ ಸುದ್ದಿಯಾಗಿದ್ದಕ್ಕಿಂತ ಚಿತ್ರದ ಬಜೆಟ್ ಹೆಸರಿನಲ್ಲೆ ಪ್ರಸಿದ್ಧಿ ಪಡೆದುಕೊಳ್ಳುತ್ತಿದೆ. ಆದರೆ ಬಹುತೇಕ ಚಿತ್ರಗಳಲ್ಲಿ ನಿರ್ಮಾಪಕರು ತಾವು ಹೂಡಿದ ಹಣದ ದುಪ್ಪಟ್ಟು ಪಟ್ಟು ಬಂಡವಾಳದ ಲೆಕ್ಕಾಚಾರ ನೀಡುತ್ತಿದ್ದಾರೆ. ಚಿತ್ರ ನಿರ್ಮಾಣಕ್ಕಾಗಿ ಸಾಲವಾಗಿ ತಂದ ಹಣ,ಅದಕ್ಕೆ ಪಾವತಿಸಬೇಕಾಗಿರುವ ಬಡ್ಡಿ, ಚಿತ್ರ ಗಳಿಸಬಹುದಾದ ಆದಾಯ ಎಲ್ಲವನ್ನು ಸೇರಿಸಿ ಲೆಕ್ಕ ನೀಡುವ ನಿರ್ಮಾಪಕರು, ಹೂಡಿದ 10 ಕೋಟಿಗೆ ಇದು 25 ಕೋಟಿಯ ಚಿತ್ರ ಎಂಬ ದೊಡ್ಡಸ್ತಿಕೆಯ ಹೇಳಿಕೆ ನೀಡುತ್ತಿದ್ದಾರೆ. 

ಚಿತ್ರದ ಒಂದು ದೃಶ್ಯವನ್ನು  ಹೊರದೇಶದಲ್ಲಿ ಚಿತ್ರಿಸುವ ಚಿತ್ರತಂಡ, ಸಿನಿಮಾದ ಬಹುತೇಕ ಹಾಡನ್ನು ಹೊರದೇಶದಲ್ಲಿ ಚಿತ್ರಿಸಲಾಗಿದೆ. ಒಂದು ದೃಶ್ಯಕ್ಕಾಗಿ ಬೇರೆಲ್ಲೋ ಹೋಗಲಾಗಿದೆ. ಕಾಸ್ಟ್ಯೂಮ್‍ಗಾಗಿ ಲಕ್ಷಗಟ್ಟಲೇ ಹಣ ಖರ್ಚು ಮಾಡಲಾಗಿದೆ ಎಂದೆಲ್ಲ ಬಡಾಯಿಕೊಚ್ಚಿಕೊಳ್ಳುತ್ತದೆ. ಆದರೆ ವಾಸ್ತವದಲ್ಲಿ ಚಿತ್ರವನ್ನು ದೇಶದಲ್ಲೆ ಶೂಟ್ ಮಾಡಲಾಗಿರುತ್ತದೆ. ಹೀಗೆ ವಿನಾಕಾರಣ ಬಿಲ್ಡಪ್ ಕೊಡುವ ನಿರ್ಮಾಪಕರು, ನಿರ್ದೇಶಕರು, ಚಿತ್ರರಂಗ ಬಾಯಲ್ಲಿ ಹೇಳಿದ್ದರ ಅರ್ಧ ಹಣವನ್ನು ಚಿತ್ರಕ್ಕಾಗಿ ವ್ಯಯಿಸಿರುವುದಿಲ್ಲ. ಚಿತ್ರತಂಡದ ಮಾತು ಕೇಳಿ ಹೊಸ-ಹೊಸ ನೀರಿಕ್ಷೆಗಳ ಜೊತೆ ಚಿತ್ರಮಂದಿರಕ್ಕೆ ಹೋಗುವ ಪ್ರೇಕ್ಷಕರು, ಅದೇ ಮಾಮೂಲಿ ಸ್ಥಳದಲ್ಲಿನ ಚಿತ್ರೀಕರಣ ಕಂಡು ನಿರಾಸೆಯೊಂದಿಗೆ ಹಿಂತಿರುಗುತ್ತಾರೆ. 
4 ಕೋಟಿ ಬಡ್ಡಿಗೆ ತರುವ ನಿರ್ಮಾಪಕ ಅದಕ್ಕೆ ಪಾವತಿಸಬೇಕಿರುವ 50 ಲಕ್ಷ ಬಡ್ಡಿ, ಆ ಚಿತ್ರ ಬಿಡುಗಡೆಯಾದ ಮೇಲೆ ಗಳಿಸಬಹುದಾದ 6-8 ಕೋಟಿ ಲಾಭವನ್ನು ಲೆಕ್ಕ ಹಿಡಿದು 12-15 ಕೋಟಿ ವೆಚ್ಚದ ಲೆಕ್ಕ ನೀಡುತ್ತಿದ್ದಾರೆ. ಇಂತಹ ವರ್ತನೆಯಿಂದಲೇ ಮೊನ್ನೆ-ಮೊನ್ನೆ ಚಿತ್ರರಂಗದ ಭಾರಿ ಬಜೆಟ್ ಚಿತ್ರದ ನಿರ್ಮಾಪಕರ ಮನೆಗಳ ಮೇಲೆ ರೇಡ್ ನಡೆದಿದೆ. ಯಾವುದೆ ವಿಚಾರದಲ್ಲೂ ಪಾರದರ್ಶಕತೆ ಅನುಸರಿಸದೆ ಕೇವಲ ಬಜೆಟ್ ಮಾತ್ರ ಲೆಕ್ಕ ಕೊಡ್ತಿರೋದೆ ಇದಕ್ಕೆಲ್ಲ ಕಾರಣ. 

ಹೀಗಾಗಿ ಕನ್ನಡ ಚಿತ್ರರಂಗದಲ್ಲಿ ಭಾರಿ ಬಜೆಟ್ ಚಿತ್ರವೆಂಬುದು ಒಂದು ಪ್ರಚಾರದ ತಂತ್ರ ಅಂತಿದ್ದಾರೆ ಪ್ರೇಕ್ಷಕರು. ಕೋಟಿ-ಕೋಟಿ ಲೆಕ್ಕಾಚಾರ ನೀಡೋ ನಿರ್ಮಾಪಕರನ್ನು ನಂಬಿ ನಾವು ಥೀಯೇಟರ್ ಗೆ ಹೋಗ್ತೆವೆ. ಆದರೆ ಅಲ್ಲಿ ಅಂತಹ ಶ್ರೀಮಂತಿಕೆಯ ಯಾವ ಕುರುಹು ಇರೋದಿಲ್ಲ. ಅದೇ ಮಾಮೂಲಿ ಸೆಟ್ ಹಾಕಿದ ಮಾರ್ಕೆಟ್, ದೇವಾಲಯ ಹೂವಿನ ಅಲಂಕಾರಗಳಲ್ಲೆ ಚಿತ್ರೀಕರಣ ಮುಗಿಸುವ ನಿರ್ದೇಶಕರು ಸುಮ್ಮನೇ ಕೋಟಿಯ ಕತೆ ಹೇಳ್ತಾರೆ ಅಂತ ಸಿನಿಪ್ರಿಯರು ಗೊಣಗುತ್ತಿದ್ದಾರೆ.


ಸಂಬಂಧಿತ ಟ್ಯಾಗ್ಗಳು

# Fake #Kannada Movie #Big Budget #Sandalwood


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ